ಲಿಪ್ ಸ್ಟಿಕ್ ಹಚ್ಚುವುದರಿಂದ ಮುಖದ ಚೆಲುವು ಹೆಚ್ಚುವುದು ನಿಜ. ಆದರೆ ಕ್ವಾಲಿಟಿ ಲಿಪ್ ಸ್ಟಿಕ್ ಬಳಸದಿದ್ದರೆ ತುಟಿ ಸೌಂದರ್ಯ ಕೆಡುವುದು ಖಚಿತ.
ಪ್ರತಿದಿನ ಲಿಪ್ ಸ್ಟಿಕ್ ಬಳಸದಿದ್ದರೆ ತುಟಿ ಡ್ರೈ ಅನಿಸುತ್ತದೆ. ಹಾಗಾಗಿ ಲಿಪ್ ಸ್ಟಿಕ್ ಬೇಕೇ ಬೇಕು. ಜೊತೆಗೆ ಲಿಪ್ ಸ್ಟಿಕ್‌ನಿಂದ ತುಟಿ ಹಾಳಾಗಬಾರದೆಂದು ನೀವು ಬಯಸಿದರೆ ಇಲ್ಲಿವೆ ಕೆಲ ಟಿಪ್ಸ್.
ಮೂರು ವರ್ಷಕ್ಕಿಂತ ಹಳೆಯದಾದ ಲಿಪ್ ಸ್ಟಿಕ್ ಬಳಸಲೇಬೇಡಿ.
ವಾರದಲ್ಲಿ ಒಂದು ಅಥವಾ ಎರಡು ಬಾರಿ ತುಟಿಗೆ ಏನೂ ಹಚ್ಚಬೇಡಿ.
ಲಿಪ್ ಸ್ಟಿಕ್ ದಿನಾ ಬಳಸಿ ಬೋರು ಅನಿಸಿದರೆ ಲಿಪ್ ಗ್ಲಾಸ್ ಹಚ್ಚಬಹುದು.
ದಿನಕ್ಕೆ ಎರಡು ಬಾರಿಗಿಂತ ಅಧಿಕ ಬಾರಿ ಲಿಪ್ ಸ್ಟಿಕ್ ಹಚ್ಚಬೇಡಿ.
ಲಿಪ್ ಸ್ಟಿಕ್ ಹಚ್ಚುವ ಮುನ್ನ ಲಿಪ್ ಬಾಮ್ ಹಚ್ಚಿ.
ಒಳ್ಳೆಯ ಬ್ರಾಂಡೆಡ್ ಶಾಪ್ ಗಳಲ್ಲಿ ಲಿಪ್ ಸ್ಟಿಕ್ ಗಳನ್ನು ಖರೀದಿಸಿ. ಇಲ್ಲವಾದಲ್ಲಿ ಫೇಕ್ ಲಿಪ್ ಸ್ಟಿಕ್ ಗೆ ಹಣ ಸುರಿಬೇಕಾಗುತ್ತದೆ.
ಇನ್ನು ಲಿಪ್ ಸ್ಟಿಕ್ ಸಂಪೂರ್ಣವಾಗಿ ತುಟಿಯಿಂದ ತೆಗೆಯಬೇಕಿದ್ದಲ್ಲಿ, ಕೊಬ್ಬರಿ ಎಣ್ಣೆ ಬಳಸಿ ಸ್ವಚ್ಛಗೊಳಿಸಿ.