ದೇಶದಲ್ಲಿ ಪತ್ತೆಯಾಗಿರುವ ಕೋವಿಡ್‌ನ ಉಪತಳಿ ಜೆಎನ್.1 (Covid JN.1) ಸೋಂಕು ತೀವ್ರ ಆತಂಕ ಮೂಡಿಸುತ್ತಿದೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅತ್ಯಗತ್ಯವಾಗಿದೆ. ಸದ್ಯ ಕ್ರಿಸ್ ಮಸ್ ಸೇರಿದಂತೆ ಹೊಸ ವರ್ಷಾಚರಣೆ ಹತ್ತಿರದಲ್ಲಿದ್ದು, ಜನಸಂದಣಿಯಾಗುವ ಕಾರ್ಯಕ್ರಮಗಳು ಕೋವಿಡ್ ಪ್ರಕರಣಗಳನ್ನು ಹೆಚ್ಚಿಸುವಂತಹ ಸಾಧ್ಯತೆಯಿದೆ.
ಸದ್ಯಕ್ಕೆ ಇಂತಹ ಸಮಾರಂಭಗಳಿಗೆ ಸಂಪೂರ್ಣ ನಿರ್ಬಂಧ ಇಲ್ಲದಿದ್ದರೂ ಸೋಕಿನಿಂದ ರಕ್ಷಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಯಾಕೆಂದರೆ ಈಗಾಗಲೇ 2020 ರಲ್ಲಿ ಶುರುವಾದ ಕೋವಿಡ್ ನಿಂದ ಯಾವೆಲ್ಲಾ ರೀತಿಯ ತೊಂದರೆ ಮತ್ತು ಕಷ್ಟಗಳನ್ನು ಅನುಭವಿಸಿದ್ದೀವಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಕೋವಿಡ್ ಭೀತಿಯ ನಡುವೆ ಸಭೆ ಸಮಾರಂಭಗಳಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ತಜ್ಞ ವೈದ್ಯರು ಕೆಲವು ಟಿಪ್ಸ್ ಗಳನ್ನು ನೀಡಿದ್ದಾರೆ.
*ನೀವು ಮನೆಯಲ್ಲಿ ಪಾರ್ಟಿ ಮಾಡುವುದಾದರೆ ನಿಮ್ಮ ಮನೆಯ ಪಾರ್ಟಿ ಹಾಲ್ ಗೆ ಸಾಕಷ್ಟು ಗಾಳಿ ಬರುವ ಮತ್ತು ಹೋಗಲು ವ್ಯವಸ್ಥೆ ಇರುವ ಬಗ್ಗೆ ನೋಡಿಕೊಳ್ಳಬೇಕು.
*ಪಾರ್ಟಿಯಲ್ಲಿ ಭಾಗವಹಿಸುವವರು ಅನಾರೋಗ್ಯಕ್ಕೆ ತುತ್ತಾಗಿದ್ದರೆ ಅವರನ್ನು ಸಮಾರಂಭಕ್ಕೆ ಹಾಜರಾಗದಂತೆ ವಿನಂತಿಸಿ.
*ವೃದ್ಧರು , ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಪಾರ್ಟಿಗೆ ಬರದಂತೆ ವಿನಂತಿಸಿಕೊಳ್ಳಿ.
* ಲಸಿಕೆ ಪಡೆದಿರುವವರು ಸಮಾರಂಭಗಳಿಗೆ ಹಾಜರಾಗಬೇಕು.
*ಮಾಸ್ಕ್ ಧರಿಸಿರಬೇಕು.
* ಹಸ್ತಲಾಘವ ಮಾಡುವುದರ ಬದಲಿಗೆ ನಮಸ್ಕಾರದ ಮೂಲಕ ಸ್ವಾಗತಿಸಿ
*ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
* ಕೆಮ್ಮುವಾಗ ಮತ್ತು ಸೀನುವಾಗ ಎಚ್ಚರ ವಹಿಸಿಬೇಕು.
* ಸಮಾರಂಭದಲ್ಲಿ ಬಳಸುವ ಪ್ರತಿ ವಸ್ತುಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು.
* ಪಾರ್ಟಿಗೆ ಹಾಕಿಕೊಂಡು ಹೋಗಿದ್ದ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯಬೇಕು.
*ಪಾರ್ಟಿಗೆ ಹೋಗುವ ಮುನ್ನ ಮತ್ತು ನಂತರ ಸ್ನಾನ ಮಾಡಬೇಕು.
* ಸದಾಕಾಲ ಸ್ವಚ್ಚತೆಯನ್ನು ಕಾಪಾಡಬೇಕು.
ಹೀಗೆ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರಿಂದ ಪಾರ್ಟಿಯಲ್ಲಿ ಭಾಗವಹಿಸಬಹುದಾಗಿದೆ.