ಚಳಿಗಾಲದಲ್ಲಿ ಶೀತ, ಕೆಮ್ಮು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ವಾತಾವರಣದಲ್ಲಿನ ಬದಲಾವಣೆ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇದ್ದರೆ ಇಂತಹ ತೊಂದರೆಗಳು ಕಾಡುವುದು ಕಡಿಮೆ. ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲವು ಮನೆ ಮದ್ದುಗಳು.
- *ಕಾಳು ಮೆಣಸು ಇದರಲ್ಲಿ ವಿಟಮಿನ್ ಸಿ ಜಾಸ್ತಿ ಇರುತ್ತದೆ. ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೇ ಇದನ್ನು ಸೇವಿಸುವುದರಿಂದ ದೇಹದಲ್ಲಿರುವ ಟಾಕ್ಸಿನ್ ಅನ್ನು ಕಡಿಮೆ ಮಾಡುತ್ತದೆ. ಕೆಮ್ಮು ಶೀತವಾದಾಗ ಕಾಳು ಮೆಣಸಿನ ಕಷಾಯ ಮಾಡಿಕೊಂಡು ಕುಡಿದರೆ ಬೇಗ ವಾಸಿಯಾಗುತ್ತದೆ.
*ಬೆಳ್ಳುಳ್ಳಿ ಇದು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ಗುಣ ಹೊಂದಿದೆ. ಹಾಗೇ ಕಾಡುವ ಶೀತ, ಕೆಮ್ಮಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಡುಗೆಯಲ್ಲಿ ಇದನ್ನು ಜಾಸ್ತಿ ಬಳಸುವುದರಿಂದ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
*ಶುಂಠಿ ಇದರಲ್ಲಿ ಆ್ಯಂಟಿ-ಇನ್ ಫ್ಲಾಮೆಟರಿ ಪ್ರಾಪರ್ಟಿಸ್ ಇದೆ. ಗಂಟಲು ಕೆರೆತಕ್ಕೆ ಇದು ಹೇಳಿ ಮಾಡಿಸಿದ ಮದ್ದು. ಶುಂಠಿ ಕಷಾಯ ಮಾಡಿಕೊಂಡು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
* ಲಿಂಬೆಯಲ್ಲಿನ ಆ್ಯಂಟಿ ಫಂಗಲ್, ಹಾಗೂ ಆ್ಯಂಟಿಸೆಪ್ಟಿಕ್ ಗುಣವು ಶೀತವಾಗದಂತೆ ಕಾಪಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
*ಅರಿಶಿಣದಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್ ಪ್ರಾಪರ್ಟಿಸ್ ಇದೆ. ಬ್ಯಾಕ್ಟೀರಿಯಾ ಹಾಗೂ ವೈರಸ್ ನಿಂದ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಬಿಸಿ ಹಾಲಿಗೆ ಚಿಟಿಕೆ ಅರಿಶಿಣ ಹಾಕಿಕೊಂಡು ಕುಡಿಯುವುದರಿಂದ ಒಣಕೆಮ್ಮು ನಿವಾರಣೆಯಾಗುತ್ತದೆ.
* ಜೇನುತುಪ್ಪ ಬದಲಾಗುತ್ತಿರುವ ಹವಾಮಾನದಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಯನ್ನು ನಿವಾರಿಸುತ್ತದೆ. ಇದನ್ನು ಸೇವಿಸುವುದರಿಂದ ಅಲರ್ಜಿಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.