ಕುಲ್ಫಿ ಯಾರಿಗೆ ಇಷ್ಟವಿಲ್ಲ. ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಕುಲ್ಫಿ ತಿನ್ನುತ್ತಾರೆ. ಮನೆಯಲ್ಲಿ ಮಾಡಿದ ಕುಲ್ಫಿಗೆ ರುಚಿ ಹೆಚ್ಚು. ಕುಲ್ಫಿ ಮಾಡುವಾಗ ಕೆಲವೊಂದು ಟಿಪ್ಸ್ ನೆನಪಿನಲ್ಲಿಟ್ಟುಕೊಳ್ಳಬೇಕು.
ಹಾಲಿಗೆ ಹೆಚ್ಚು ಸಕ್ಕರೆ ಹಾಕಿದಷ್ಟು ಕುಲ್ಫಿ ಮೃದುವಾಗುತ್ತದೆ. ಬೇಗ ಹಾಲು ಗಟ್ಟಿಯಾಗುತ್ತದೆ. ಹಾಲು ಮತ್ತು ಸಕ್ಕರೆ ಸಮತೋಲದಲ್ಲಿರುವಂತೆ ನೋಡಿಕೊಳ್ಳಿ.
ಕುಲ್ಫಿಯನ್ನು ಕುಲ್ಫಿ ಕಪ್ ಗೆ ಹಾಕುವ ವೇಳೆ ಸ್ವಲ್ಪ ಜಾಗ ಬಿಡಿ. ಕುಲ್ಫಿ ಹಿಗ್ಗುವುದಕ್ಕೆ ಜಾಗ ಬೇಕಾಗುತ್ತದೆ.
ಕುಲ್ಫಿ ತಯಾರಿಸುವ ವೇಳೆ ಆ ಋತುವಿನ ಹಣ್ಣನ್ನು ಬಳಸಿ. ಇದು ಆರೋಗ್ಯಕ್ಕೆ ಒಳ್ಳೆಯದು.
ಯಾವಾಗ್ಲೂ ತಾಜಾ ಹಣ್ಣಿನ ರಸವನ್ನು ತೆಗೆದು ಫಿಲ್ಟರ್ ಮಾಡಿ ದೇಸಿ ಕುಲ್ಫಿಗೆ ಬಳಸಿ.
ಕುಲ್ಫಿ, ಕಪ್ ನಿಂದ ಸುಲಭವಾಗಿ ಹೊರಗೆ ಬರಬೇಕೆಂದ್ರೆ ಸ್ವಲ್ಪ ಸಮಯ ನಲ್ಲಿಯ ಕೆಳಗೆ ಕುಲ್ಫಿ ಕಪ್ ಇಟ್ಟು ನೀರು ಬಿಡಿ.
ಕುಲ್ಫಿ ಮಿಶ್ರಣ ಗಟ್ಟಿಯಾದ್ಮೇಲೆ ಅದನ್ನು ಫ್ರಿಜ್ ನಲ್ಲಿಡಿ. ಸ್ವಲ್ಪ ಸಮಯದ ನಂತ್ರ ಫ್ರಿಜರ್ ನಲ್ಲಿಡಿ.
ಕುಲ್ಫಿಗಾಗಿ ಹಾಲು ಬಿಸಿ ಮಾಡುವ ಮೊದಲು ಪಾತ್ರೆಯನ್ನು ತೊಳೆದು ನಂತ್ರ ಹಾಲನ್ನು ಹಾಕಿ. ಹೀಗೆ ಮಾಡಿದ್ರೆ ಹಾಲು ತಳ ಹಿಡಿಯುವುದಿಲ್ಲ.