ಒಂದೇ ಒಂದು ಸಣ್ಣ ಕಲೆಯಿಂದಾಗಿ ನಿಮ್ಮ ಇಷ್ಟದ ಡ್ರೆಸ್ಸೊಂದನ್ನು ಕಪಾಟಿನಲ್ಲಿ ಇಡುವಂತಾಗಿದೆಯಾ..? ಎಷ್ಟು ಜಾಗೃತೆ ವಹಿಸಿದ್ರೂ ಕೆಲವೊಮ್ಮೆ ನಮ್ಮ ಬಟ್ಟೆಗೆ ಕಲೆ ತಾಗಿಬಿಡುತ್ತದೆ. ಸಣ್ಣ ಕಲೆ ಚೆಂದದ ಡ್ರೆಸ್ ನ ಅಂದವನ್ನೇ ಕೆಡಿಸುತ್ತದೆ.
ಡ್ರೆಸ್ ಗೆ ಅಂಟಿದ ಕಲೆ ತೆಗೆಯುವುದು ಸುಲಭವಲ್ಲ. ಎಲ್ಲ ಕಲೆಗಳನ್ನು ಒಂದೇ ರೀತಿ ತೆಗೆಯಲು ಬರುವುದಿಲ್ಲ. ಯಾವ ಯಾವ ಕಲೆಯನ್ನು ಹೇಗೆ ತೆಗೆಯಬೇಕೆಂಬುದರ ವಿವರ ಇಲ್ಲಿದೆ.
ಬಟ್ಟೆಯ ಮೇಲೆ ಪಾನಿನ ಕಲೆಯಾಗಿದ್ದರೆ ಆ ಬಟ್ಟೆಯನ್ನು ಹುಳಿ ಮೊಸರು ಅಥವಾ ಒಡೆದ ಹಾಲಿನಲ್ಲಿ ಸ್ವಲ್ಪ ಸಮಯ ನೆನೆಸಿಡಿ. ನಂತರ ತೊಳೆಯಿರಿ. ಒಂದೆರಡು ಬಾರಿ ಹೀಗೆ ಮಾಡುವುದರಿಂದ ಬಟ್ಟೆಯ ಮೇಲಾಗಿರುವ ಕಲೆ ಸಂಪೂರ್ಣವಾಗಿ ಹೋಗುತ್ತದೆ.
ಐಸ್ ಕ್ರೀಮ್ ಕಲೆಗಳನ್ನು ಅಮೋನಿಯಾ ಬಳಸಿ ಸ್ವಚ್ಛಗೊಳಿಸಬಹುದು. ಬಟ್ಟೆ ಕೊಳಕಾಗಿದ್ದರೆ ಅಥವಾ ಬಟ್ಟೆಯ ಮೇಲೆ ರಕ್ತದ ಕಲೆಯಾಗಿದ್ದರೆ ಅದನ್ನು ಉಪ್ಪಿನಿಂದ ತೊಳೆಯಬೇಕು.
ಪೇಂಟ್ ಅಥವಾ ಗ್ರೀಸ್ ಕಲೆಗೆ ಸೀಮೆಎಣ್ಣೆ ಒಳ್ಳೆಯದು. ಸೀಮೆ ಎಣ್ಣೆ ಬಳಸಿ, ಬಿಸಿ ನೀರಿನಲ್ಲಿ ತೊಳೆದರೆ ಕಲೆ ಮಾಯವಾಗುತ್ತದೆ.