ಮಿನಿ, ಮಿಡಿ, ಶಾರ್ಟ್ಸ್ ಹಾಕಿಕೊಳ್ಳಲು ಅನೇಕ ಹುಡುಗಿಯರು ಇಷ್ಟಪಡ್ತಾರೆ. ಕೆಲವರ ಕಾಲು ಕಪ್ಪಗಿರುವುದರಿಂದ ಇಷ್ಟವಿದ್ರೂ ಮಿನಿ, ಮಿಡಿ ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೇಸಿಗೆಯಲ್ಲಿ ಕಾಲುಗಳು ಮತ್ತಷ್ಟು ಕಪ್ಪಾಗುತ್ತವೆ. ಬಿಸಿಲಿಗೆ ಕಾಲು ಬಣ್ಣ ಕಳೆದುಕೊಳ್ಳುತ್ತದೆ. ಸುಂದರ ಮುಖಕ್ಕಾಗಿ ನಾವು ಬೇಕಾದಷ್ಟು ಮನೆ ಮದ್ದಿನ ಪ್ರಯೋಗ ಮಾಡ್ತೇವೆ. ಹಾಗೆ ಸುಂದರ ಕಾಲುಗಳಿಗಾಗಿ ಕೆಲವೊಂದು ಟಿಪ್ಸ್ ಇಲ್ಲಿದೆ.
ಮೊಸರು ಮತ್ತು ರೋಸ್ ವಾಟರ್: ಬ್ಲೀಚಿಂಗ್ ಗೆ ಮೊಸರು ಬೆಸ್ಟ್. ಚರ್ಮದ ಡೆಡ್ ಸ್ಕಿನ್ ತೆಗೆದುಹಾಕಿ ಚರ್ಮದ ಕಾಂತಿಯನ್ನು ಇದು ಹೆಚ್ಚಿಸುತ್ತದೆ. ಪ್ರತಿದಿನ 2 ಚಮಚ ಮೊಸರಿಗೆ ಒಂದು ಚಮಚ ರೋಸ್ ವಾಟರ್ ಸೇರಿಸಿ ಕಾಲುಗಳಿಗೆ ಹಚ್ಚಿಕೊಳ್ಳಿ. ಐದು ನಿಮಿಷ ಬಿಟ್ಟು ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.
ಅಲೋವೆರಾ ಮತ್ತು ಬಾದಾಮಿ ಎಣ್ಣೆ : ಅಲೋವೆರಾ ಜೆಲ್ ಕಾಲಿಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ಇಲ್ಲವೆ ಒಂದು ಚಮಚ ಅಲೋವೆರಾ ಜೆಲ್ ಹಾಗೂ ಒಂದು ಚಮಚ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಕಾಲಿಗೆ ಹಾಕಿ ರಬ್ ಮಾಡಿ. ಪ್ರತಿದಿನ ಎರಡು ಬಾರಿ ಹೀಗೆ ಮಾಡುವುದರಿಂದ ಕಾಲು ಕಾಂತಿ ಪಡೆಯುತ್ತದೆ.
ಸೌತೆಕಾಯಿ ಹಾಗೂ ನಿಂಬೆ ರಸ : ಸೌತೆಕಾಯಿ ಹೋಳು ಮಾಡಿ ಇದನ್ನು ಕಾಲಿಗೆ ರಬ್ ಮಾಡಿ. ನಿಂಬೆ ರಸವನ್ನು ಸೌತೆ ಕಾಯಿಗೆ ಬೆರೆಸಿ ಕೂಡ ಮಸಾಜ್ ಮಾಡಿಕೊಳ್ಳಬಹುದು.
ಬೇಕಿಂಗ್ ಸೋಡಾ ಮತ್ತು ಹಾಲು : ಮೂರು ಚಮಚ ಹಾಲಿಗೆ ಒಂದು ಚಮಚ ಬೇಕಿಂಗ್ ಸೋಡಾ ಬೆರೆಸಿ ಇದನ್ನು ಕಾಲಿಗೆ ಹಚ್ಚಿಕೊಳ್ಳಿ. ಗಮನಾರ್ಹವಾದ ಬದಲಾವಣೆ ಕಾಣಬಹುದಾಗಿದೆ.