ಮನೆಯನ್ನು ಸ್ವಚ್ಛವಾಗಿಡುವುದು ಎಷ್ಟು ಮುಖ್ಯವೋ, ಈ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸುವುದು ಕೂಡಾ ಅಷ್ಟೇ ಮುಖ್ಯ. ಅವುಗಳು ಯಾವುವು ಎಂದಿರಾ?
ಮನೆಯ ನೆಲ ಒರೆಸುವ ವೇಳೆ ಅತಿಯಾದ ನೀರು ಬಳಸದಿರಿ. ಇದರಿಂದ ನೆಲದಲ್ಲಿ ಕಲೆಗಳು ಉಳಿದುಕೊಳ್ಳುತ್ತವೆ. ಒಣಗಲು ಹೆಚ್ಚು ಸಮಯ ಬೇಕಾಗುತ್ತದೆ. ಮಕ್ಕಳು ಹಾಗು ಮನೆಯ ಹಿರಿಯರು ಜಾರಿ ಬೀಳುವ ಸಂಭವವೂ ಹೆಚ್ಚಿರುತ್ತದೆ. ಇದರಿಂದ ಸ್ವಚ್ಛವಾಗುವುದೂ ನಿಧಾನವಾಗುತ್ತದೆ.
ನೆಲ ಒರೆಸಲು ಅತಿಯಾದ ಸೋಪ್ ಬಳಸುವುದರಿಂದ ನೆಲದ ಮೇಲೆ ನೊರೆಯ ಪದರ ನಿರ್ಮಾಣವಾಗುತ್ತದೆ. ಇದನ್ನು ಮಿತಿಯಾಗಿ ಬಳಸಿದರೆ ಮಾತ್ರ ಲಾಭ ದೊರೆಯುತ್ತದೆ.
ನೆಲದ ಗುಣಮಟ್ಟದ ಮೇಲೆ ಒರೆಸುವ ಬಟ್ಟೆಯನ್ನು ನಿರ್ಧರಿಸಿ. ಒದ್ದೆ ಬಟ್ಟೆ ಇಲ್ಲವೇ ಸ್ಪಾಂಜ್ ಅತ್ಯುತ್ತಮ ಆಯ್ಕೆ. ಸ್ಕ್ರಬರ್ ನೆಲಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆಗಳಿವೆ.
ವ್ಯಾಕ್ಯೂಮ್ ಕ್ಲೀನರ್ ಬಳಸಿದ ಬಳಿಕ ನೆಲ ಒರೆಸುವುದು ಒಳ್ಳೆಯದು. ಇದರಿಂದ ಧೂಳು ಹೊರಹೋಗಿ ನೆಲ ಬಹುಬೇಗ ಸ್ವಚ್ಛವಾಗುತ್ತದೆ.