ನಿಮ್ಮ ಹಲ್ಲುಗಳು ಹಳದಿಗಟ್ಟಿವಿಯೇ, ಅದನ್ನು ಬೆಳ್ಳಗಾಗುವಂತೆ ತಿಕ್ಕಿ ತಿಕ್ಕಿ ಸೋತು ಹೋಗಿದ್ದೀರೇ? ಹಾಗಾದರೆ ಇಲ್ಲಿ ಕೇಳಿ, ಮನೆಮದ್ದುಗಳ ಮೂಲಕವೇ ಈ ಸಮಸ್ಯೆ ಸರಳಗೊಳಿಸಬಹುದು.
ಸಣ್ಣ ಬಟ್ಟಲು ತೆಗೆದುಕೊಂಡು ಅರ್ಧ ಚಮಚದಷ್ಟು ಅರಿಷಿಣ ಪುಡಿಯನ್ನು, ಅರ್ಧ ಚಮಚದಷ್ಟು ಉಪ್ಪು, ಅಡುಗೆ ಸೋಡಾ ಒಂದು ಚಿಟಿಕೆ ಅಥವಾ ಕಾಲು ಚಮಚದಷ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಡಬ್ಬಿಯಲ್ಲಿ ಹಾಕಿ ಪ್ರತಿದಿನ ಬಳಸಿ. ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಬಹುದು.
ಈ 3 ಪದಾರ್ಥಗಳು ನಮ್ಮ ಹಲ್ಲು ಗಳಲ್ಲಿರುವ ಬ್ಯಾಕ್ಟೀರಿಯಾ, ದುರ್ವಾಸನೆ ದೂರಮಾಡಿ ವಸಡುಗಳ ಆರೋಗ್ಯ ಕಾಪಾಡುತ್ತದೆ. ಹಲ್ಲುಗಳು ಫಳಫಳ ಹೊಳೆಯುವಂತೆ, ಆರೋಗ್ಯವಾಗಿ ಇರುವಂತೆ ಮಾಡಿ ಹಲ್ಲುಗಳ ಮೇಲೆ ಇರುವ ಕಲೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ .
ಇದನ್ನು ನೀವು ವಾರದಲ್ಲಿ 3 ಬಾರಿ ಅಥವಾ 4 ಬಾರಿ ಮಾಡಿದರೆ ಸಾಕು ಇದರಿಂದ ನಿಮ್ಮ ಹಲ್ಲುಗಳು ಆರೋಗ್ಯವಾಗಿ ಬೆಳ್ಳಗೆ ಕಾಣಿಸುತ್ತವೆ.