ಇಡೀ ವಿಶ್ವದಲ್ಲಿರುವ ಒಟ್ಟು ನೀರಿನಲ್ಲಿ 97.5ಪ್ರತಿಶತದಷ್ಟು ನೀರು ಸಮುದ್ರಕ್ಕೆ ಸೇರಿದೆ. ಇನ್ನುಳಿದ 2.5 ಪ್ರತಿಶತ ನೀರು ಹಿಮದ ರೂಪದಲ್ಲಿದೆ. ಇದನ್ನೆಲ್ಲ ಹೊರತುಪಡಿಸಿ ಉಳಿಯುವ ಅತ್ಯಂತ ಕಡಿಮೆ ಪ್ರಮಾಣದ ನೀರು ಮಾನವನಿಗೆ ಕುಡಿಯಲು ಯೋಗ್ಯವಾಗಿದೆ.
ಕುಡಿಯುವ ನೀರಿನ ಪ್ರಮಾಣ ಇಷ್ಟು ಕಡಿಮೆ ಪ್ರಮಾಣದಲ್ಲಿ ಇರೋದ್ರಿಂದ ನೀರನ್ನ ರಕ್ಷಣೆ ಮಾಡಲೇಬೇಕಿದೆ. ಇದಕ್ಕಾಗಿ ನೀವು ಮನೆಯಲ್ಲಿ ಯಾವ್ಯಾವ ಕ್ರಮ ಕೈಗೊಳ್ಳಬಹುದು ಅನ್ನೋದಕ್ಕೆ ಇಲ್ಲೊಂದಿಷ್ಟು ಸಲಹೆಗಳಿವೆ ನೋಡಿ.
ಹಲ್ಲುಜ್ಜಿತ್ತಿರುವ ವೇಳೆಯಲ್ಲಿ ನಲ್ಲಿಯ ನೀರನ್ನ ಬಂದ್ ಮಾಡಿಕೊಳ್ಳಿ.
ತೀರಾ ಅವಶ್ಯಕತೆ ಇದೆ ಎನ್ನುವಾಗ ಹಾಗೂ ಫುಲ್ ಲೋಡ್ ಆದ ಬಳಿಕವೇ ವಾಶಿಂಗ್ ಮಷಿನ್ ಹಾಗೂ ಡಿಶ್ ವಾಷರ್ಗಳನ್ನ ಬಳಕೆ ಮಾಡಿ.
ಸ್ನಾನ ಮಾಡುವಾಗ ಹಾಗೂ ಪಾತ್ರೆ ತೊಳೆಯುವಾಗ ಸುಮ್ಮನೇ ನೀರನ್ನ ಹರಿಬಿಡಬೇಡಿ.
ಸ್ನಾನಗೃಹ, ಶೌಚಾಲಯ ಸೇರಿದಂತೆ ಮನೆಯ ವಿವಿಧೆಡೆ ನಲ್ಲಿಯಲ್ಲಿ ನೀರು ಸೋರಿಕೆಯಾಗುತ್ತಿದೆಯೇ ಅನ್ನೋದನ್ನ ಪರಿಶೀಲಿಸಿ. ಗಂಟೆಗಟ್ಟಲೇ ಸ್ನಾನ ಮಾಡೋ ಅಭ್ಯಾಸವನ್ನ ಬಿಟ್ಟು ಬಿಡಿ.
ನೀರನ್ನ ನೇರವಾಗಿ ಚರಂಡಿಗೆ ಹರಿಬಿಡೋದನ್ನ ಬಿಟ್ಟು ಬೇರೆ ಏನಕ್ಕಾದರೂ ಬಳಕೆ ಮಾಡಲು ಯತ್ನಿಸಿ.
ನೀರನ್ನ ಸಂರಕ್ಷಣೆ ಮಾಡೋದನ್ನ ಕಲಿಯೋದು ತುಂಬಾನೆ ಸುಲಭದ ವಿಚಾರ. ಆದರೆ ಅನೇಕರು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸ್ತಾರೆ. ಹೀಗಾಗಿ ಪ್ರಜ್ಞಾವಂತ ನಾಗರಿಕರಾಗಿ ನೀರಿನ ಸುರಕ್ಷತೆಯತ್ತ ಗಮನ ಹರಿಸಿ.