ವಯಸ್ಸು ಇಪ್ಪತೈದು, ಮೂವತ್ತು ದಾಟುವ ಮೊದಲೇ ಬೆನ್ನು ನೋವು, ಸೊಂಟ ನೋವು ಮತ್ತು ಮೈ ಕೈ ನೋವು ಮೊದಲಾದ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿ ಮತ್ತು ಅರೋಗ್ಯದ ಕ್ರಮಗಳು.
ಟೀ ಮತ್ತು ಕಾಫಿ ಬದಲು ಹಾಲನ್ನು ಕುಡಿದರೆ ಮೂಳೆಗಳು ಸದೃಢವಾಗುತ್ತದೆ. ಹಾಲಿಗೆ ಯಾವುದೇ ರೀತಿಯ ಸಕ್ಕರೆ ಅಂಶವನ್ನು ಬಳಸಬಾರದು. ಶುದ್ಧವಾದ ಹಾಲು ಕುಡಿಯಬೇಕು.
ಒಣಗಿದ ಖರ್ಜೂರವನ್ನು ತಿನ್ನುವುದರಿಂದ ಮೂಳೆಗಳನ್ನು ಗಟ್ಟಿ ಮುಟ್ಟಾಗಿರುತ್ತವೆ. ಇದರಲ್ಲಿ ರಂಜಕ, ಪೊಟ್ಯಾಷಿಯಂ, ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಇದ್ದು ನಮ್ಮ ಮೂಳೆಗಳನ್ನು ಮತ್ತು ಹಲ್ಲುಗಳನ್ನು ಬಲಪಡಿಸುತ್ತವೆ.
ಹಸಿರು ಬಣ್ಣದ ತರಕಾರಿಗಳನ್ನು ಮತ್ತು ಸೊಪ್ಪುಗಳನ್ನು ಸೇವನೆ ಮಾಡುವುದರಿಂದ ಮೂಳೆಗಳ ಆರೋಗ್ಯವನ್ನು ಸುಧಾರಿಸಬಹುದು. ಗಾಢ ಹಸಿರು ಬಣ್ಣದ ತರಕಾರಿಗಳಲ್ಲಿ ವಿಟಮಿನ್ ಡಿ ಅಂಶ ಇರುವುದರಿಂದ ಇವುಗಳನ್ನು ಆಹಾರದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.