ಕಿಚನ್ ನಲ್ಲಿ ಕೆಲವಷ್ಟು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಮುಗಿಸಲು ಬಹಳ ಹೊತ್ತು ಬೇಕಾಗುತ್ತದೆ. ಅವುಗಳನ್ನು ಬೇಗ ಮಾಡಿ ಮುಗಿಸಬಹುದಾದ ಕೆಲವಷ್ಟು ಕಿಚನ್ ಹ್ಯಾಕ್ ಗಳು ಇಲ್ಲಿವೆ ಕೇಳಿ.
ಡ್ರೈ ಫ್ರುಟ್ ಕತ್ತರಿಸುವ ಮುನ್ನ ಒಂದು ಗಂಟೆ ಹೊತ್ತು ಅದನ್ನು ಫ್ರಿಜ್ ನಲ್ಲಿಡಿ. ಕತ್ತರಿಸುವ ಚಾಕುವನ್ನು ಬಿಸಿನೀರಿನಲ್ಲಿ ಅದ್ದಿ ತೆಗೆದರೆ ಬಹಳ ಒಳ್ಳೆಯದು.
ಎಲೆಕೋಸು ಬೇಯಿಸುವಾಗ ಸ್ವಲ್ಪ ವಿನಿಗರ್ ಹಾಕಿದರೆ ಬಣ್ಣ ಹಾಗೆಯೇ ಇರುತ್ತದೆ. ತೊಗರಿಬೇಳೆ ಕುಕ್ಕರ್ ನಲ್ಲಿ ಬೇಯಿಸಲು ಇಡುವ ಮುನ್ನ ತುಸು ಅರಶಿನ ಮತ್ತು ಎಣ್ಣೆ ಹಾಕಿಟ್ಟರೆ ಬೇಗ ಬೇಯುತ್ತದೆ.
ಮಾರುಕಟ್ಟೆಯಿಂದ ತಂದ ಕೊತ್ತಂಬರಿ ಸೊಪ್ಪನ್ನು ದಿನಪತ್ರಿಕೆಯಲ್ಲಿ ಸುತ್ತಿ ಫ್ರಿಜ್ ನಲ್ಲಿಡಿ. ತೊಳೆದಿಟ್ಟರೆ ಬೇಗ ಕೆಡುತ್ತದೆ. ತೊಳೆದು ಒಣಗಿಸಿ ಇಡಲು ಮರೆಯದಿರಿ.
ಟೀ ಪಾತ್ರೆ ಅಂಚುಗಳು ಕಪ್ಪಾಗಿದ್ದರೆ ಉಪ್ಪು ಹಾಕಿ ತಿಕ್ಕಿ ತೊಳೆಯಿರಿ. ಯಾವುದೇ ಕರಿದ ತಿಂಡಿ ತಯಾರಿಸುವಾ ಮೈದಾ, ಗೋಧಿ ಜೊತೆ ಸ್ವಲ್ಪ ಅಕ್ಕಿ ಹಿಟ್ಟು ಉದುರಿಸಿದರೆ ತಿಂಡಿ ಗರಿಗರಿಯಾಗಿ ಬರುತ್ತದೆ.