ಮನೆಯಲ್ಲಿಯೇ ವ್ಯವಹಾರ ಶುರು ಮಾಡುವ ಆಲೋಚನೆಯಲ್ಲಿದ್ದರೆ… ಮನೆಯಲ್ಲೇ ಕಡಿಮೆ ಬಂಡವಾಳದಲ್ಲಿ ಬ್ಯುಸಿನೆಸ್ ಶುರು ಮಾಡಿ ಕೈ ತುಂಬ ಹಣ ಸಂಪಾದಿಸುವ ಆಲೋಚನೆಯಲ್ಲಿದ್ದರೆ ನೀವೂ ಈ ಕೆಲ ಬ್ಯುಸಿನೆಸ್ ಶುರು ಮಾಡಬಹುದು.
ಹಸು ಅಥವಾ ಎಮ್ಮೆ ಸಾಕಿದ್ದರೆ ಹಾಲಿನ ವ್ಯವಹಾರವನ್ನು ಪ್ರಾರಂಭಿಸಬಹುದು. 30 ಸಾವಿರ ರೂಪಾಯಿಗಳವರೆಗೆ ಹಸುವಿನ ಬೆಲೆಯಿದೆ. ಒಂದು ಎಮ್ಮೆ ಬೆಲೆ 50 ರಿಂದ 60 ಸಾವಿರ. 2 ಹಸು ಅಥವಾ ಎಮ್ಮೆಯೊಂದಿಗೆ ವ್ಯವಹಾರವನ್ನು ಪ್ರಾರಂಭಿಸಬಹುದು. ಹಾಲು ಮಾರಾಟ ಮಾಡಿ ಅಥವಾ ತುಪ್ಪ, ಬೆಣ್ಣೆ ಮಾರಾಟ ಮಾಡಿ ಹಣ ಗಳಿಸಬಹುದು.
ಹೂವಿನ ವ್ಯವಹಾರವನ್ನು ಕೂಡ ಪ್ರಾರಂಭಿಸಬಹುದು. ಪ್ರತಿ ದಿನವೂ ಹೂವಿಗೆ ಬೇಡಿಕೆಯಿದೆ. ಮನೆಯ ಸಣ್ಣ ಜಾಗದಲ್ಲಿ ಸರಿಯಾದ ರೀತಿಯಲ್ಲಿ ಹೂ ಬೆಳೆದು ಮಾರಾಟ ಮಾಡಬಹುದು. ಆನ್ಲೈನ್ ನಲ್ಲಿ ಕೂಡ ನೀವು ಹೂ ಮಾರಾಟ ಮಾಡಬಹುದು. ಸೂರ್ಯಕಾಂತಿ, ಗುಲಾಬಿ, ಮಾರಿಗೋಲ್ಡ್ ಕೃಷಿ ಕೈತುಂಬ ಲಾಭ ನೀಡುವ ಕೃಷಿ.
ಜೇನುಸಾಕಣೆ ವ್ಯವಹಾರವನ್ನು ಸಹ ಪ್ರಾರಂಭಿಸಬಹುದು. ಕೇವಲ ಒಂದರಿಂದ ಒಂದೂವರೆ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ವ್ಯವಹಾರವನ್ನು ಪ್ರಾರಂಭಿಸಬಹುದು. ಇದಕ್ಕೆ ತರಬೇತಿ ಪಡೆಯಬೇಕು.
ತರಕಾರಿಗಳನ್ನು ಬೆಳೆಸುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ಇದಕ್ಕೆ ಜಾಗದ ಅಗತ್ಯವಿದೆ. ಕೃಷಿಗಾಗಿ ಸರ್ಕಾರ ಹಣದ ಸಹಾಯ ಮಾಡುತ್ತದೆ.
ಕೋಳಿ ಸಾಕಾಣಿಕೆ ಕೂಡ ಶುರು ಮಾಡಬಹುದು. ಇದಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿದೆ. ಸರ್ಕಾರದ ಯೋಜನೆಯಡಿ ಸಾಲ ತೆಗೆದುಕೊಂಡು ವ್ಯವಹಾರ ಶುರು ಮಾಡಬಹುದು.
ಬಿದಿರಿನ ಕೃಷಿಯ ಮೂಲಕವೂ ಉತ್ತಮ ಹಣವನ್ನು ಗಳಿಸಬಹುದು. ಬಿದಿರಿನ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ಆನ್‌ಲೈನ್ ಪೋರ್ಟಲ್ ರಚಿಸಿ ನೀವು ಇದನ್ನು ಮಾರಾಟ ಮಾಡಬಹುದು.
ಮನೆಯ ತೋಟದಲ್ಲಿಯೇ ಅಣಬೆ ಕೃಷಿಯನ್ನು ಪ್ರಾರಂಭಿಸಬಹುದು. ಕಡಿಮೆ ಹೂಡಿಕೆ ಮತ್ತು ಕಡಿಮೆ ಶ್ರಮದಲ್ಲಿ ನೀವು 50 ಸಾವಿರದವರೆಗೆ ಗಳಿಸಬಹುದು.
ಇದಲ್ಲದೆ ಅಲೋವೆರಾ ಗಿಡಗಳನ್ನು ಬೆಳೆಸುವ ಮೂಲಕ ವ್ಯವಹಾರ ಶುರು ಮಾಡಬಹುದು. ಕೇವಲ 10 ಸಾವಿರ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ನೀವು ಸುಮಾರು 2500 ಸಸಿಗಳನ್ನು ನೆಡಬಹುದು.