ದೇಹದ ಮೇಲೆ ಯಾವುದೆ ಕಲೆ ಇರಬಾರದೆಂದು ಪ್ರತಿಯೊಬ್ಬ ಮಹಿಳೆ ಬಯಸ್ತಾಳೆ. ಆದ್ರೆ ಹೆರಿಗೆ ನಂತ್ರ ಕಾಡುವ ಈ ಸ್ಟ್ರೆಚ್ ಮಾರ್ಕ್ ಸುಲಭವಾಗಿ ಹೋಗುವುದಿಲ್ಲ. ಮಾರುಕಟ್ಟೆಗೆ ಅನೇಕ ಸ್ಟ್ರೆಚ್ ಮಾರ್ಕ್ ಕ್ರೀಮ್ ಗಳು ಬಂದಿವೆ. ಅನೇಕ ಬಾರಿ ಇದು ಪ್ರಯೋಜನಕ್ಕೆ ಬರುವುದಿಲ್ಲ.
ಸ್ಟ್ರೆಚ್ ಮಾರ್ಕ್ ಅನೇಕ ಮಹಿಳೆಯರ ಕಿರಿಕಿರಿಗೆ ಕಾರಣವಾಗುತ್ತದೆ. ಸುಂದರ ಡ್ರೆಸ್ ಧರಿಸಲು ಇದು ಅಡ್ಡಿ ಎನ್ನುವವರಿದ್ದಾರೆ. ನೀವು ಸ್ಟ್ರೆಚ್ ಮಾರ್ಕ್ ಕಿರಿಕಿರಿ ಅನುಭವಿಸುತ್ತಿದ್ದರೆ ಸುಂದರ ತ್ವಚೆ ಪಡೆಯಲು ಕೆಲವೊಂದು ಸುಲಭ ಟಿಪ್ಸ್ ಬಳಸಿ. ಸ್ಟ್ರೆಚ್ ಮಾರ್ಕ್ ಇಲ್ಲದ ತ್ವಚೆ ಪಡೆಯಿರಿ.
ನೀರು, ಆರೋಗ್ಯದ ಜೊತೆಗೆ ಸೌಂದರ್ಯವನ್ನು ಕಾಪಾಡುತ್ತದೆ. ಪ್ರತಿದಿನ 10 ಗ್ಲಾಸ್ ನೀರನ್ನು ಅವಶ್ಯವಾಗಿ ಕುಡಿಯಿರಿ. ಹೀಗೆ ಮಾಡುವುದರಿಂದ ನಿಮ್ಮ ಸ್ಟ್ರೆಚ್ ಮಾರ್ಕ್ ನಲ್ಲಿ ಸಾಕಷ್ಟು ಬದಲಾಣೆಯಾಗುವುದನ್ನು ನೀವೇ ಗಮನಿಸಬಹುದು.
ಸ್ಟ್ರೆಚ್ ಮಾರ್ಕ್ ಸಮಸ್ಯೆಯಿರುವ ಮಹಿಳೆಯರು ಅಲೋವೇರಾ ಬಳಸಿ. ಅಲೋವೇರಾ ಜೆಲ್ ಸ್ಟ್ರೆಚ್ ಮಾರ್ಕ್ ಹೋಗಲಾಡಿಸುವ ಕೆಲಸ ಮಾಡುತ್ತದೆ. ಸ್ಟ್ರೆಚ್ ಮಾರ್ಕ್ ಮೇಲೆ ಜೆಲ್ ಹಚ್ಚಿ ಸ್ವಲ್ಪ ಮಸಾಜ್ ಮಾಡುತ್ತ ಬನ್ನಿ. ಕೆಲವೇ ದಿನಗಳಲ್ಲಿ ಪರಿಣಾಮ ಗೊತ್ತಾಗುತ್ತದೆ.
ಆರೋಗ್ಯಕರ ಹಾಗೂ ಸ್ವಚ್ಛ ಚರ್ಮಕ್ಕೆ ವಿಟಮಿನ್ ಸಿ ಹಾಗೂ ವಿಟಮಿನ್ ಇ ಅವಶ್ಯಕ. ಆಹಾರದ ಜೊತೆ ಸ್ಟ್ರಾಬೆರಿ, ಹಣ್ಣುಗಳು, ಪಾಲಕ್, ಕ್ಯಾರೆಟ್, ಹಸಿರು ಬಟಾಣಿ, ಬದಾಮಿ ಮುಂತಾದವುಗಳನ್ನು ಸೇವಿಸುತ್ತ ಬನ್ನಿ.
ನಿಂಬೆ ರಸ ಸ್ಟ್ರೆಚ್ ಮಾರ್ಕ್ ಹೋಗಲಾಡಿಸುವ ಕೆಲಸ ಮಾಡುತ್ತದೆ. ಪ್ರತಿದಿನ ನಿಂಬೆ ರಸವನ್ನು ಸ್ಟ್ರೆಚ್ ಮಾರ್ಕ್ ಇರುವ ಜಾಗಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಸ್ವಚ್ಛಗೊಳಿಸಿಕೊಳ್ಳಿ.