alex Certify ʼಗಾರ್ಡನಿಂಗ್ʼ ಮಾಡುವವರಿಗೆ ಇಲ್ಲಿವೆ ಒಂದಿಷ್ಟು ಸಲಹೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗಾರ್ಡನಿಂಗ್ʼ ಮಾಡುವವರಿಗೆ ಇಲ್ಲಿವೆ ಒಂದಿಷ್ಟು ಸಲಹೆಗಳು

ಮನೆ ಮುಂದೆ ಹಸಿರಾಗಿದ್ದರೆ ಮನಸ್ಸಿಗೂ ಒಂದು ರೀತಿ ಹಿತ. ವಾತಾವರಣ ಕೂಡ ತಂಪಾಗಿರುತ್ತದೆ. ಅದಕ್ಕೆ ಮನೆ ಮುಂದೆ ಗಾರ್ಡನ್ ಇದ್ರೆ ಚಂದ. ಆದರೆ ಈ ಗಾರ್ಡನ್ ಮೇಂಟೇನ್ ಮಾಡಲು ಕೆಲ ಟಿಪ್ಸ್ ಗಳನ್ನು ಪಾಲಿಸಿದರೆ ಕೈತೋಟ ಇನ್ನಷ್ಟು ಸುಂದರವಾಗಿ ಕಾಣುತ್ತದೆ. ‌

* ಗಿಡಗಳಿಗೆ ಗಂಜಲದಿಂದ ಪೋಷಣೆ ಮಾಡಿ.

* ಕೈತೋಟದಲ್ಲಿ ಉತ್ತಮವಾಗಿ ಗಿಡವನ್ನು ಬೆಳೆಸಿದರೂ ಕೆಲವೊಮ್ಮೆ ಗಿಡಕ್ಕೆ ರೋಗ ಬಂದು ಫಸಲು ಕೊಡದೆ ಹಾಗೆಯೇ ಒಣಗಿ ಹೋಗುತ್ತದೆ. ಅದಕ್ಕಾಗಿ ರಾಸಾಯನಿಕ ಔಷಧಿ ಬಳಸುವ ಬದಲು ಮನೆಯ ಔಷಧವನ್ನು ಬಳಸಿದರೆ ಉತ್ತಮ.

* ಯಾವುದೇ ಗಿಡಕ್ಕಾದರೂ ರೋಗ ಬಂದರೆ ಮೊದಲಿಗೆ ಅದಕ್ಕೆ ತಿಳಿಯಾದ ಮಜ್ಜಿಗೆಯನ್ನು ಉಪ್ಪು ಮಿಶ್ರಣ ಮಾಡಿಕೊಂಡು ಸಿಂಪಡಿಸಿದರೆ ಉತ್ತಮ.

* ಹಸುವಿನ ಗಂಜಲ ಮತ್ತು ಬೇವಿನ ಸೊಪ್ಪಿನ ರಸವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಗಿಡಕ್ಕೆ ಸಿಂಪಡಿಸಿದರೆ ಕ್ರಿಮಿಕೀಟಗಳಿದ್ದರೆ ಸಾಯುತ್ತವೆ.

ಅದರಲ್ಲೂ ಹಸಿರು ಹುಳುಗಳು ಗಿಡದ ಎಲೆಗಳನ್ನೆಲ್ಲಾ ತಿಂದು ಚೆನ್ನಾಗಿ ಬೆಳೆಯಲು ಬಿಡುವುದಿಲ್ಲ. ಇದರಿಂದ ಫಸಲು ಕೂಡ ಕಡಿಮೆಯಾಗುತ್ತದೆ.
* ಬಾಲ್ಕನಿ ಗಾರ್ಡನ್‌ನಲ್ಲಿ ಕುಂಡಗಳನ್ನು ಹೆಚ್ಚಾಗಿ ಬಳಸುವುದರಿಂದ ನೀವು ಆಯ್ಕೆ ಮಾಡುವ ಗಿಡಗಳು ಕಡಿಮೆ ಆಳದ ಬೇರನ್ನು ಹೊಂದಿರಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...