alex Certify ಶುಚಿಯಾದ ಮತ್ತು ರುಚಿಯಾದ ಅಡುಗೆ ತಯಾರಿಗೆ ಇಲ್ಲಿವೆ ಕೆಲ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಚಿಯಾದ ಮತ್ತು ರುಚಿಯಾದ ಅಡುಗೆ ತಯಾರಿಗೆ ಇಲ್ಲಿವೆ ಕೆಲ ಟಿಪ್ಸ್

ಕೆಲವರು ಎಷ್ಟೇ ಚಂದ ಅಡುಗೆ ಮಾಡಿ ಬಡಿಸಿದರು ಅದರ ರುಚಿ ಅಷ್ಟಕ್ಕೆ ಅಷ್ಟೇ. ಕಾರಣ ಬೇಗ ಬೇಗ ಅಡುಗೆ ಮುಗಿಸುವ ಅವಸರ ಇರಬಹುದು. ಇಲ್ಲಾ ಅಡುಗೆಯನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡದೇ ಇರಬಹುದು.

ಆದರೆ ಕೆಲವೊಂದು ಸಿಂಪಲ್ ಟಿಪ್ಸ್ ಗಳನ್ನು ಅನುಸರಿಸಿದರೆ ಅಡುಗೆ ರುಚಿ ಸುಧಾರಿಸುತ್ತದೆ. ಇಲ್ಲಿದೆ ಕೆಲ ಸಲಹೆಗಳು.

* ಪುದೀನ ಚಟ್ನಿ ತಯಾರಿಸುವಾಗ ಸ್ವಲ್ಪ ನಿಂಬೆರಸ ಹಾಕಿ ಅರೆದರೆ ಚಟ್ನಿಯ ಬಣ್ಣ ಹಸಿರಾಗಿಯೇ ಉಳಿಯುತ್ತದೆ.

* ಪುದೀನ ಹಾಗೂ ಕರಿಬೇವಿನ ಸೊಪ್ಪುಗಳನ್ನು ತೊಳೆದು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಹಸಿ ಸೊಪ್ಪು ಇಲ್ಲದಿರುವ ಸಮಯದಲ್ಲಿ ಬಳಸಬಹುದು.

* ಈರುಳ್ಳಿ ತುದಿಗಳನ್ನು ಕತ್ತರಿಸಿ, ಎರಡು ಭಾಗವಾಗಿ ಕತ್ತರಿಸಿ ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿ ಕತ್ತರಿಸಿದರೆ ಕಣ್ಣು ಉರಿಯುವುದಿಲ್ಲ ಹಾಗೂ ಸಿಪ್ಪೆ ತೆಗೆಯುವುದು ಸುಲಭವಾಗುತ್ತದೆ.

* ಸೀಮೆ ಬದನೆಕಾಯಿಗಳನ್ನು 2 ಭಾಗವಾಗಿ ಕತ್ತರಿಸಿ ನೀರಿನಲ್ಲಿ ಮುಳುಗಿಸಿಟ್ಟರೆ ಕೈ ಅಂಟಾಗುವುದಿಲ್ಲ.

* ತರಕಾರಿಗಳನ್ನು ತೀರ ಚಿಕ್ಕದಾಗಿ ಕತ್ತರಿಸಬಾರದು. ಚಿಕ್ಕ ಚಿಕ್ಕ ತುಂಡುಗಳಾದಷ್ಟು ಅವುಗಳಲ್ಲಿರುವ ಲವಣಾಂಶ, ಪೋಷಕಾಂಶ ಕಡಿಮೆಯಾಗುತ್ತದೆ.

* ಬೇಯಿಸಿದ ತರಕಾರಿಗಳನ್ನು ಆದಷ್ಟು ಬೇಗ ಬಳಸಬೇಕು. ಹಳತಾದರೆ ಅಥವಾ ಫ್ರಿಡ್ಜ್ ನಲ್ಲಿ ಇಟ್ಟರೆ ಅವುಗಳ ಪೋಷಕಾಂಶ ಕಡಿಮೆಯಾಗುತ್ತದೆ.

* ತರಕಾರಿಗಳನ್ನು ಕತ್ತರಿಸಿದ ಮೇಲೆ ಕೈ ಕಪ್ಪಾಗಿದ್ದರೆ ನಿಂಬೆ ಸಿಪ್ಪೆಯಿಂದ ತಿಕ್ಕಿ ಶುಚಿಗೊಳಿಸಿ ಕೊಳ್ಳಬಹುದು.

* ವಿಟಮಿನ್ ಸಿ ಅತ್ಯಧಿಕ ಪ್ರಮಾಣದಲ್ಲಿರುವ ನಿಂಬೆ ಹಣ್ಣಿನ ಸಿಪ್ಪೆಗಳನ್ನು ಬಿಸಾಡದೆ, ಉಪಯೋಗಿಸಿದ ನಂತರವೂ ಉಪ್ಪಿನಕಾಯಿಯನ್ನು ತಯಾರಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...