alex Certify ಎಳೆಕಂದಮ್ಮನನ್ನು ಮಲಗಿಸಲು ಇಲ್ಲಿದೆ ಸರಳ ʼಉಪಾಯʼಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಳೆಕಂದಮ್ಮನನ್ನು ಮಲಗಿಸಲು ಇಲ್ಲಿದೆ ಸರಳ ʼಉಪಾಯʼಗಳು

ಪಿಳಿ ಪಿಳಿ ಕಂಗಳು, ಮುದ್ದು ಮುದ್ದು ತುಟಿಗಳು, ಬೆಣ್ಣೆ ಮುದ್ದೆಯಂಥ ಮುಖ! ಹಾಲುಗಲ್ಲದ ಕಂದಮ್ಮ ಅಂದ್ರೆ ಎಂಥವರ ಮೊಗದಲ್ಲೂ ಮಂದಹಾಸ ಮೂಡುತ್ತದೆ. ಆದರೆ ಈ ಮುಗ್ಧ ಕಂದಮ್ಮಗಳು ಮಾತ್ರ ರಾತ್ರಿಯ ಹೊತ್ತು ಬೇಗ ನಿದ್ರಾ ದೇವಿ ಮಡಿಲಿಗೆ ಜಾರದೇ ಇರುವುದು ತಾಯಂದಿರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುತ್ತದೆ. ಹಾಗಾದ್ರೆ ಈ ಎಳೆ ಕಂದಮ್ಮಗಳನ್ನು ಬಹು ಬೇಗನೆ ನಿದ್ದೆ ಮಾಡಿಸೋದು ಹೇಗೆ ಅನ್ನೋ ಗೊಂದಲ ನಿಮಗೂ ಕಾಡ್ತಿದ್ರೆ, ಅದಕ್ಕೆ ಇಲ್ಲಿದೆ ಪರಿಹಾರ.

 1. ಎಣ್ಣೆ ಮಸಾಜ್ : ಎಳೆ ಕಂದಮ್ಮಗಳಿಗೆ ಬೆಳಗಿನ ಹೊತ್ತು ಎಣ್ಣೆಯ ಮಸಾಜ್ ಮಾಡುವುದರಿಂದ ಬಹಳ ಅಪ್ಯಾಯಮಾನವೆನಿಸುತ್ತದೆ. ದಿನ ಪೂರ್ತಿಯ ಆಯಾಸವೆಲ್ಲ ಎಣ್ಣೆಯ ಮಸಾಜ್ನಲ್ಲಿ ಕಳೆದು ಹೋಗುತ್ತದೆ. ಆ ನಂತರ ಬಿಸಿ ನೀರಿನ ಸ್ನಾನ ದಣಿವು ನಿವಾರಿಸುವುದಲ್ಲದೇ ಮಗು ಚೆನ್ನಾಗಿ ನಿದ್ರಿಸುತ್ತವೆ.

2. ಸಂಗೀತ : ಎಳೆ ಮಕ್ಕಳಿಗೆ ಸೌಮ್ಯವಾದ ಶಬ್ಧ ಹೊಮ್ಮಿಸುವಂತಹ ವಾದನದ ಇಲ್ಲವೇ ಆಲಾಪ ಇರುವಂತಹ ಸಂಗೀತವನ್ನು ಕೇಳಿಸುವುದರಿಂದ ಎಳೆ ಮಕ್ಕಳು ನಿದಿರೆಗೆ ಜಾರುತ್ತಾರೆ.

3. ಹಣೆ, ಅಂಗೈ ಮತ್ತು ಪಾದಕ್ಕೆ ಮಸಾಜ್ : ಎಳೆ ಮಕ್ಕಳನ್ನು ಮಡಿಲಲ್ಲಿ ಮಲಗಿಸಿಕೊಂಡು ಹಣೆಯ ಮೇಲೆ ನಿಧಾನವಾಗಿ ಮಸಾಜ್ ಮಾಡಬೇಕು. ಹುಬ್ಬಿನ ಮೇಲೆ ಮೃದುವಾಗಿ ಮಸಾಜ್ ನೀಡಬೇಕು. ಅಲ್ಲದೇ ಮಗುವಿನ ಅಂಗೈ ಮತ್ತು ಪಾದಗಳನ್ನು ನಿಧಾನವಾಗಿ ಒತ್ತುವುದರಿಂದ ಎಳೆ ಕಂದಮ್ಮಗಳು ಗಾಢ ನಿದ್ರೆಗೆ ಜಾರುತ್ತವೆ.

4.ಮಂದ ಬೆಳಕಿನ ವಿನ್ಯಾಸವಿರಲಿ: ಮಕ್ಕಳು ಮಲಗುವಾಗ ರಾತ್ರಿಯ ಭಾವ ಹೊಮ್ಮಿಸುವಂಥ ಮಂದ ಬೆಳಕಿನ ವಿನ್ಯಾಸವಿದ್ದರೇ ಅನುಕೂಲ. ಇದರಿಂದ ಮಕ್ಕಳಿಗೆ ಬೇಗ ನಿದ್ದೆ ಹತ್ತುತ್ತದೆ.

5.ಹಾಲುಣಿಸುವುದು : ಮಗುವಿಗೆ ನಿದ್ದೆ ಜೊಂಪು ಹತ್ತುವವರೆಗೂ ಹಾಲು ನೀಡಬೇಕು. ಈ ಹಂತದಲ್ಲಿ ಮಗು ನಿದ್ದೆಗೆ ಜಾರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜೋಂಪು ಹತ್ತಿದ ಕೂಡಲೇ ಮಗುವನ್ನು ಮಲಗಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...