ಹಬ್ಬ ಹರಿದಿನಗಳಲ್ಲಿ ಸಿಹಿಯಡುಗೆ ಮಾಡುವುದು ಸಾಮಾನ್ಯ. ಹಾಗಾಗಿ ಇಂಥಾ ಸಂದರ್ಭಗಳಲ್ಲಿ ಮಧುಮೇಹ ಹೊಂದಿರುವವರಿಗೆ ಬಹಳ ಇಕ್ಕಟ್ಟಾದ ಸನ್ನಿವೇಶಗಳು ಎದುರಾಗುತ್ತದೆ. ಆದರೆ ಮಧುಮೇಹ ಹೊಂದಿರುವವರಿಗೆ ಒಂದು ಸಿಹಿ ಸುದ್ದಿ ಇದೆ. ನೀವು ಈಗ ಸಿಹಿ ಭಕ್ಷ್ಯವನ್ನು ತ್ಯಜಿಸುವ ಅವಶ್ಯಕತೆ ಇಲ್ಲ. ಆದರೆ ಎಚ್ಚರಿಕೆಯಿಂದ ಆಯ್ಕೆಗಳನ್ನು ಮಾಡಬೇಕು. ಮಧುಮೇಹ ಸ್ನೇಹಿ ಸಾಮಗ್ರಿಗಳಿಂದ ರಚಿಸಿದ ಸಿಹಿ ಖಾದ್ಯವನ್ನು ಆರಿಸಿಕೊಳ್ಳಬೇಕು. ಹಾಗೆ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಮತ್ತು ಆರೋಗ್ಯಕರ, ರುಚಿಕರ ಖಾದ್ಯಗಳನ್ನು ಸೇವಿಸಬಹುದು.
ಕೇವಲ ಸಿಹಿ ತಿನ್ನುವುದರಿಂದ ಮಾತ್ರವೇ ನಿಮ್ಮ ರಕ್ತದ ಸಕ್ಕರೆ ಮಟ್ಟ ಜಾಸ್ತಿಯಾಗುವುದಲ್ಲ. ಬದಲಿಗೆ ನೀವು ಕಾರ್ಬೋಹೈಡ್ರೇಟ್ ಸೇವನೆಯ ಮೇಲೆ ಹೆಚ್ಚು ಗಮನ ಇಟ್ಟುಕೊಳ್ಳಬೇಕು. ಸಕ್ಕರೆ, ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಅನ್ನು ಒಳಗೊಂಡಂತೆ ಕಾರ್ಬೋಹೈಡ್ರೇಟ್‌ಗಳು ರಕ್ತದ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಸಿಹಿತಿಂಡಿಗಳು ಸಾಮಾನ್ಯವಾಗಿ ಡೆಕ್ಸ್ಟ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್ ನಂತಹ ಸರಳ ಸಕ್ಕರೆ ಅಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ.
ಅವು ರಕ್ತದಲ್ಲಿನ ಸಕ್ಕರೆ ಅಂಶದ ಏರಿಕೆಗೆ ಕಾರಣವಾಗಬಹುದು. ಆದರೂ ಬರೀ ಸಕ್ಕರೆಯನ್ನು ದೂರ ಇಡುವುದಕ್ಕೆ ಹೊರತಾದ ಕೆಲವು ಅಂಶಗಳೂ ಇವೆ ಅನ್ನುವುದನ್ನು ನೀವು ಗಮನಿಸತಕ್ಕದ್ದು. ಸಕ್ಕರೆಯ ಬದಲಿಗೆ ಬಳಸಬಹುದಾದ ಕೆಲವು ಸಾಮಾಗ್ರಿಗಳು ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಬಹುದು. ಅವುಗಳು ಕರುಳಿನ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಉದ್ದೀಪಿಸುವ ಸಾಧ್ಯತೆ ಇದೆ ಮತ್ತು ಅದು ಹಸಿವು ಹಾಗೂ ರಕ್ತದ ಸಕ್ಕರೆ ಅಂಶ ನಿಯಂತ್ರಣದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ.
ಆಹಾರದ ವಿಚಾರದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಅಂತ ಇದೆ. ಆ ಜಿಐ ಅನ್ನು ಅರ್ಥಮಾಡಿಕೊಳ್ಳುವುದರಿಂದ ನೀವು ಯಾವ ಆಹಾರ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಲು ಸಹಾಯ ಆಗುತ್ತದೆ. ಜಿಐ ಇಂಡೆಕ್ಸ್ ಆಹಾರದ ಸ್ಕೋರಿಂಗ್ ವ್ಯವಸ್ಥೆಯಾಗಿದ್ದು, ಅದು ನಿಗದಿ ಆಹಾರವು ನಿಮ್ಮ ಸಕ್ಕರೆ ಮಟ್ಟವನ್ನು ಎಷ್ಟು ಹೆಚ್ಚಿಸಬಲ್ಲದು ಎಂಬುದನ್ನು ತಿಳಿಸುತ್ತದೆ. ಆದ್ದರಿಂದ ಕಡಿಮೆ ಜಿಐ ಇಂಡೆಕ್ಸ್ ಹೊಂದಿರುವ ಆಹಾರ ಆರೋಗ್ಯಕರ ಆಹಾರವಾಗಿದೆ. ಆದರೆ ಕೆಲವು ಹೆಚ್ಚಿನ ಜಿಐ ಇಂಡೆಕ್ಸ್ ಇರುವ ಆಹಾರ ಪದಾರ್ಥಗಳನ್ನು ನೀವು ಸಾಂದರ್ಭಿಕವಾಗಿ, ಹಿತಮಿತವಾಗಿ ಸ್ವೀಕರಿಸಬೇಕಾಗುತ್ತದೆ. ಉದಾಹರಣೆಗೆ ಐಸ್ ಕ್ರೀಮ್‌ಗಳು, ಚಾಕೊಲೇಟ್‌ಗಳು, ಸಂಸ್ಕರಿಸಿದ ಹಿಟ್ಟು, ಸಿಹಿತಿಂಡಿಗಳು ಇತ್ಯಾದಿ ಸರಳ ಕಾರ್ಬೋಹೈಡ್ರೇಟ್ ಪದಾರ್ಥಗಳು. ಈ ಗ್ಲೂಕೋಸ್ ಹೊಂದಿರುವ ಖಾದ್ಯಗಳು ನಿಮ್ಮ ಸಕ್ಕರೆ ಅಂಶದ ಸಮತೋಲನವನ್ನು ಕೆಡಿಸಲು ಸಶಕ್ತವಾಗಿವೆ.
ಈ ಕುರಿತು ಅಬಾಟ್ ನ ನ್ಯೂಟ್ರಿಷನ್ ಬಿಸಿನೆಸ್ ನ ಸಹಾಯಕ ವೈದ್ಯಕೀಯ ನಿರ್ದೇಶಕ ಡಾ. ಇರ್ಫಾನ್ ಶೇಖ್ ಅವರು, “ಮಧುಮೇಹವನ್ನು ನಿರ್ವಹಿಸುವುದು ಎಂದರೆ ಖಾದ್ಯಗಳನ್ನು ತಿನ್ನುವುದರಿಂದ ಹಿಂದೆ ಸರಿಯುವುದು ಮಾತ್ರವೇ ಅಲ್ಲ, ಆಹಾರದಲ್ಲಿ ಸೂಕ್ತವಾದ ಆಯ್ಕೆಯನ್ನು ಮಾಡುವುದು. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿರ್ವಹಿಸುವುದು ಹೇಗೆ ಎಂದರೆ ನಿಮ್ಮ ಊಟದ ಜಿಐ ಅನ್ನು ಕಡಿಮೆ ಮಾಡುವ ಸೂಕ್ತವಾದ ಸಾಮಾಗ್ರಿಗಳನ್ನು ಕಂಡುಹಿಡಿಯುವುದು. ಸರಿಯಾದ ಪ್ರಮಾಣದಲ್ಲಿ ಸೂಕ್ತವಾದ ಸಾಮಗ್ರಿಗಳನ್ನು ಬಳಸುವ ಮೂಲಕ ನಿಮ್ಮ ಊಟದ ಜಿಐ ಅನ್ನು ನೀವು ನಿಯಂತ್ರಣ ಮಾಡಬಹುದು. ಅದರಿಂದ ನಿಮ್ಮ ಗ್ಲೂಕೋಸ್ ಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು” ಎನ್ನುತ್ತಾರೆ.
ಆಹಾರದಲ್ಲಿ ಹೆಚ್ಚು ಫೈಬರ್ (ಸಜ್ಜೆ, ಜೋಳ ಮತ್ತು ರಾಗಿ), ಗೋಧಿ ಹಿಟ್ಟಿನ ಬ್ರೆಡ್, ಹಣ್ಣುಗಳು, ತರಕಾರಿಗಳು ಮತ್ತು ದ್ವಿದಳ ಧಾನ್ಯಗಳನ್ನು (ಬೇಳೆಗಳನ್ನು) ಬಳಸಬೇಕು. ಅವುಗಳು ನಿಮ್ಮ ಸರಳ ಕಾರ್ಬೋಹೈಡ್ರೇಟ್ ಸೇವನೆಯನ್ನು ಸಮತೋಲನಗೊಳಿಸುವುದರಿಂದ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕಾಪಾಡುವುದರಿಂದ ಮಧುಮೇಹಿಗಳು ಆಹಾರದಲ್ಲಿ ಬಳಸಿಕೊಳ್ಳಲೇಬೇಕು.
ನಿಮ್ಮ ಇಷ್ಟದ ಆಹಾರಗಳನ್ನು ಸೇವಿಸುತ್ತಲೇ ಕಾರ್ಬೋಹೈಡ್ರೇಟ್ ಸೇವನೆಯನ್ನು ನಿಯಂತ್ರಿಸುವ ಮತ್ತೊಂದು ಉತ್ತಮ ಮಾರ್ಗವೆಂದರೆ ಡಯಾಬಿಟೀಸ್ ಸ್ಪೆಸಿಫಿಕ್ ನ್ಯೂಟ್ರಿಷನ್ (ಡಿಎಸ್‌ಎನ್). ಡಿಎಸ್‌ಎನ್ ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಸಮತೋಲಿತ ಆಹಾರ ಸೇವನೆ ಸಾಧ್ಯವಾಗಿಸುತ್ತದೆ ಮತ್ತು ಊಟದ ನಂತರದ ರಕ್ತದ ಸಕ್ಕರೆ ಅಂಶದ ಹೆಚ್ಚಳವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಜೊತೆಗೆ ನೀವು ಉಲ್ಲಾಸದಿಂದ ಇರುವಂತೆ ಮಾಡುತ್ತದೆ.
ಈ ಕುರಿತು ಬೆಂಗಳೂರಿನ ಲೈಫ್‌ಕೇರ್ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್ ನ ಸೀನಿಯರ್ ಕನ್ಸಲ್ಟೆಂಟ್ ಫಿಸಿಶಿಯನ್ ಮತ್ತು ಮಧುಮೇಹ ತಜ್ಞ ಪ್ರೊ (ಡಾ) ಎಲ್. ಶ್ರೀನಿವಾಸಮೂರ್ತಿ ಅವರು, “ಮಧುಮೇಹವನ್ನು ನಿರ್ವಹಿಸಲು ಉತ್ತಮ ಆಹಾರ ಸೇವನೆ ಬಹಳ ಮುಖ್ಯ. ಡಯಾಬಿಟೀಸ್ ಸ್ಪೆಸಿಫಿಕ್ ನ್ಯೂಟ್ರಿಷನ್ (ಡಿಎಸ್ಎನ್) ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ದೈನಂದಿನ ಊಟದಲ್ಲಿ ಅವಶ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ವಿಶೇಷ ಪೌಷ್ಟಿಕಾಂಶ ಪಾನೀಯಗಳನ್ನು ಸೇವಿಸುವುದರಿಂದ ಪೋಷಕಾಂಶ ಕೊರತೆಯನ್ನು ಸರಿತೂಗಿಸಬಹುದು. ಜೊತೆಗೆ ಉಲ್ಲಾಸದಿಂದ ಇರುವಂತೆ ಮತ್ತು ಊಟದ ನಂತರ ಗ್ಲೂಕೋಸ್ ನಿಯಂತ್ರಣ ಮಾಡುವಂತೆ ನೋಡಿಕೊಳ್ಳಬಹುದು. ವಿಶೇಷವಾಗಿ ರಕ್ತದ ಸಕ್ಕರೆ ಅಂಶಗಳ ಹೆಚ್ಚಳದ ಕುರಿತು ಚಿಂತಿಸದೆ ಹಬ್ಬಗಳನ್ನು ಸಂಭ್ರಮಿಸಲು ನಿಮಗೆ ಅನುವು ಮಾಡಿಕೊಡುತ್ತದೆ” ಎಂದು ಹೇಳುತ್ತಾರೆ.
ಡಿಎಸ್ಎನ್ ಮಧುಮೇಹಿಗಳಿಗೆ ಹೇಗೆ ಸಹಾಯ ಮಾಡುತ್ತದೆ ?
ಡಯಾಬಿಟೀಸ್ ಸ್ಪೆಸಿಫಿಕ್ ನ್ಯೂಟ್ರಿಷನ್ ಮಧುಮೇಹಿಗಳು ಯಾವುದೇ ಗಿಲ್ಟ್ ಇಲ್ಲದೆ ಸಿಹಿ ತಿನ್ನಲು ಅವಕಾಶ ಮಾಡಿಕೊಡುತ್ತದೆ. ಡಿಎಸ್ಎನ್ ಉತ್ಪನ್ನಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಅವುಗಳನ್ನು ಹೆಚ್ಚು ಕಾರ್ಬ್, ಹೆಚ್ಚು ಸಕ್ಕರೆ ಇರುವ ಖಾದ್ಯಗಳ ಬದಲಿಗೆ ಬಳಸಬಹುದಾಗಿದೆ