* ರಕ್ತ ನಾಳಗಳ ಮೂಲಕ ಸಂಚರಿಸುವ ರಕ್ತವು ಪೋಷಕಾಂಶಗಳು, ರೋಗ ನಿರೋಧಕ ಶಕ್ತಿ, ಹಾರ್ಮೋನುಗಳು ಹಾಗೂ ಆಮ್ಲಜನಕವನ್ನು ದೇಹದ ವಿವಿಧ ಅಂಗಗಳಿಗೆ ಕೊಂಡೊಯ್ಯುತ್ತದೆ.
* ಕೆಂಪು ರಕ್ತಕಣಗಳು, ಬಿಳಿ ರಕ್ತ ಕಣಗಳು ಹಾಗೂ ಪ್ಲೇಟ್ಲೆಟ್ಗಳು ರಕ್ತದ 45% ಭಾಗವನ್ನು ಆವರಿಸಿವೆ. ಈ ವಸ್ತುಗಳು ಪ್ಲಾಸ್ಮಾ ಎಂಬ ದ್ರವದಲ್ಲಿ ಇರುತ್ತವೆ.
* ದೇಹದ ಪ್ರತಿಯೊಂದು ಅಂಗದಂತೆ ರಕ್ತವೂ ತನ್ನದೇ ವಿಶೇಷ ಕಾರ್ಯಚಟುವಟಿಕೆಗಳನ್ನು ಹೊಂದಿದೆ. ರಕ್ತ, ಮಜ್ಜಾರಸ, ಲುಂಪ್ ನೋಡ್ಗಳು, ಸ್ಪ್ಲೀನ್, ಟಾನ್ಸಿಲ್ಸ್ ಹಾಗೂ ಪೆಯರ್ಸ್ ಪ್ಯಾಚ್ಗಳನ್ನು ಹೊಂದಿವೆ.
* ಮಜ್ಜಾ ರಸವು ರಕ್ತ ಕಣಗಳನ್ನ ಉತ್ಪಾದಿಸುತ್ತದೆ. ಬಹುತೇಕ ಮೂಳೆಗಳಲ್ಲಿರುವ ಮೃದುವಾದ ಭಾಗದಲ್ಲಿ ಮಜ್ಜಾ ರಸವಿದ್ದು, ಇಲ್ಲಿ ಉತ್ಪಾದನೆಯಾಗುವ ರಕ್ತವು ಪರಿಚಲನಾ ವ್ಯವಸ್ಥೆ ಮೂಲಕ ದೇಹದ ಅನೇಕ ಭಾಗಗಳಿಗೆ ರವಾನೆಯಾಗುತ್ತಿದೆ.
- ಹೃದಯದಿಂದ ದೇಹದ ವಿವಿಧ ಭಾಗಗಳಿಗೆ ರಕ್ತ ಹೊತ್ತೊಯ್ಯವ ಕೆಲಸ ಮಾಡುವ ಕೆಂಪು ರಕ್ತ ಕಣಗಳು ಮಾನವನ ದೇಹದಲ್ಲಿರುವ ರಕ್ತದ ದೊಡ್ಡ ಪ್ರತಿಶತದಷ್ಟು ಇವೆ. ಒಂದು ಕ್ಯುಬಿಕ್ ಮಿಲಿ ರಕ್ತದಲ್ಲಿ 50 ಲಕ್ಷ ಕೆಂಪು ರಕ್ತಕಣಗಳು ಇವೆ.
* ರಕ್ತದಲ್ಲಿರುವ ಹಿಮೋಗ್ಲೋಬಿನ್ ಹೆಸರಿನ ಪ್ರೋಟೀನ್ನಿಂದಾಗಿ ಕೆಂಪು ಬಣ್ಣ ಬಂದಿದೆ.
* ಶ್ವಾಸಕೋಶಗಳಿಗೆ ಆಮ್ಲಜನಕ ಹೊತ್ತೊಯ್ಯುವ ಹಿಮೋಗ್ಲೋಬಿನ್ ದೇಹದ ಇತರೆ ಕಣಗಳಿಗೆ ಪೂರೈಸುತ್ತದೆ. ಹಿಮೋಗ್ಲೋಬಿನ್ ಕಬ್ಬಿಣವನ್ನು ಹೊಂದಿರುವ ಕಾರಣ ಕೆಂಪು ರಕ್ತ ಕಣಗಳ ಪರೀಕ್ಷೆ ಮೂಲಕ ಅಂಗಾಂಶಗಳ ಆಮ್ಲೀಕರಣ, ಅನೇಮಿಯಾ ಹಾಗೂ ಪಾಲಿಸಿಥೇಮಿಯಾದಂಥ ಸಮಸ್ಯೆಗಳನ್ನು ಪತ್ತೆ ಮಾಡಬಹುದಾಗಿದೆ.
* ಲ್ಯೂಕೋಸೈಟ್ಗಳು ಎನ್ನಲಾಗುವ ಬಿಳಿ ರಕ್ತ ಕಣಗಳು ರೋಗ ನಿರೋಧಕ ಶಕ್ತಿಯಲ್ಲಿ ಕಂಡು ಬರುತ್ತವೆ. ವೈರಸ್ಗಳು, ಬ್ಯಾಕ್ಟೀರಿಯಾ ಹಾಗೂ ಕ್ರಿಮಿಗಳಂಥ ಬಾಹ್ಯ ಆಪತ್ತುಗಳಿಂದ ಇವುಗಳು ದೇಹವನ್ನು ರಕ್ಷಿಸುತ್ತವೆ.
* ಬಿಳಿ ರಕ್ತಕಣದಲ್ಲಿ ಮೂರು ವಿಧಗಳಿವೆ. ಲಿಂಪೋಕೈಟ್ಸ್ಗಳು ದೇಹವನ್ನು ಸೋಂಕುಗಳ ವಿರುದ್ಧ ಹೋರಾಡಲು ಸಜ್ಜುಗೊಳಿಸುತ್ತವೆ. ಗ್ರಾನುಲೋಕೈಟ್ಸ್ ಹಾಗೂ ಮೋನೋಕೈಟ್ಸ್ಗಳೂ ಸಹ ಸೋಂಕಿನ ವಿರುದ್ಧ ಭಿನ್ನವಾದ ಹೋರಾಟ ಮಾಡುತ್ತವೆ.
* ಆಂತರಿಕ ಹಾಗೂ ಬಾಹ್ಯ ರಕ್ತಸ್ರಾವ ತಡೆಗಟ್ಟುವ ಪ್ಲೇಟ್ಲೆಟ್ಗಳು, ಕ್ಲಾಟ್ ಅಥವಾ ಸ್ಕ್ಯಾಬ್ ರಚನೆ ಮೂಲಕ ಗಾಯ ವಾಸಿಯಾಗಲು ನೆರವಾಗುತ್ತವೆ.
* ದೇಹದ ಉದ್ದಗಲಕ್ಕೂ ರಕ್ತದ ವಿವಿಧ ಅಂಶಗಳನ್ನು ಹೊತ್ತೊಯ್ಯುವ ಪ್ಲಾಸ್ಮಾ 90% ನೀರಿನಿಂದ ಕೂಡಿದ್ದು, ಅಲ್ಬ್ಯುಮಿನ್, ಇಮ್ಯೂನೋಗ್ಲೋಬಿನ್ಸ್, ಕ್ಲಾಟಿಂಗ್ ಅಂಶಗಳು ಹಾಗೂ ಫಿಬ್ರಿನೋಜೆನ್ ಹೊಂದಿರುತ್ತದೆ.
* ಮಜ್ಜಾರಸದಲ್ಲಿ ಉತ್ಪತ್ತಿಯಾಗುವ ಕಾಂಡದ ಕಣಗಳಿಂದ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಮಜ್ಜಾರಸ, ರಕ್ತಝರಿ ಹಾಗೂ ಕರುಳ ಬಳ್ಳಿಯಲ್ಲಿ ಕಾಂಡ ಕಣಗಳು ಇರುತ್ತವೆ. ಈ ಕಣಗಳ ಕಸಿಯಿಂದ ಲ್ಯುಕೇಮಿಯಾದಂಥ ರೋಗಗಳನ್ನು ಗುಣ ಪಡಿಸಬಹುದು.
* ತೂಕ, ಲಿಂಗ ಹಾಗು ಎತ್ತರಗಳನ್ನು ಅವಲಂಬಿಸಿ ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣ ಇರುತ್ತದೆ.
* ರಕ್ತ ಪರೀಕ್ಷೆಗೆ ಸ್ಯಾಂಪಲ್ ಪಡೆಯುವ ವೇಳೆ ನಿಮ್ಮ ಕೈಯಲ್ಲಿರುವ ರಕ್ತನಾಳವೊಂದರಿಂದ 4-15ಮಿಲೀನಷ್ಟು ರಕ್ತ ಪಡೆದು ಸ್ಯಾಂಪಲ್ ಟ್ಯೂಬ್ಗಳಲ್ಲಿ ಪ್ರಯೋಗಾಲಯಕ್ಕೆ ವಿಶ್ಲೇಷಣೆ ಮಾಡಲು ಕಳುಹಿಸಲಾಗುತ್ತದೆ.
* ರಕ್ತದ ಪರೀಕ್ಷೆಯಿಂದ ಕೆಲವೊಂದು ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದಾಗಿದೆ. ಬಹಳಷ್ಟು ದೊಡ್ಡ ಅಂಗಗಳ ಬಗೆಗಿನ ಮಾಹಿತಿ, ಸೋಂಕಿನ ಇರುವಿಕೆ, ವಂಶವಾಹಿಯಿಂದ ಬರುವ ಅಸಹಜತೆಗಳು, ಅಪರೂಪದ ರೋಗಗಳು, ಗರ್ಭಧಾರಣೆ, ಕ್ಯಾನ್ಸರ್ಗಳಂತ ವಿಷಯಗಳನ್ನು ಸಹ ರಕ್ತ ಪರೀಕ್ಷೆಯಿಂದ ಅರಿಯಬಹುದು. ರಕ್ತ ಪರೀಕ್ಷೆಗಳಿಗೂ ಸಹ ಇತಿಮಿತಿಗಳಿದ್ದು, ಕೆಲವೊಂದು ರೋಗಗಳಿಗೆ ರಕ್ತದ ಪರೀಕ್ಷೆಯನ್ನು ಇನ್ನಷ್ಟು ಆಳವಾಗಿ ಮಾಡಬೇಕಾಗುತ್ತದೆ.
* ಸಾಮಾನ್ಯವಾಗಿ ರಕ್ತದಾನದ ವೇಳೆ 420-480 ಮಿಲೀ ರಕ್ತ ಹೊರಗೆ ಪಡೆಯಲಾಗುತ್ತದೆ. ಇದು ದೇಹದಲ್ಲಿರುವ ರಕ್ತದ ಒಟ್ಟಾರೆ ಪ್ರಮಾಣದ 10%ನಷ್ಟು. ಎರಡು ಲೀಟರ್ಗಿಂತ ಹೆಚ್ಚಿನ ರಕ್ತ ಕಳೆದುಕೊಂಡರೆ ಜೀವಕ್ಕೆ ಕುತ್ತು ಬರಬಹುದು.
* ದಾನ ಮಾಡಲಾದ ರಕ್ತದಿಂದ ಜಗತ್ತಿನಾದ್ಯಂತ ಲಕ್ಷಾಂತರ ಮಂದಿಗೆ ಮರು ಜೀವ ನೀಡಲಾಗುತ್ತಿದೆ.
* ಹೃದಯದ ಹಾಗೂ ನಾಳಗಳ ವ್ಯವಸ್ಥೆ ಮೂಲಕ ಹೃದಯವು ರಕ್ತವನ್ನು ಪಂಪ್ ಮಾಡುತ್ತದೆ. ಹೀಗೆ ಮಾಡುವ ಮೂಲಕ ದೇಹದ ಅಂಗಾಂಶಗಳಿಗೆ ಆಮ್ಲಜನಕ ಹಾಗೂ ಪೋಷಕಾಂಶಗಳ ಪೂರೈಕೆ ಆಗುತ್ತದೆ. ಜೊತೆಗೆ ಇದೇ ವೇಳೆ ಉತ್ಪತ್ತಿಯಾಗುವ ತ್ಯಾಜ್ಯದ ಪದಾರ್ಥಗಳು ಹೊರಗೆ ಹಾಕಲ್ಪಡುತ್ತವೆ.
* ದೇಹದಲ್ಲಿರುವ ಇತರೆ ಅಂಗಾಂಶ ವ್ಯವಸ್ಥೆಗಳ ಹಾಗೆಯೇ ಕ್ಯಾನ್ಸರ್ ಕಣಗಳು ರಕ್ತಕ್ಕೂ ಸೇರಬಹುದು. ಅಸಹಜವಾದ ರಕ್ತದ ಕಣಗಳು ರಕ್ತದಲ್ಲಿ ಸೇರಿಕೊಂಡು ರಕ್ತದ ಸಾಮಾನ್ಯ ಕೆಲಸಗಳಿಗೆ ತೊಡಕಾಗುವುದನ್ನು ರಕ್ತದ ಕ್ಯಾನ್ಸರ್ ಎನ್ನಲಾಗುತ್ತದೆ. ಈ ಕ್ಯಾನ್ಸರ್ಗಳು ಸಾಮಾನ್ಯವಾಗಿ ಮಜ್ಜಾರಸದಲ್ಲಿ ಆರಂಭಗೊಳ್ಳುತ್ತವೆ. ಲ್ಯುಕೇಮಿಯಾ, ಲಿಂಫೋಮಾ ಹಾಗೂ ಮೈಲೋಮಾ ಎಂಬ ಮೂರು ವಿಧದ ರಕ್ತದ ಕ್ಯಾನ್ಸರ್ಗಳು ಇವೆ.