alex Certify ಸನ್ ಬರ್ನ್ ಸಮಸ್ಯೆ ನಿವಾರಿಸಿಕೊಳ್ಳಲು ಇಲ್ಲಿದೆ ಒಂದಷ್ಟು ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸನ್ ಬರ್ನ್ ಸಮಸ್ಯೆ ನಿವಾರಿಸಿಕೊಳ್ಳಲು ಇಲ್ಲಿದೆ ಒಂದಷ್ಟು ಟಿಪ್ಸ್

ಸೂರ್ಯನ ಬೆಳಕಿಗೆ ಹೆಚ್ಚು ಮೈಯೊಡ್ಡುವುದರಿಂದ ಸನ್ ಬರ್ನ್ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸನ್ ಬರ್ನ್ ಗಳು ಉರಿ, ಕಿರಿಕಿರಿಯನ್ನುಂಟು ಮಾಡುತ್ತದೆ. ಇದನ್ನು ನಿವಾರಿಸಿಕೊಳ್ಳುವುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್.

* 1 ಟೇಬಲ್ ಸ್ಪೂನ್ ಬೇಕಿಂಗ್ ಸೋಡವನ್ನು ಸ್ನಾನ ಮಾಡುವ ನೀರಿಗೆ ಹಾಕಿ. 20 ನಿಮಿಷ ಬಿಟ್ಟು ಈ ನೀರಿನಿಂದ ಸ್ನಾನ ಮಾಡಿ. ಇದರಿಂದ ಸನ್ ಬರ್ನ್ ಅನ್ನು ಕಡಿಮೆ ಮಾಡಿಕೊಳ್ಳಬಹುದು.

*1/2 ಕಪ್ ಓಟ್ಸ್ ಅನ್ನು ಸ್ನಾನ ಮಾಡುವ ನೀರಿಗೆ ಹಾಕಿ. 10 ನಿಮಿಷ ಬಿಟ್ಟು ಈ ನೀರಿನಿಂದ ಸ್ನಾನ ಮಾಡಿ. ಇದರಿಂದ ಚರ್ಮದ ರಕ್ಷಣೆ ಮಾಡಿಕೊಳ್ಳಬಹುದು.

* ಅಲೋವೆರಾ ಜೆಲ್ ಕೂಡ ಸನ್ ಬರ್ನ್ ಅನ್ನು ಶಮನ ಮಾಡುವ ಗುಣ ಹೊಂದಿದೆ. ನಿಮ್ಮ ಮನೆಯಲ್ಲಿ ಅಲೋವೆರಾ ಗಿಡವಿದ್ದರೆ ಅದನ್ನೇ ಕತ್ತರಿಸಿಕೊಂಡು ಅದರಲ್ಲಿನ ಲೋಳೆಯನ್ನು ಸನ್ ಬರ್ನ್ ಆದ ಜಾಗಕ್ಕೆ ಹಚ್ಚಿಕೊಳ್ಳಿ. ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ಸಿಗುವ 100% ಅಲೋವೆರಾ ಜೆಲ್ ಅನ್ನು ತಂದು ಹಚ್ಚಿಕೊಳ್ಳಿ. ಇದರಿಂದ ಸನ್ ಬರ್ನ್ ಶಮನವಾಗುತ್ತದೆ.

* ಸನ್ ಬರ್ನ್ ಆಗಿದ್ದಾಗ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಇದು ಮತ್ತಷ್ಟೂ ಚರ್ಮವನ್ನು ಘಾಸಿಗೊಳಿಸುತ್ತದೆ.

*ಸೌತೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದು ಮೈ, ಮುಖಕ್ಕೆಲ್ಲಾ ಹಚ್ಚಿಕೊಂಡು 20 ನಿಮಿಷಗಳ ನಂತರ ಸ್ನಾನ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...