ದೀರ್ಘಾಯುಷಿಗಳಾಗಬೇಕು ಎಂಬುದು ಎಲ್ಲರ ಬಯಕೆ. ಆದರೆ ವರ್ಷ 30-40 ಕ್ಕೇ ಹೃದಯಾಘಾತ – ಸಾವು ಎಂಬ ಸುದ್ದಿಗಳನ್ನು ನಾವು ಕೇಳುತ್ತೇವೆ. ಹಾಗಾದರೆ ಶತಾಯುಷ್ಯದ ಗುಟ್ಟೇನು? ನಾವೂ ದೀರ್ಘಾಯುಷಿಗಳಾಗಲು ಏನು ಮಾಡಬೇಕು.
ಸ್ವತಃ 100 ವರ್ಷ ಮೇಲ್ಪಟ್ಟು ಬದುಕಿದ ಜನರನ್ನೇ ಮಾತನಾಡಿಸಿ ಅವರ ಆಹಾರ ಪದ್ಧತಿ, ಜೀವನ ಕ್ರಮಗಳ ಮೇಲೊಂದು ಬೆಳಕು ಚೆಲ್ಲಲಾಗಿದೆ. ಗಮನಿಸಿ, ಇದು ಭಾರತದ ಅಜ್ಜ-ಅಜ್ಜಿಯರ ಮಾತಲ್ಲ, ಪಾಶ್ಚಾತ್ಯರ ಅನಿಸಿಕೆಗಳು.
ವೈನ್, ಚಾಕಲೇಟ್ ಮತ್ತು ಐಸ್‌ಕ್ರೀಮ್ ನೀವಂದುಕೊಂಡಿದ್ದಕ್ಕಿಂತ ಹೆಚ್ಚು ರುಚಿ ಇದರಲ್ಲಿದೆ. ಆಯಸ್ಸನ್ನು ಹೆಚ್ಚಿಸುವಲ್ಲಿ ನೆರವಾಗಿವೆ ಎನ್ನುತ್ತಾರೆ ಶತಾಯುಷಿಗಳು. 101 ವರ್ಷದ ಅಜ್ಜಿಯೊಬ್ಬರು, ಪ್ರತಿದಿನ ವೋಡ್ಕಾ ಸೇವಿಸುತ್ತೇನೆ, ಕಠಿಣ ಶ್ರಮ ಪಡುತ್ತೇನೆ, ಸಿಗರೇಟ್ ಮುಟ್ಟಲ್ಲ ಎಂದು ಹೇಳಿದ್ದಾರೆ. ಸಾಕಷ್ಟು ಚಹಾ ಸೇವಿಸುತ್ತೇನೆ ಎಂದಿದ್ದಾರೆ ಇನ್ನೊಬ್ಬ ಅಜ್ಜಿ. ಬಾಳೆಹಣ್ಣು, ಡಾರ್ಕ್ ಚಾಕಲೇಟ್, ಐಸ್‌ಕ್ರೀಮ್ ತಿನ್ನುತ್ತೇನೆ. ಬೆಳಗ್ಗಿನ ಉಪಹಾರವನ್ನು ಚೆನ್ನಾಗಿ ಸೇವಿಸುತ್ತೇನೆ ಎಂದಿದ್ದಾರೆ 110 ರ ಅಜ್ಜ.
ಪ್ರತಿದಿನ ತುಸು ಬಿಯರ್ ಕುಡಿವ ಅಜ್ಜಂದಿರೂ ಇದ್ದಾರೆ. ಶಾರೀರಿಕ ಚಟುವಟಿಕೆಯೊಂದಿಗೆ ಮಿದುಳಿಗೂ ಕೆಲಸ ಕೊಡಬೇಕು. ಪದಬಂಧ ಬಿಡಿಸುವುದು, ನಿತ್ಯ ಓದುವುದು ಇದಕ್ಕೆ ಸಹಕಾರಿಯಾಗುತ್ತದೆ. ಮಾನಸಿಕ ಸೌಖ್ಯವೂ ಮುಖ್ಯ ಎನ್ನುತ್ತಾರೆ ಅಜ್ಜಂದಿರು.