alex Certify ಮುಖದ ಮೇಲೆ ಏಳುವ ಬಿಳಿ ಗುಳ್ಳೆಗಳನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಮೇಲೆ ಏಳುವ ಬಿಳಿ ಗುಳ್ಳೆಗಳನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್‌

ಪ್ರತಿಯೊಬ್ಬರೂ ನಿರ್ಮಲವಾದ, ಕಾಂತಿಯುಕ್ತ ಮುಖವನ್ನು ಪಡೆಯಲು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯಿಂದಾಗಿ ಮುಖದ ಚರ್ಮದ ಮೇಲೆ ಸತ್ತ ಜೀವಕೋಶಗಳು ಸಂಗ್ರಹಗೊಳ್ಳುತ್ತವೆ. ಇದು ಕ್ರಮೇಣ ಬಿಳಿ ಗುಳ್ಳೆಗಳ ರೂಪವನ್ನು ಪಡೆಯುತ್ತದೆ. ಇದನ್ನು ಮಿಲಿಯಾ ಎಂದೂ ಕರೆಯುತ್ತಾರೆ.

ಮುಖದ ಮೇಲಿನ ಈ ಬಿಳಿ ಗುಳ್ಳೆಗಳು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಈ ದದ್ದುಗಳು ನಿಮ್ಮ ಕಣ್ಣುಗಳ ಸುತ್ತ ಅಥವಾ ಕೆನ್ನೆಗಳ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವು ಮೊಡವೆಗಳಂತೆ ಬೇಗನೆ ಮಾಯವಾಗುವುದಿಲ್ಲ, ದೀರ್ಘಕಾಲ ಹಾಗೇ ಉಳಿಯುತ್ತವೆ.

ಹಲವಾರು ಪ್ರಯತ್ನಗಳ ನಂತರವೂ ಅವುಗಳನ್ನು ತೊಡೆದುಹಾಕಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಮುಖದ ಸೌಂದರ್ಯವು ಹದಗೆಡುತ್ತದೆ. ಈ ಗುಳ್ಳೆಗಳನ್ನು ಸಂಪೂರ್ಣವಾಗಿ ಮಾಯಮಾಡಬಲ್ಲ ಕೆಲವೊಂದು ಮನೆಮದ್ದುಗಳಿವೆ, ಅವುಗಳನ್ನು ಪ್ರಯತ್ನಿಸಿ ನೋಡಿ.

ಅಲೋವೆರಾ ಜೆಲ್: ಅಲೋವೆರಾ ಜೆಲ್ ಬಳಸುವುದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಆ್ಯಂಟಿಒಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೇರಳವಾಗಿ ಕಂಡುಬರುತ್ತವೆ. ಇದು ಮುಖದ ಮೇಲಿನ ಆ ಗುಳ್ಳೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಅಲೋವೆರಾ ಜೆಲ್ ಅನ್ನು ಗುಳ್ಳೆಗಳ ಮೇಲೆ ಹಚ್ಚಿ ಮತ್ತು ಲಘುವಾಗಿ ಮಸಾಜ್‌ ಮಾಡಿ. ಬೆಳಿಗ್ಗೆ ಎದ್ದ ತಕ್ಷಣ ಸ್ವಚ್ಛ ನೀರಿನಿಂದ ತೊಳೆಯಿರಿ.

ಶ್ರೀಗಂಧ: ಶ್ರೀಗಂಧದಲ್ಲಿ ನಂಜು ನಿರೋಧಕ ಗುಣಗಳಿವೆ. ಬಿಳಿ ಗುಳ್ಳೆಗಳನ್ನು ಶ್ರೀಗಂಧ ನಿವಾರಿಸುತ್ತದೆ. ಜೊತೆಗೆ ಎಣ್ಣೆಯುಕ್ತ ಚರ್ಮ ಮತ್ತು ಮೊಡವೆಗಳಿಂದ ಪರಿಹಾರವನ್ನು ನೀಡುತ್ತದೆ. ಶ್ರೀಗಂಧದ ಪುಡಿಗೆ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು ಒಣಗಿದ ನಂತರ ತೊಳೆಯಿರಿ.

ಮುಖದ ಸ್ವಚ್ಛತೆ: ಬಿಳಿ ಗುಳ್ಳೆಗಳಾದಾಗ ನಿಮ್ಮ ಮುಖದ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪ್ರತಿದಿನ ನಿಮ್ಮ ಮುಖವನ್ನು ಸೌಮ್ಯವಾದ ಸೋಪಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಮೇಲೆ ಧೂಳು ಸೇರಿಕೊಂಡು ಮುಚ್ಚಿರುವ ರಂಧ್ರಗಳು ತೆರೆದುಕೊಳ್ಳುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...