ಹೆಚ್ಚು ಕೆಲಸ ಮಾಡಿದಾಗ ದೇಹ ಆಯಾಸಗೊಳ್ಳುವುದು ಸಹಜ. ಅದೂ ವಯಸ್ಸಾಗುತ್ತಿದ್ದಂತೆ ಸುಸ್ತು ಹೆಚ್ಚುತ್ತದೆ. ಅದನ್ನು ಪರಿಹರಿಸಲು ಒಂದಷ್ಟು ಮನೆ ಮದ್ದುಗಳಿವೆ.
ಸೋರೆಕಾಯಿಯನ್ನು ಚೆನ್ನಾಗಿ ತೊಳೆದು ಕತ್ತರಿಸಿ ಮಿಕ್ಸಿಯಲ್ಲಿ ರುಬ್ಬಿ ರಸವನ್ನು ಸೋಸಿ ಅದಕ್ಕೆ ಒಂದು ಚಮಚ ಕಲ್ಲು ಉಪ್ಪು ಮತ್ತು ನಿಂಬೆ ರಸವನ್ನು ಮಿಕ್ಸ್ ಮಾಡಿ. ಅನುಕೂಲವಾದ ಸಮಯದಲ್ಲಿ ಅಂದರೆ ರಾತ್ರಿ ಅಥವಾ ಬೆಳಿಗ್ಗೆ ಕುಡಿಯಬೇಕು. ಆಹಾರವನ್ನು ಸೇವಿಸುವ ಮೊದಲು ಇಲ್ಲವೇ ಊಟ ಮಾಡಿದ ನಂತರ ಕುಡಿಯಬೇಕು.
ಕಪ್ಪುದ್ರಾಕ್ಷಿಯ ಜ್ಯೂಸ್ ತಯಾರಿಸಿ, ಕಾಳು ಮೆಣಸಿನ ಪುಡಿ ಜೊತೆಗೆ ಕಲ್ಲುಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಕೂಡ ಊಟ ಮಾಡಿದ ಒಂದು ಗಂಟೆ ನಂತರ ಅಥವಾ ಮೊದಲು ಕುಡಿಯಬೇಕು.
ಕುದಿಯುತ್ತಿರುವ ಹಾಲಿಗೆ ಬಾಳೆಹಣ್ಣು, ನೆನೆಸಿದ ಖರ್ಜೂರ ಮತ್ತು ನೆನೆಸಿದ ಬಾದಾಮಿಯನ್ನು ಕತ್ತರಿಸಿ ಹಾಕಿ ಜ್ಯೂಸ್ ತಯಾರಿಸಿ, ಕಲ್ಲುಸಕ್ಕರೆ ಹಾಕಿ ಕುಡಿಯಬೇಕು. ಒಣದ್ರಾಕ್ಷಿ ನೆನೆಸಿದ ನೀರಿಗೆ ನಿಂಬೆ ರಸವನ್ನು ಹಿಂಡಿ ರಾತ್ರಿ ಪೂರ್ತಿ ನೆನೆಯಲು ಬಿಡಬೇಕು. ಬೆಳಿಗ್ಗೆ ಇವೆರಡನ್ನೂ ಒಟ್ಟಿಗೆ ಸೇವಿಸಬೇಕು. ಇದು ಮಕ್ಕಳಿಗೂ ಶಕ್ತಿ ಕೊಡುತ್ತದೆ. ನಿತ್ಯ ಈ ವಿಧಾನ ಅನುಸರಿಸಿದರೆ ಸುಸ್ತಿನಿಂದ ದೂರವಿರಬಹುದು.