ಎಷ್ಟೇ ಕೆಲಸ ಮಾಡಿದರೂ ಅಡುಗೆ ಮನೆ ಕೆಲಸ ಮುಗಿಯುವುದಿಲ್ಲ ಎಂಬ ಗೋಳು ಎಲ್ಲಾ ಹೆಣ್ಣುಮಕ್ಕಳ ಬಾಯಲ್ಲಿ ಇರುತ್ತದೆ. ಈ ಅಡುಗೆ, ತಿಂಡಿ ಕೆಲಸದಿಂದ ನಮಗೆ ನಮ್ಮ ಬಗ್ಗೆ ಕಾಳಜಿ ವಹಿಸುವುದಕ್ಕಾಗಲಿ ಇನ್ಯಾವುದಾದರೂ ಆಸಕ್ತಿಯ ಕೆಲಸ ಮಾಡುವುದಕ್ಕಾಗಲಿ ಸಮಯ ಸಿಗುವುದಿಲ್ಲ ಎನ್ನುತ್ತಾರೆ ಕೆಲವರು. ಹಾಗಾಗಿ, ಹೇಗೆ ಸುಲಭವಾಗಿ ಅಡುಗೆ ಮನೆ ಕೆಲಸ ಮುಗಿಸಬಹುದು ಎನ್ನುವುದಕ್ಕೆ ಒಂದಷ್ಟು ಟಿಪ್ಸ್ ಇಲ್ಲಿ ಇದೆ ನೋಡಿ.
ನಾಳೆ ಏನು ತಿಂಡಿ, ಅಡುಗೆ ಮಾಡಬೇಕು ಎಂಬುದನ್ನು ಹಿಂದಿನ ದಿನವೇ ಪ್ಲಾನ್ ಮಾಡಿ. ಹಾಗೇ ಆ ಅಡುಗೆ ಮಾಡುವುದಕ್ಕೆ ಬೇಕಾದ ವಸ್ತುಗಳು ಮನೆಯಲ್ಲಿ ಇದೆಯಾ ಎಂದು ನೋಡಿ.
ಇನ್ನು ತರಕಾರಿಗಳನ್ನು ಹಿಂದಿನ ದಿನ ರಾತ್ರಿ ತೊಳೆದು ಕತ್ತರಿಸಿಕೊಂಡು ಒಂದು ಬಾಕ್ಸ್ ಗೆ ಹಾಕಿ ಫ್ರಿಡ್ಜ್ ನಲ್ಲಿಡಿ. ಇದರಿಂದ ಬೆಳಿಗ್ಗೆ ಕಿರಿಕಿರಿ ತಪ್ಪುತ್ತದೆ.
ಕಡಿಮೆ ಪಾತ್ರೆಗಳನ್ನು ಉಪಯೋಗಿಸಿ ಅಡುಗೆ ಮಾಡುವುದನ್ನು ಕಲಿಯಿರಿ. ಆಗ ಪಾತ್ರೆಗಳ ರಾಶಿ ಆಗುವುದು ತಪ್ಪುತ್ತದೆ.
ಮಕ್ಕಳು ಸ್ವಲ್ಪ ದೊಡ್ಡವರಾಗಿದ್ರೆ ಅವರ ಸಹಾಯ ಹಾಗೂ ಗಂಡನ ಸಹಾಯ ಪಡೆದುಕೊಳ್ಳಿ. ಎಲ್ಲರೂ ಒಟ್ಟಿಗೆ ಸೇರಿ ಮಾಡುವುದರಿಂದ ಕೆಲಸ ಬೇಗ ಮುಗಿಯುತ್ತದೆ. ಅವರಿಗೂ ಅಡುಗೆ ಮಾಡುವವರ ಕಷ್ಟ ಗೊತ್ತಾಗುತ್ತದೆ.
ಒಂದೇ ಬಗೆಯ ಅಡುಗೆ ಮಾಡಿ. ಒಬ್ಬೊಬ್ಬರಿಗೆ ಒಂದೊಂದು ಬಗೆ ಮಾಡಬೇಡಿ. ಮಕ್ಕಳಿಗೆ ಆಹಾರದ ಕುರಿತು ತಿಳಿಸಿಕೊಡಿ. ಆಗ ವೇಸ್ಟ್ ಆಗುವುದು ತಪ್ಪುತ್ತದೆ. ನಿಮ್ಮ ಸಮಯವೂ ಉಳಿಯುತ್ತದೆ.