ಶುಗರ್ ಕಂಟ್ರೋಲಿಂಗ್ ನಲ್ಲೂ ಶಾರ್ಟ್ ಟರ್ಮ್ ಮತ್ತು ಲಾಂಗ್ ಟರ್ಮ್ ವಿಧಾನಗಳಿವೆ. ಶಾರ್ಟ್ ಟರ್ಮ್ ನಲ್ಲಿ ನೀವು ಗೋಧಿ, ಅಕ್ಕಿ ಮತ್ತು ಸಕ್ಕರೆ ಸೇವನೆ ನಿಲ್ಲಿಸಿದಲ್ಲಿ ಶುಗರ್ ಒಂದು ತಿಂಗಳಲ್ಲೇ ನಿಯಂತ್ರಣಕ್ಕೆ ಬರುತ್ತದೆ. ಇವುಗಳ ಬದಲು ನೀವು ರೊಟ್ಟಿ ಮತ್ತು ಓಟ್ಸ್ ತಿನ್ನಬಹುದು.
ಸುದೀರ್ಘ ಸಮಯದವರೆಗೂ ಸಕ್ಕರೆ ಖಾಯಿಲೆ ನಿಯಂತ್ರಿಸಲು ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಅದಕ್ಕಾಗಿ ಧ್ಯಾನ, ಪ್ರಾಣಾಯಾಮ ಅತ್ಯಂತ ಸೂಕ್ತ. ಪ್ರತಿದಿನ ವ್ಯಾಯಾಮ, ವಾಕಿಂಗ್, ಜಾಗಿಂಗ್ ಮಾಡಬೇಕು. ಕೆಲವರು ಶಾರ್ಟ್ ಟರ್ಮ್ ವಿಧಾನ ಅನುಸರಿಸ್ತಾರೆ, ಆದ್ರೆ ಅವರಲ್ಲಿ ಒತ್ತಡ ಅಧಿಕವಾಗಿರುವುದರಿಂದ ಶುಗರ್ ನಿಯಂತ್ರಣಕ್ಕೆ ಬರುವುದಿಲ್ಲ.
ಕೇವಲ ಫಲಾಹಾರದಿಂದ ಮಧುಮೇಹ ನಿಯಂತ್ರಣ ಅಸಾಧ್ಯ, ಆದ್ರೆ ಈ ಮೂಲಕ ಉತ್ತಮ ಡಯಟ್ ಮಾಡಿದಂತಾಗುತ್ತದೆ. ಆಯುರ್ವೇದ ಪ್ರಕ್ರಿಯೆಯಲ್ಲಿ ಶರೀರದ ಡಿಟಾಕ್ಸಿಫಿಕೇಶನ್ ಆಗುತ್ತದೆ. ಫಲಾಹಾರ ಡಯಟ್ ಆರಂಭಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ, ಇಲ್ಲವಾದಲ್ಲಿ ನಿಮಗೆ ತಲೆ ತಿರುಗುವಿಕೆ ಶುರುವಾಗಬಹುದು.
ಸಕ್ಕರೆ ಖಾಯಿಲೆಗೆ ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆ ಕೂಡ ನೀಡಲಾಗುತ್ತದೆ. ನೀವು ಬರೀ ಲಿಕ್ವಿಡ್ ಡಯಟ್ ಕೂಡ ಮಾಡುವಂತಿಲ್ಲ, ಯಾಕಂದ್ರೆ ಅದು ಸರಿಯಾದ ಕ್ರಮವಲ್ಲ. ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಸೇವನೆ ಕೂಡ ಹಿತವಲ್ಲ. ಆಲೂಗಡ್ಡೆ ಮತ್ತು ಗೋಬಿ ಬಿಟ್ಟು ಬೇರೆ ಎಲ್ಲಾ ತರಕಾರಿಯನ್ನು ನೀವು ಸೇವಿಸಬಹುದು. ಸೌತೆಕಾಯಿ, ಈರುಳ್ಳಿ, ಟೊಮ್ಯಾಟೋ ಕೂಡ ತಿನ್ನಬಹುದು.