ದೀಪಾವಳಿಯಲ್ಲಿ ಪಟಾಕಿ ಹಚ್ಚುವುದು ಮಕ್ಕಳಿಗೆ ಹೆಚ್ಚಿನ ಖುಷಿ ಕೊಡುತ್ತದೆ. ಆದರೆ, ಎಚ್ಚರಿಕೆ ವಹಿಸದಿದ್ದರೆ ಗಂಭೀರ ಪರಿಣಾಮ ಬೀರುತ್ತದೆ.
ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚುವುದು ಸಾಮಾನ್ಯ. ಅದರಲ್ಲಿಯೂ ಮಕ್ಕಳಿಗೆ ಪಟಾಕಿ ಎಂದರೆ ಎಲ್ಲಿಲ್ಲದ ಪ್ರೀತಿ. ಪಟಾಕಿ ಹಚ್ಚುವ ಸಂದರ್ಭದಲ್ಲಿ ಅನೇಕರು ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಾರೆ. ಕೈ ಸುಟ್ಟುಕೊಳ್ಳುತ್ತಾರೆ. ಪಟಾಕಿ ಹಚ್ಚುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು.
ಪಟಾಕಿ ಹಚ್ಚುವಾಗ ಆದಷ್ಟು ಕಾಟನ್ ಬಟ್ಟೆಗಳನ್ನು ಧರಿಸಿ. ಮನೆಯೊಳಗೆ ಪಟಾಕಿ ಸಿಡಿಸದೇ ಬಯಲು ಪ್ರದೇಶದಲ್ಲಿ ಪಟಾಕಿಯನ್ನು ಸಿಡಿಸಿ. ಕಡಿಮೆ ಶಬ್ದದ ಪಟಾಕಿಗಳನ್ನು ಸಿಡಿಸಿ. ಕಣ್ಣಿಗೆ ಕಿಡಿ ತಗುಲಿ ಹಾನಿಯಾದಲ್ಲಿ ತಕ್ಷಣವೇ ಆಸ್ಪತ್ರೆಗೆ ಹೋಗಿ.
ಉದ್ದನೆಯ ಊದು ಬತ್ತಿಯನ್ನು ಬಳಸಿಕೊಂಡು ಪಟಾಕಿ ಸಿಡಿಸುವುದು ಒಳ್ಳೆಯದು. ಬೆಂಕಿ ಸಮೀಪದ ಸ್ಥಳದಲ್ಲಿ ಪಟಾಕಿ ಇಡುವುದು ಒಳ್ಳೆಯದಲ್ಲ. ಕೈಯಲ್ಲಿ ಪಟಾಕಿ ಸಿಡಿಸದೇ ದೂರದಿಂದ ಪಟಾಕಿ ಸಿಡಿಸುವುದು ಒಳ್ಳೆಯದು. ಅರ್ಧ ಸುಟ್ಟ ಪಟಾಕಿಯನ್ನು ಕೈನಿಂದ ಎತ್ತಿ ಹಾಕಲು ಹೋಗಬೇಡಿ. ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಜೊತೆಗಿರಲಿ. ಸುರಕ್ಷತೆಗೆ ಆದ್ಯತೆ ನೀಡಿ. ಇಲ್ಲವಾದರೆ, ಹಬ್ಬದ ಸಂಭ್ರಮ ಮರೆಯಾಗಿ ಆಸ್ಪತ್ರೆ ಬಾಗಿಲು ಕಾಯಬೇಕಾದೀತು.