ಕೆಲವೊಮ್ಮೆ ಮನೆ ತುಂಬಾ ಗಲೀಜಾಗಿದೆ ಎಂದು ನಿಮಗೆ ಅನಿಸಬಹುದು. ಅದನ್ನು ಸ್ವಚ್ಛಗೊಳಿಸುವ ಕೆಲವಷ್ಟು ಹ್ಯಾಕಿಂಗ್ ಟಿಪ್ಸ್ ಗಳು ಇಲ್ಲಿವೆ ಕೇಳಿ.
ಬಾತ್ ರೂಂ ವಾಸನೆ ಬರುತ್ತಿದ್ದರೆ ನೀರು ಹೋಗುವ ಜಾಗಕ್ಕೆ ಲಿಂಬೆಹಣ್ಣನ್ನು ಹಿಂಡಿ. ಕಿಚನ್ ಡ್ರೈನ್ ಗೂ ಇದನ್ನೇ ಮಾಡಬಹುದು. ಆಗ ಸ್ವಚ್ಛತೆಯೂ ಸುಲಭವಾಗುತ್ತದೆ. ದುರ್ವಾಸನೆಯೂ ದೂರವಾಗುತ್ತದೆ.
ಮನೆಯ ಕಿಟಕಿಯ ಗಾಜು ಅಥವಾ ಶೋಕೇಸ್ ಗಾಜಿನಲ್ಲಿ ಧೂಳು ಹಿಡಿದಿದ್ದರೆ ಶೇವಿಂಗ್ ಕ್ರೀಮ್ ಹಚ್ಚಿ 15 ನಿಮಿಷ ಬಳಿಕ ಒದ್ದೆ ಬಟ್ಟೆಯಿಂದ ಒರೆಸಿ ನೋಡಿ. ಅದು ಫಳಫಳನೆ ಹೊಳೆಯುವುದನ್ನು ನೋಡಬಹುದು.
ಟಾಯ್ಲೆಟ್ ಬಹುಬೇಗ ಸ್ವಚ್ಛವಾಗಬೇಕೇ. ಒಂದು ಚಮಚ ಬೇಕಿಂಗ್ ಸೋಡಾಗೆ ಕೆಲವು ಹನಿ ವಿನೆಗರ್ ಸೇರಿಸಿ 30 ನಿಮಿಷದ ಬಳಿಕ ನೀರು ಹಾಕಿ ತೊಳೆಯಿರಿ. ವಿನೆಗರ್ ಅನ್ನು ಕಿಚನ್ ಸಿಂಕ್ ಸ್ವಚ್ಛಗೊಳಿಸಲೂ ಬಳಸಬಹುದು.
ಫ್ರಿಜ್ ಹೊರಭಾಗ ಸ್ವಚ್ಛಮಾಡಲು ಬೇಕಿಂಗ್ ಸೋಡಾ ಬೆರೆಸಿದ ನೀರನ್ನು ಬಳಸಿ. ಇದರಿಂದ ಫ್ರಿಜ್ ಹೊಸದರಂತಾಗುತ್ತದೆ. ಆಲಿವ್ ಎಣ್ಣೆಗೆ ಉಪ್ಪು ಬೆರೆಸಿ ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳನ್ನು ಒರೆಸಿ. ನಿಮ್ಮೆಲ್ಲಾ ಪಾತ್ರೆಗಳು ಹೊಸದೆಂಬಷ್ಟು ಆಕರ್ಷಕವಾಗಿ ಹೊಳೆಯುತ್ತವೆ.