ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮಕ್ಕಳು ಮನೆಯಲ್ಲಿದ್ದರೂ ಆತಂಕ, ಶಾಲೆಗೆ ಹೋದರೂ ಆತಂಕ, ಗಂಡ ತಡರಾತ್ರಿ ಬಂದರೂ ಆತಂಕ, ಕಚೇರಿ ಕೆಲಸ ಮುಗಿಯದಿದ್ದರೂ ಆತಂಕ. ಹೀಗೆ ಪ್ರತಿದಿನವನ್ನು ಆತಂಕದಲ್ಲೇ ಕಳೆಯುವವರಿಗಾಗಿ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ.
ಎಷ್ಟೇ ಆತಂಕವಿದ್ದರೂ ಊಟ ತಿಂಡಿ ಬಿಟ್ಟು ಕೂರಬೇಡಿ. ಹೊಟ್ಟೆ ಹಸಿವು ಹೆಚ್ಚಿ ನಿಮ್ಮ ತಲೆಯೂ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆಯೇ ಹೊರತು ಸಮಸ್ಯೆಯಿಂದ ಹೊರಬರುವ ದಾರಿ ತಿಳಿಯುವುದಿಲ್ಲ. ಅದರ ಬದಲು ನಿಧಾನಕ್ಕೆ ಕೂತು ಆಲೋಚಿಸಿ.
ಆಳವಾದ ಉಸಿರನ್ನು ಪದೇ ಪದೇ ಬಿಡಿ. ಇದರಿಂದ ನಿಮ್ಮ ಗಮನ ಉಸಿರಾಟದ ಮೇಲೆ ಕೇಂದ್ರೀಕೃತವಾಗಲಿ. ಸಮಸ್ಯೆಯನ್ನು ಸ್ವೀಕರಿಸಲು ಕಲಿಯಿರಿ. ಮಾನಸಿಕವಾಗಿ ಕುಗ್ಗದಿರಿ. ಪರಿಹಾರಗಳ ಬಗ್ಗೆ ಯೋಚಿಸಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆಯಿರಲಿ.
ನಿತ್ಯ ಯೋಗ ಮಾಡಿ, ದೇಹ ಹಾಗೂ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಿ. ಒತ್ತಡ ನಿಯಂತ್ರಿಸುವ ಭಂಗಿಗಳ ಬಗ್ಗೆ ಕಲಿಯಿರಿ. ನಿತ್ಯ ಬಿಡದೆ ಅದನ್ನು ಅನುಸರಿಸಿ.