ಬೇಸಿಗೆಯಲ್ಲಿ ಮುಖವನ್ನು ಸೂರ್ಯನ ಬೆಳಕಿಗೊಡ್ಡುವುದರಿಂದ ಸಾಕಷ್ಟು ಹಾನಿಗೊಳಗಾಗುತ್ತದೆ. ಮುಖವೂ ಕೂಡ ತನ್ನ ಅಂದವನ್ನು ಕಳೆದುಕೊಳ್ಳುತ್ತದೆ. ಸೂಕ್ತ ಆರೈಕೆಯ ಮೂಲಕ ಮುಖವನ್ನು ಮತ್ತೆ ಅಂದಗಾಣಿಸಬಹುದು. ಇಲ್ಲಿವೆ ಬೇಸಿಗೆಯಲ್ಲಿ ಮಾಡಿಕೊಳ್ಳುವ ಒಂದಷ್ಟು ಫೇಸ್ ಪ್ಯಾಕ್ ಗಳ ಮಾಹಿತಿ.
ಬಾದಾಮಿ ಫೇಸ್ ಪ್ಯಾಕ್
ಎರಡು ಚಮಚ ಬಾದಾಮಿ ಎಣ್ಣೆ ಮತ್ತು 2-3 ಹನಿ ಜೊಜೊಬಾ ಎಣ್ಣೆ ತೆಗೆದುಕೊಂಡು ಮಿಶ್ರಣ ಮಾಡಿ. ನಿಧಾನವಾಗಿ ತ್ವಚೆಗೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದು ರಕ್ತ ಸಂಚಾರ ಹೆಚ್ಚಿಸುವುದು. ಹಾಗೇ ತ್ವಚೆಗೆ ಕಾಂತಿ ಸಿಗುವಂತೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಇ ತ್ವಚೆಗೆ ಉತ್ತಮ ಪೋಷಕಾಂಶ ನೀಡುವುದು.
ಹಾಲಿನ ಕ್ರೀಮ್ ಪ್ಯಾಕ್
ಒಂದು ಚಮಚ ಲಿಂಬೆ ರಸ ಮತ್ತು ¼ ಚಮಚ ಹಾಲಿನ ಕ್ರೀಮ್ ತೆಗೆದುಕೊಳ್ಳಿ. ಇದನ್ನು ಚರ್ಮದ ಮೇಲೆ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮೊದಲು ಈ ಪ್ಯಾಕ್ ಅನ್ನು ಹಚ್ಚಿಕೊಂಡು ಬೆಳಿಗ್ಗೆ ಮುಖ ತೊಳೆದರೆ ತ್ವಚೆ ಕಾಂತಿಯುತವಾಗಿ ಕಾಣುತ್ತದೆ.
ಓಟ್ಸ್ ಮತ್ತು ಜೇನುತುಪ್ಪ
ಈ ಫೇಸ್ ಮಾಸ್ಕ್ ಮುಖಕ್ಕೆ ಕಾಂತಿ ನೀಡುವುದು ಮಾತ್ರವಲ್ಲದೆ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುವುದು. ಎರಡು ಚಮಚ ಜೇನು ತುಪ್ಪದೊಂದಿಗೆ ಎರಡು ಚಮಚ ಓಟ್ಸ್ ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿ. ರಾತ್ರಿಯಿಡಿ ಹಾಗೆ ಬಿಟ್ಟು ಮರುದಿನ ಬೆಳಗ್ಗೆ ಮುಖ ತೊಳೆಯಿರಿ.