alex Certify ಇಲ್ಲಿವೆ ದೀರ್ಘಾಯುಷ್ಯ ಪಡೆಯಲು ಸರಳ ಮಾರ್ಗಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿವೆ ದೀರ್ಘಾಯುಷ್ಯ ಪಡೆಯಲು ಸರಳ ಮಾರ್ಗಗಳು

ಜಡ ಜೀವನ ಶೈಲಿಯಿಂದಾಗಿ ಅಕಾಲಿಕ ಮರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಜನರು ದೀರ್ಘಾಯುಷಿಗಳಾಗುವುದು ಹೇಗೆ ಎಂಬ ಹುಡುಕಾಟದಲ್ಲಿದ್ದಾರೆ. ವಿಜ್ಞಾನದಲ್ಲೂ ಮನುಷ್ಯರ ಜೀವಿತಾವಧಿಯನ್ನು ಹೆಚ್ಚಿಸಲು ನಿರಂತರ ಸಂಶೋಧನೆಗಳು ನಡೆಯುತ್ತಿವೆ. ಆದರೆ ಕೆಲವು ಸರಳ ಕ್ರಮಗಳನ್ನು ಅನುಸರಿಸಿಕೊಳ್ಳುವ ಮೂಲಕ ಆಯಸ್ಸನ್ನು ವೃದ್ಧಿಸಿಕೊಳ್ಳಬಹುದು. ಅಂತಹ 5 ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

ಪ್ರೋಟೀನ್ ಸೇವನೆ

ವಯಸ್ಸಾದಂತೆ ದೇಹದ ಸ್ನಾಯುಗಳು ದುರ್ಬಲವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ವಯಸ್ಸಿನ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರತಿದಿನ ಸಾಕಷ್ಟು ಪ್ರೋಟೀನ್ ಸೇವನೆ ಬಹಳ ಮುಖ್ಯ. ತ್ವರಿತ ಚೇತರಿಕೆ ಮತ್ತು ಹಾರ್ಮೋನ್ ಉತ್ಪಾದನೆಗೆ ಇದು ಸಹಾಯ ಮಾಡುತ್ತದೆ. ಪ್ರತಿದಿನ ನಮ್ಮ ದೇಹದ ತೂಕಕ್ಕೆ ಕನಿಷ್ಠ ಒಂದು ಗ್ರಾಂ ಪ್ರೋಟೀನ್ ಬೇಕು.

ವ್ಯಾಯಾಮ

ಅಧ್ಯಯನದ ಪ್ರಕಾರ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳಿಂದ ಆರಂಭಿಕ ಸಾವಿನ ಅಪಾಯವನ್ನು 10-17 ಪ್ರತಿಶತದಷ್ಟು ಕಡಿಮೆ ಮಾಡಬಹುದು. ಕೆಲವು ಸಂಶೋಧಕರು ಅದರ ಸಂಭವನೀಯತೆಯನ್ನು 41 ಪ್ರತಿಶತ ಎಂದು ಹೇಳಿದ್ದಾರೆ. ಜೀವಿತಾವಧಿಯನ್ನು ಹೆಚ್ಚಿಸಲು ಬಯಸಿದರೆ ವಾಕಿಂಗ್, ಓಟ, ಈಜು, ಕಾರ್ಡಿಯೋ ವ್ಯಾಯಾಮಗಳು ತುಂಬಾ ಪ್ರಯೋಜನಕಾರಿ.

ಅತಿಯಾಮದ್ಯ ಸೇವನೆ ಬೇಡ

ವಾರಕ್ಕೆ 14 ರಿಂದ 25 ಬಾರಿ ಮದ್ಯಪಾನ ಮಾಡುವವರ ಜೀವಿತಾವಧಿ 1-2 ವರ್ಷಗಳಷ್ಟು ಕಡಿಮೆಯಾಗುತ್ತದೆ. ವಾರಕ್ಕೆ 25 ಕ್ಕಿಂತ ಹೆಚ್ಚು ಬಾರಿ ಮದ್ಯಪಾನ ಮಾಡಿದರೆ ಜೀವಿತಾವಧಿಯನ್ನು 4-5 ವರ್ಷಗಳಷ್ಟು ಇಳಿಕೆಯಾಗುತ್ತದೆ. ಹಾಗಾಗಿ ಹೆಚ್ಚು ಕಾಲ ಬದುಕಲು ಬಯಸಿದರೆ ಹೆಚ್ಚು ಮದ್ಯಪಾನ ಮಾಡಬಾರದು.

ಡಾರ್ಕ್‌ ಚಾಕಲೇಟ್ ಸೇವನೆ

ಕೋಕೋ ಇರುವ ಕಾರಣ ಡಾರ್ಕ್ ಚಾಕಲೇಟ್ ಫ್ಲೇವನಾಯ್ಡ್‌ಗಳ ಉತ್ತಮ ಪೂರಕವಾಗಿದೆ. ಇದು ಕಡಿಮೆ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಮೆದುಳಿನಲ್ಲಿ ಉತ್ತಮ ರಕ್ತ ಪರಿಚಲನೆಗೆ ಸಂಬಂಧಿಸಿದೆ. ಆಲ್ಝೈಮರ್‌ನಂತಹ ನ್ಯೂರೋ ಡಿಜನರೇಟಿವ್ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಆಸ್ಟ್ರಾಗಲಸ್ ಸೇವನೆ 

ಅಸ್ಟ್ರಾಗಲಸ್ ಒಂದು ಆಯುರ್ವೇದ ಮೂಲಿಕೆಯಾಗಿದ್ದು, ಅದು ಅಡಾಪ್ಟೋಜೆನಿಕ್ ಗುಣಗಳನ್ನು ಹೊಂದಿದೆ. ಇದು ಒತ್ತಡ, ಕೋಶ ಹಾನಿ, ಕ್ಯಾನ್ಸರ್ ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದನ್ನು ಸೇವನೆ ಮಾಡುವುದರಿಂದ ದೀರ್ಘಾಯುಷ್ಯ ಪಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...