ಕೂದಲಿಗೆ ಎಣ್ಣೆ ಹಚ್ಚುವುದೆಂದರೆ ನಿಮಗೆ ಉದಾಸೀನವೇ, ಎಣ್ಣೆ ಹಾಕಿದರೆ ತಲೆನೋವು, ತಲೆಭಾರ ಎನ್ನುತ್ತೀರೇ…? ಈ ತಪ್ಪು ಕಲ್ಪನೆ ಬಿಟ್ಟು ಅರೋಗ್ಯದ ದೃಷ್ಟಿಯಿಂದ ಯೋಚಿಸಿ. ಉಗುರು ಬೆಚ್ಚಗಿನ ಬಿಸಿಯ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ಅದ್ಭುತ ಪ್ರಯೋಜನಗಳಿವೆ.
ಇದರಿಂದ ರಕ್ತ ಸಂಚಾರ ಸರಾಗವಾಗಿ ನಡೆದು ಕೂದಲಿಗೆ ಪೋಷಕಾಂಶ ದೊರೆಯುತ್ತದೆ. ಕೂದಲು ಬಲಗೊಂಡು ವೇಗವಾಗಿ ಬೆಳೆಯುತ್ತದೆ. ಶಾಂಪೂ ಮತ್ತು ಕಂಡಿಷನರ್ ಕೆಲವೊಮ್ಮೆ ನೆತ್ತಿಯ ಚರ್ಮಕ್ಕೆ ಹಾನಿ ಮಾಡಬಹುದು. ಅದರೆ ಎಣ್ಣೆಯ ಮಸಾಜ್ ಅದನ್ನು ಸರಿಪಡಿಸುತ್ತದೆ. ನೆತ್ತಿಯ ಮೇಲೆ ಕಾಣಿಸಿಕೊಳ್ಳುವ ತಲೆಹೊಟ್ಟು ಸಮಸ್ಯೆಯನ್ನೂ ಇದು ನಿವಾರಿಸುತ್ತದೆ. ನೆತ್ತಿಯಲ್ಲಿರುವ ಸೆಬಾಸಿಯಸ್ ಗ್ರಂಥಿಗಳು ನೈಸರ್ಗಿಕ ಎಣ್ಣೆ ಉತ್ಪಾದನೆಗೆ ಉತ್ತೇಜನ ನೀಡುತ್ತವೆ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
ಬಿಸಿ ಎಣ್ಣೆಯಿಂದ ನಿಮ್ಮ ತಲೆ ಹಾಗೂ ಕೂದಲಿನ ಮೇಲೆ ರಕ್ಷಣಾತ್ಮಕ ಪೊರೆ ರೂಪಗೊಂಡು ಇದು ಸೂರ್ಯನ ಯುವಿ ಕಿರಣಗಳಿಂದ ಕೂದಲಿಗೆ ಹಾನಿ ಆಗದಂತೆ ತಡೆಯುತ್ತದೆ. ಕೂದಲು ಒಣಗದಂತೆ ನೋಡಿಕೊಳ್ಳುತ್ತದೆ. ಕವಲೊಡೆಯುವುದು ನಿಂತು, ಹೊಳಪು ಪಡೆದುಕೊಳ್ಳುತ್ತದೆ.
ಬಿಸಿ ಎಣ್ಣೆ ರಾತ್ರಿ ಹಾಕಿ ಬೆಳಿಗ್ಗೆ ತಲೆ ಸ್ನಾನ ಮಾಡುವುದು ಉತ್ತಮ ವಿಧಾನ. ಇಲ್ಲವಾದರೆ ಕನಿಷ್ಠ 4 ಗಂಟೆ ಹೊತ್ತು ಎಣ್ಣೆ ತಲೆಯಲ್ಲಿರಲಿ.