alex Certify ಬೆರಳುಗಳ ಚರ್ಮ ಸಿಪ್ಪೆ ಸುಲಿಯಲು ಕಾರಣ ಮತ್ತು ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಳುಗಳ ಚರ್ಮ ಸಿಪ್ಪೆ ಸುಲಿಯಲು ಕಾರಣ ಮತ್ತು ಪರಿಹಾರ

ಕೆಲವರ ಬೆರಳಿನ ತುದಿಯಲ್ಲಿ ಚರ್ಮದ ಸಿಪ್ಪೆ ಸುಲಿದಿರುತ್ತದೆ. ಇದು ತುಂಬಾ ಕಿರಿ ಕಿರಿ ಮತ್ತು ನೋವಿನಿಂದ ಕೂಡಿರುತ್ತದೆ. ಈ ಸಮಸ್ಯೆ ಹಲವು ಕಾರಣಗಳಿಂದ ಉಂಟಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸುವ ಪರಿಹಾರಗಳನ್ನು ತಿಳಿದುಕೊಳ್ಳಿ.

-ಅತಿಯಾಗಿ ಕೈ ತೊಳೆಯುವುದರಿಂದ ಚರ್ಮದ ತೇವಾಂಶ ಕಳೆದುಕೊಂಡು ಡ್ರೈ ಆಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು ಉಂಟಾಗಿ ಬೆರಳುಗಳ ತುದಿಯಲ್ಲಿ ಸಿಪ್ಪೆ ಏಳುತ್ತದೆ. ಹಾಗಾಗಿ ಆಗಾಗ ಕೈ ತೊಳೆಯಬೇಡಿ, ಹಾಗೇ ಕೈ ತೊಳೆದಾಗ ಎಣ್ಣೆ ಹಚ್ಚಿಕೊಳ್ಳಿ.

-ಸೂರ್ಯನ ಬಿಸಿಲಿಗೆ ಹೆಚ್ಚಾಗಿ ಕೈಗಳನ್ನು ಒಡ್ಡಿಕೊಳ್ಳಬೇಡಿ. ಇದರಿಂದ ಕೂಡ ಚರ್ಮ ಡ್ರೈ ಆಗಿ ಸಿಪ್ಪೆ ಸುಲಿಯುತ್ತದೆ. ಹೊರಗಡೆ ಹೋಗುವಾಗ ಅಲೋವೆರಾ ಜೆಲ್ ಹಚ್ಚಿ.

-ಕೃಷಿ ಕೆಲಸ ಮಾಡುವವರು ಕೈಗಳ ಚರ್ಮಕ್ಕೆ ಹಾನಿಕಾರಕ ರಾಸಾಯನಿಕಗಳು ತಗಲುವುದರಿಂದ ಚರ್ಮದ ಸಿಪ್ಪೆ ಏಳುತ್ತದೆ. ಹಾಗಾಗಿ ಈ ಕೆಲಸ ಮಾಡುವವರು ಕೈಗಳಿಗೆ ಗ್ಲೌಸ್ ಧರಿಸಿ ಮತ್ತು ಕೈಗಳನ್ನು ವಾಶ್ ಮಾಡಿ ಕೊಬ್ಬರಿ ಎಣ್ಣೆ ಹಚ್ಚಿ.

-ಬೆರಳುಗಳನ್ನು ಚೀಪುವುದರಿಂದ ಮತ್ತು ಕೆಲವರು ಒತ್ತಡಕ್ಕೆ ಸಿಲುಕಿ ಬೆರಳುಗಳನ್ನು ಕಚ್ಚುವುದರಿಂದ ಸಿಪ್ಪೆ ಸುಲಿಯುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಬಿಟ್ಟು ಬಿಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...