ದೇಹ ತೂಕ ಇಳಿಸಲು ಬೆಳಗ್ಗೆ ಹಾಗೂ ಸಂಜೆ ಏನು ಮಾಡಬಹುದು ಎಂಬುದನ್ನು ಅರಿತಿದ್ದಾಯ್ತು. ಈಗ ಮಧ್ಯಾಹ್ನದ ವೇಳೆ ಏನು ಮಾಡಬಹುದು ಎಂಬುದನ್ನು ತಿಳಿಯೋಣ.
ಹೆಚ್ಚು ನೀರು ಕುಡಿಯಿರಿ. ಮಧ್ಯಾಹ್ನ ಊಟಕ್ಕೂ ಮುನ್ನ ಅಧಿಕ ನೀರು ಕುಡಿಯುವುದರಿಂದ ತುಂಬಾ ಹೊತ್ತು ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ ಮತ್ತು ಕಡಿಮೆ ಆಹಾರ ನಿಮ್ಮ ದೇಹ ಸೇರುವಂತಾಗುತ್ತದೆ.
11 ಗಂಟೆ ಹೊತ್ತಿಗೆ ಲಘುವಾಗಿ ಹಸಿವಾಗುವಾಗ ಸ್ನಾಕ್ಸ್ ಆಯ್ಕೆ ಮಾಡುವ ಬದಲು ನಿಂಬು ಜ್ಯೂಸ್ ಅಥವಾ ನೀರು ಕುಡಿಯಿರಿ. ಇದರಿಂದ ಬೊಜ್ಜು ಬೆಳೆಯುವ ಸಾಧ್ಯತೆಯೂ ಕಡಿಮೆಯಾಗುತ್ತದೆ.
ಮಧ್ಯಾಹ್ನದ ಊಟಕ್ಕೆ ಕನಿಷ್ಠ 15 ನಿಮಿಷ ಕೊಡಿ. ನಿಧಾನಕ್ಕೆ ಊಟ ಮಾಡಿ. ಗಬಗಬನೆ ತಿಂದರೆ ಹಸಿವು ಹೆಚ್ಚುತ್ತದೆ. ಹಾಗಾಗಿ ನಿಧಾನವಾಗಿ ಊಟ ಮಾಡಿ.
ಊಟವಾದ ತಕ್ಷಣ ಕುರ್ಚಿಯಲ್ಲಿ ಕುಳಿತು ಕೆಲಸ ಮುಂದುವರಿಸದಿರಿ. ಕನಿಷ್ಠ 10 ನಿಮಿಷ ನಡೆಯಿರಿ. ಮೆಟ್ಟಿಲುಗಳಿದ್ದರೆ ಕೆಳಗಿನ ಫ್ಲೋರ್ ತನಕ ಹತ್ತಿ ಇಳಿದು ಮಾಡಿ ಬನ್ನಿ. ಇಲ್ಲವಾದರೆ ಕಚೇರಿ ಗಾರ್ಡನ್ ನಲ್ಲಿ ಒಮ್ಮೆ ಅಡ್ಡಾಡಿ ಬನ್ನಿ. ಇದರಿಂದ ಮನಸ್ಸಿಗೂ ಉಲ್ಲಾಸ, ದೇಹಕ್ಕೂ ವ್ಯಾಯಾಮ ಸಿಕ್ಕಂತಾಗುತ್ತದೆ.