ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ನಿಮ್ಮ ಮುಖದ ತ್ವಚೆ ಡಲ್ ಆಗಿ ಕಾಣಿಸುತ್ತದೆ. ಹಾಗಾಗದಂತೆ ಮಾಡಲು ಮತ್ತು ಬೆಳಗ್ಗೆ ನಿಮ್ಮ ಮುಖ ಹೊಳೆಯುತ್ತಿರುವಂತೆ ಮಾಡಲು ಈ ಕೆಳಗಿನ ಟಿಪ್ಸ್ ಗಳನ್ನು ಫಾಲೋ ಮಾಡಿ.
ರಾತ್ರಿ ಮಲಗುವ ಮುನ್ನ ನಿಮ್ಮ ಮುಖಕ್ಕೆ ಮಸಾಜ್ ಮಾಡಿ. ಇದರಿಂದ ತ್ವಚೆಯ ಸತ್ತ ಜೀವಕೋಶಗಳು ದೂರವಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ. ಸಾಧ್ಯವಾದಷ್ಟು ಒತ್ತಡದಿಂದ ದೂರವಿರಿ.
ನಯವಾದ, ಹಿತಕರ ಅನುಭವ ನೀಡುವ ತಲೆದಿಂಬನ್ನೇ ಬಳಸಿ. ಗಟ್ಟಿಯಾದ ದಿಂಬು ನಿಮಗೆ ಬೆನ್ನು, ತಲೆ ನೋವನ್ನು ಕೊಡುವುದು ಮಾತ್ರವಲ್ಲ, ಮುಖದ ಮೇಲೆ ನೆರಿಗೆಗಳನ್ನೂ ಮೂಡಿಸಬಹುದು.
ನಿತ್ಯ ಸಾಕಷ್ಟು ನೀರು ಕುಡಿಯಲು ಮರೆಯದಿರಿ. ನೀರು ಕುಡಿದಷ್ಟೂ ನಿಮ್ಮ ತ್ವಚೆ ಸೌಂದರ್ಯ ಹೆಚ್ಚಿಸಿಕೊಳ್ಳುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಎರಡು ಗಂಟೆಗೊಮ್ಮೆಯಾದರೂ ನೀರು ಕುಡಿಯುವುದನ್ನು ಮರೆಯದಿರಿ.