ದೇಹ ತೂಕ ವಿಪರೀತ ಹೆಚ್ಚಿರುವವರು ಮತ್ತು ಮಧುಮೇಹಿಗಳು ಹಿಮ್ಮಡಿ ಕಾಲಿನ ನೋವಿನಿಂದ ಬಳಲುತ್ತಿರುತ್ತಾರೆ. ಕೆಲವೊಮ್ಮೆ ಈ ನೋವು ವಿಪರೀತವಾಗಿ ಕಾಡುತ್ತೆ, ಆಟೋಟಗಳಲ್ಲಿ ಪಾಲ್ಗೊಂಡ ಕಾರಣಕ್ಕೆ ಅಥವಾ ಹೈಹೀಲ್ಸ್ ಚಪ್ಪಲಿ ಧರಿಸಿದ ಕಾರಣಕ್ಕೂ ಕಾಣಿಸಿಕೊಳ್ಳುವುದುಂಟು.
ಇದರ ನಿವಾರಣೆಗೆ ಕಾಲಿನ ಹಿಂಭಾಗಕ್ಕೆ ಐಸ್ ಪ್ಯಾಕ್ ನಿಂದ ಮಸಾಜ್ ಮಾಡಿ. ಟವೆಲ್ ನಲ್ಲಿ ಸುತ್ತಿದ ಐಸ್ ಪೀಸ್ ಅನ್ನು ಹಿಮ್ಮಡಿ ಜಾಗಕ್ಕೆ ಇಟ್ಟು ಮೃದುವಾಗಿ ಒತ್ತಿ. ಹತ್ತರಿಂದ ಹದಿನೈದು ನಿಮಿಷ ಹೀಗೆ ಮಾಡುವುದರಿಂದ ನೋವು ಬಹುತೇಕ ಕಡಿಮೆಯಾಗುತ್ತದೆ.
ಅಡುಗೆ ಸೋಡಾವನ್ನು ಸೌಂದರ್ಯವರ್ಧಕವಾಗಿ ಬಳಸುವುದು ನಿಮಗೆಲ್ಲಾ ಗೊತ್ತೇ ಇದೆ. ಅದೇ ರೀತಿ ಅಡುಗೆ ಸೋಡಾದ ಪೇಸ್ಟ್ ತಯಾರಿಸಿ ನೋವಿರುವ ಹಿಮ್ಮಡಿ ಮೇಲೆ ಹಚ್ಚಿ. ಅರ್ಧ ಗಂಟೆ ಹೊತ್ತು ಅದೇ ರೀತಿ ಕುಳಿತಿರಿ. ಇದರಿಂದಲೂ ನೋವು ಕಡಿಮೆಯಾಗುತ್ತದೆ.
ಉಪ್ಪು ಬೆರೆಸಿದ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲನ್ನು ಇಳಿಬಿಟ್ಟು 20 ನಿಮಿಷಗಳ ಕಾಲ ಕುಳಿತುಕೊಳ್ಳುವುದರಿಂದಲೂ ನೋವು ಕಡಿಮೆಯಾಗುತ್ತದೆ. ನಿತ್ಯ ರಾತ್ರಿ ಮಲಗುವ ಮುನ್ನ ಹಿಮ್ಮಡಿಗೆ ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದರಿಂದ ಮುಂದೆಂದೂ ಕಾಲಿನ ನೋವಿನ ಸಮಸ್ಯೆ ನಿಮ್ಮನ್ನು ಕಾಡದು.