
ನೀವು ಆರೋಗ್ಯವಾಗಿ ಇರಬೇಕು ಅಂದ್ರೆ ಹೆಲ್ದಿ ಈಟಿಂಗ್, ಹೆಲ್ದಿ ಲಿವಿಂಗ್ ಎರಡನ್ನೂ ಅಭ್ಯಾಸ ಮಾಡಿಕೊಳ್ಳಿ. ಸಕ್ಕರೆಯನ್ನು ಆದಷ್ಟು ದೂರವಿಟ್ರೆ ನಿಮ್ಮ ಆರೋಗ್ಯ ಎಷ್ಟೋ ಸುಧಾರಿಸೋದ್ರಲ್ಲಿ ಅನುಮಾನವಿಲ್ಲ. ನೀವು ತಿಂಡಿಪೋತ ಆಗಿದ್ರೆ ಪಿಜ್ಜಾದಂತಹ ಜಂಕ್ ಫುಡ್ ಹಾಗೂ ಸ್ವೀಟ್ ನಿಂದ ದೂರವಿರೋದು ಬಹಳ ಕಷ್ಟ.
ಹಾಗಾಗಿ ನಿಧಾನವಾಗಿ ನೀವು ಆರೋಗ್ಯಕರ ಆಹಾರ ಸೇವನೆ ಆರಂಭಿಸಬೇಕು. ಇದಕ್ಕೆ ನಿಮ್ಮ ಪ್ಲಾನ್ ಅತ್ಯಂತ ವಾಸ್ತವಿಕವಾಗಿರಲಿ. ಅತಿಯಾದ ಸೇವನೆಯಿಂದ ದೂರವಿರಲು ಚಿಕ್ಕ ಚಿಕ್ಕ ಮೀಲ್ ಸೇವಿಸಿ. ದಿನಕ್ಕೆ 3 ಮೀಲ್ಸ್, 2 ಸ್ನಾಕ್ಸ್ ಇದ್ರೆ ಸಾಕು.
ಗುಡ್ ಫ್ಯಾಟ್ ಕಡೆಗೆ ಗಮನ : ಡಯಟ್ ಅಂದ ತಕ್ಷಣ ಕೊಬ್ಬುಯುಕ್ತ ಎಲ್ಲಾ ಆಹಾರವನ್ನು ದೂರ ಮಾಡಬೇಕು ಎಂದರ್ಥವಲ್ಲ. ಟ್ರಾನ್ಸ್ ಫ್ಯಾಟ್, ಸ್ಯಾಚುರೇಟೆಡ್ ಫ್ಯಾಟ್, ಮೋನೋ ಸ್ಯಾಚುರೇಟೆಡ್ ಫ್ಯಾಟ್, ಪಾಲಿ ಸ್ಯಾಚುರೇಟೆಡ್ ಫ್ಯಾಟ್ ಹೀಗೆ ಆಹಾರದಲ್ಲಿ ನಾಲ್ಕು ಬಗೆಯ ಕೊಬ್ಬು ಇರುತ್ತದೆ. ಇವುಗಳಲ್ಲಿ ನೀವು ಟ್ರಾನ್ಸ್ ಫ್ಯಾಟ್ ಸೇವಿಸದೇ ಇದ್ರೆ ಆಯ್ತು. ಉಳಿದ ಫ್ಯಾಟ್ ಗಳು ನಿಮ್ಮ ಹಾರ್ಮೋನ್ ಉತ್ಪಾದನೆ, ಮೆದುಳಿನ ಕಾರ್ಯಾಚರಣೆಗೆ ಸಹಕರಿಸುತ್ತವೆ.
ಅತಿಥಿಗಳಿಗೂ ಕೊಡಿ ಆರೋಗ್ಯಕರ ತಿನಿಸು : ನಿಮ್ಮ ಅಡುಗೆ ಮನೆಯಲ್ಲಿ ಅತಿಥಿಗಳಿಗಾಗಿ ಜಂಕ್ ಫುಡ್ ತಂದಿಡಬೇಕಾದ ಅಗತ್ಯವಿಲ್ಲ. ಅವರಿಗೂ ಆರೋಗ್ಯಕರ ತಿನಿಸನ್ನೇ ಕೊಡಿ. ಹಾಗೆ ಮಾಡಿದ್ರೆ ನಿಮಗೂ ಅಂತಹ ಸ್ನಾಕ್ಸ್ ತಿನ್ನಬೇಕೆಂಬ ಆಸೆಯಾಗುವುದಿಲ್ಲ.
ಬೆಳಗಿನ ತಿಂಡಿ ಮಿಸ್ ಮಾಡಬೇಡಿ : ಬೆಳಗಿನ ತಿಂಡಿ ಅತ್ಯಂತ ಅವಶ್ಯಕ. ಯಾಕಂದ್ರೆ ನಿಮ್ಮ ದೇಹ 10 ಗಂಟೆಗೂ ಅಧಿಕ ಕಾಲ ಯಾವುದೇ ಆಹಾರ ಸೇವಿಸಿರುವುದಿಲ್ಲ. ಹಾಗಾಗಿ ಬ್ರೇಕ್ ಫಾಸ್ಟ್ ಸ್ಕಿಪ್ ಮಾಡೋದು ಬೇಡ, ಸ್ವಲ್ಪ ಕ್ಯಾಲೋರಿ ಕಡಿಮೆ ಮಾಡಿ ಅಷ್ಟೆ.
ಸ್ನಾಕ್ಸ್ ಒಂದು ಮುಷ್ಟಿಯಷ್ಟು ಮಾತ್ರ : ಚಿಪ್ಸ್ ಅಥವಾ ಇನ್ಯಾವುದೋ ಕರಿದ ತಿಂಡಿಯ ಪ್ಯಾಕೆಟ್ ಅನ್ನೇ ಮುಂದಿಟ್ಟುಕೊಂಡ್ರೆ ತಿನ್ನುತ್ತಲೇ ಇರಬೇಕು ಎನಿಸುತ್ತದೆ. ಹಾಗಾಗಿ ಪುಟ್ಟ ಬೌಲ್ ನಲ್ಲಿ ಒಂದು ಮುಷ್ಟಿಯಷ್ಟು ಸ್ನಾಕ್ಸ್ ಹಾಕಿಕೊಂಡು ಅಷ್ಟೇ ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
ತಾಜಾ ತಿನಿಸುಗಳಿಗೆ ಆದ್ಯತೆ : ನೀವು ಸೇವಿಸುತ ಆಹಾರ ತಾಜಾ ಆಗಿದ್ದಷ್ಟು ಉತ್ತಮ. ತಾಜ ಹಣ್ಣು, ತರಕಾರಿ ಡಯಟ್ ನಲ್ಲಿರಲಿ. ಫೈಬರ್, ನ್ಯೂಟ್ರಿಶಿಯನ್ಸ್, ಮಿನರಲ್, ವಿಟಮಿನ್ ಕೊರತೆಯಾಗಬಾರದು. ಬೇರೆ ಬೇರೆ ಬಣ್ಣಗಳ ಹಣ್ಣು ತರಕಾರಿ ಸೇವನೆ ಉತ್ತಮ.