ಕ್ರಿಕೆಟ್, ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸುವಾಗ ಒತ್ತಡ ಹಾಗೂ ಕಾತರ ಸಹಜ. ಅದೇ ರೀತಿ ಲೋಕಸಭಾ ಚುನಾವಣೆ ಫಲಿತಾಂಶದ ಸಂದರ್ಭದಲ್ಲೂ ಜನರು ತೀವ್ರ ಒತ್ತಡ ಅನುಭವಿಸಿದ್ದಾರೆ. ಸೋಲು-ಗೆಲುವಿನ ಲೆಕ್ಕಾಚಾರ ಜನರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಫಲಿತಾಂಶದ ಆಘಾತ ತಡೆದುಕೊಳ್ಳಲಾಗದೇ ವ್ಯಕ್ತಿಯೊಬ್ಬ ಸಾವನ್ನಪ್ಪಿರುವುದು ಕೂಡ ಬೆಳಕಿಗೆ ಬಂದಿದೆ.
ಇಂತಹ ಸಂದರ್ಭದಲ್ಲಿ ಒತ್ತಡವನ್ನು ತಡೆದುಕೊಳ್ಳಲು ಕೆಲವೊಂದು ಆಹಾರಗಳನ್ನು ಸೇವನೆ ಮಾಡಬೇಕು. ಅವುಗಳ ಸೇವನೆಯಿಂದ ಒತ್ತಡ ಕಡಿಮೆಯಾಗುತ್ತದೆ, ಮನಸ್ಸು ಕೊಂಚ ನಿರಾಳವಾಗುತ್ತದೆ.
ಮೊಸರು
ಒತ್ತಡವನ್ನು ಕಡಿಮೆ ಮಾಡಲು ಮೊಸರು ಪರಿಣಾಮಕಾರಿಯಾಗಿದೆ. ಮೊಸರಿನಲ್ಲಿ ಕಂಡುಬರುವ ಪ್ರೋಬಯಾಟಿಕ್‌ಗಳು ಕರುಳಿನ ಆರೋಗ್ಯಕ್ಕೆ ಬೆಸ್ಟ್. ಇದು ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೆ ಮೊಸರಿನಲ್ಲಿ ಇರುವ ಕ್ಯಾಲ್ಸಿಯಂ ಕೂಡ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಡಾರ್ಕ್ ಚಾಕೊಲೇಟ್
ವಿಪರೀತ ಟೆನ್ಷನ್ ಹಾಗೂ ಒತ್ತಡವೆನಿಸಿದಾಗ ಸ್ವಲ್ಪ ಡಾರ್ಕ್ ಚಾಕೊಲೇಟ್ ತಿನ್ನಿ. ಇದರಲ್ಲಿರುವ ಕೋಕಾ, ಎಂಡಾರ್ಫಿನ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಮನಸ್ಸನ್ನು ಶಾಂತವಾಗಿಡುತ್ತದೆ.
ನಟ್ಸ್ ಮತ್ತು ಸೀಡ್ಸ್
ಬಾದಾಮಿ, ವಾಲ್‌ನಟ್ಸ್, ಗೋಡಂಬಿ ಮತ್ತು ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿರುತ್ತವೆ. ಈ ಪೋಷಕಾಂಶಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸನ್ನು ಶಾಂತವಾಗಿರಿಸಲು ಸಹಾಯ ಮಾಡುತ್ತವೆ.
ಬಾಳೆಹಣ್ಣು
ಬಾಳೆಹಣ್ಣು ಪೊಟ್ಯಾಸಿಯಮ್‌ನ ಅತ್ಯುತ್ತಮ ಮೂಲವಾಗಿದೆ. ಪೊಟ್ಯಾಸಿಯಮ್ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ 6 ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣುಗಳಲ್ಲಿ ಎಂಟಿಒಕ್ಸಿಡೆಂಟ್‌ಗಳು ಇರುತ್ತವೆ. ಇವುಗಳ ಸೇವನೆಯಿಂದ ಜೀವಕೋಶಗಳಿಗೆ ಹಾನಿಯಾಗುವುದಿಲ್ಲ. ಈ ಹಣ್ಣುಗಳು ಒತ್ತಡ ಹೆಚ್ಚಾಗದಂತೆ ತಡೆಯುತ್ತದೆ. ತೀವ್ರ ಒತ್ತಡದಲ್ಲಿದ್ದಾಗ 10-12 ಬೆರ್ರಿ ಹಣ್ಣುಗಳನ್ನು ತಿನ್ನಬಹುದು.