ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆಯಿದು. ಹಾಸಿಗೆ ಮೇಲೆ ಎಷ್ಟು ಹೊರಳಾಡಿದ್ರೂ ನಿದ್ರೆ ಮಾತ್ರ ಹತ್ತಿರ ಸುಳಿಯೋದಿಲ್ಲ. ನೀವೂ ಇಂಥ ಸಮಸ್ಯೆಯಿಂದ ಬಳಲುತ್ತಿದ್ದರೆ ಕೆಲವೊಂದು ನಿಯಮಗಳನ್ನು ನಿಯಮಿತವಾಗಿ ಪಾಲಿಸಿ. ಸುಲಭವಾಗಿ ನಿದ್ರೆ ನಿಮ್ಮನ್ನು ಆವರಿಸುತ್ತೆ.
ಯೋಗ ಮಾಡುವುದ್ರಿಂದ ಆರಾಮದ ಅನುಭವವಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಸುಖ ನಿದ್ರೆ ಬರುತ್ತದೆ. ಹಾಗಾಗಿ ಪ್ರತಿದಿನ ಯೋಗವನ್ನು ತಪ್ಪದೆ ಮಾಡಿ.
ರಾತ್ರಿ ಮಲಗುವ ಮೊದಲು ಕಾಫಿ ಅಥವಾ ಟೀಯನ್ನು ಕುಡಿಯಬೇಡಿ. ಇದು ರಾತ್ರಿ ನಿದ್ರೆಗೆ ಅಡ್ಡಿಯುಂಟು ಮಾಡುತ್ತದೆ.
ಪ್ರತಿದಿನ ಒಂದೇ ಸಮಯಕ್ಕೆ ನಿದ್ರೆ ಮಾಡಿ. ಏಳುವ ಸಮಯ ಕೂಡ ಒಂದೇ ಆಗಿರಲಿ. ಸಮಯದ ಬದಲಾವಣೆಯಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ತಡ ರಾತ್ರಿಯವರೆಗೆ ಮೊಬೈಲ್ ಹಿಡಿದು ಕುಳಿತುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ತಡ ರಾತ್ರಿಯವರೆಗೆ ಎಚ್ಚರವಿರುವುದ್ರಿಂದ ಸಮಯ ತಪ್ಪಿ ಸರಿಯಾಗಿ ನಿದ್ರೆ ಬರುವುದಿಲ್ಲ.