ಮಗುವಿಗೆ ಹಲ್ಲು ಬರುವಾಗ ಹಲವು ರೀತಿಯ ಕಿರಿಕಿರಿಗಳು ಕಾಣಿಸಿಕೊಳ್ಳುತ್ತವೆ. ಮಗು ತನ್ನ ಬೆರಳನ್ನು ಬಾಯಿಯಲ್ಲೇ ಇಟ್ಟುಕೊಳ್ಳುತ್ತದೆ. ಕೆಲವೊಮ್ಮೆ ಒಸಡಿನಲ್ಲಿ ಬಾವು ಕೂಡಾ ಕಂಡು ಬರಬಹುದು. ಇದನ್ನು ಹೀಗೆ ಪರಿಹರಿಸಬಹುದು.
ಮಾರುಕಟ್ಟೆಯಲ್ಲಿ ಸಿಗುವ ರಿಂಗ್ ತಂದುಕೊಡಿ. ಇದನ್ನು ಮಕ್ಕಳು ಕಚ್ಚುತ್ತಾ ಇರುವುದರಿಂದ ಒಸಡಿನ ಕಿರಿಕಿರಿ ಕಡಿಮೆಯಾಗುತ್ತದೆ.
ನಿಮ್ಮ ತೋರುಬೆರಳಿನಿಂದ ಮಗುವಿನ ಒಸಡಿನ ಮೇಲೆ ಮೃದುವಾಗಿ ಮಸಾಜ್ ಮಾಡಿ. ಅದಕ್ಕೂ ಮುನ್ನ ನಿಮ್ಮ ಕೈಗಳನ್ನು ತೊಳೆಯಲು ಮರೆಯದಿರಿ.
ಫ್ರಿಜ್ ನಲ್ಲಿಟ್ಟ ಚಮಚವನ್ನು ಕಚ್ಚಲು ಮಕ್ಕಳಿಗೆ ನೀಡಿ. ಇದರಿಂದಲೂ ತುರಿಕೆ ಹಾಗೂ ನೋವು ಕಡಿಮೆಯಾಗುತ್ತದೆ. ಮರದಿಂದ ತಯಾರಿಸಿದ ಸಣ್ಣ ಚಮಚ ಬಳಸುವುದು ಮತ್ತೂ ಒಳ್ಳೆಯದು. ಇದು ಒಸಡುಗಳಿಗೆ ನೈಸರ್ಗಿಕ ಒತ್ತಡ ಹಾಕುತ್ತದೆ.
ಮಗುವಿಗೆ ಮುಖಕ್ಕೆ ಮಸಾಜ್ ಮಾಡಿ. ಗಲ್ಲ ಮತ್ತು ಒಸಡುಗಳನ್ನು ಉಜ್ಜಿ. ಇದರಿಂದ ಮಗುವಿಗೆ ಕಿರಿಕಿರಿಯಾಗುವುದು ತಪ್ಪುತ್ತದೆ.