ನಿಮ್ಮ ಸಂಗಾತಿಯ ಮನಸ್ಸು ಗೆಲ್ಲಬೇಕು ಅಂದ್ರೆ ನೀವು ಕೆಲವೊಂದು ಸಣ್ಣಪುಟ್ಟ ಕೆಲಸ ಮಾಡಬೇಕು. ಇದ್ರಿಂದ ನಿಮ್ಮ ಸಂಗಾತಿ ತಾನು ತುಂಬಾ ಅದೃಷ್ಟವಂತೆ ಎಂದುಕೊಳ್ತಾಳೆ. ಆ ಕೆಲಸಗಳು ಯಾವುವು ಅನ್ನೋದನ್ನು ನೋಡೋಣ.
ಅಡುಗೆ ಮಾಡಿ : ಪತ್ನಿಯ ಜೊತೆಗೆ ಒಂದೊಳ್ಳೆ ಊಟ ಮಾಡೋಣ ಅಂತಾ ನೀವೇನಾದ್ರೂ ಪ್ಲಾನ್ ಮಾಡಿದ್ರೆ ಹೊರಕ್ಕೆ ಹೋಗಿ ಹೋಟೆಲ್ ನಲ್ಲಿ ಡಿನ್ನರ್ ಮಾಡೋದಕ್ಕಿಂತ ನೀವೇ ಅಡುಗೆ ಮಾಡಿ. ಇದರಿಂದ ನಿಮ್ಮ ಸಂಗಾತಿ ಸಂತೋಷಪಡ್ತಾಳೆ.
ಉಡುಗೊರೆ ಕೊಡಿ : ಸಂಗಾತಿಗೆ ಏನಾದ್ರೂ ಗಿಫ್ಟ್ ಕೊಡಬೇಕು, ಆದ್ರೆ ಏನ್ ಕೊಡ್ಲಿ ಅನ್ನೋ ಗೊಂದಲ ಎಲ್ಲರಿಗೂ ಸಾಮಾನ್ಯ. ಒಂದೊಳ್ಳೆ ನೈಟ್ ಡ್ರೆಸ್ ಜೊತೆಗೊಂದು ಗುಲಾಬಿಯನ್ನು ಕೊಡಿ. ಆ ಡ್ರೆಸ್ ನೋಡಿದ ತಕ್ಷಣ ನಿಮ್ಮ ಸಂಗಾತಿಗೆ ಅದನ್ನು ಧರಿಸುವ ಮನಸ್ಸಾಗಬೇಕು.
ಲವ್ ಚಿಟ್ : ನಿಮ್ಮ ಮನಸ್ಸಿನ ಭಾವನೆಯನ್ನು ಬರೆದು ನಿಮ್ಮ ಪತ್ನಿ ಊಹಿಸಿಯೂ ಇರದಂಥ ಜಾಗದಲ್ಲಿ ಅದನ್ನು ಇಡಿ. ಅದು ಖಂಡಿತವಾಗಲೂ ನಿಮ್ಮ ಸಂಗಾತಿಗೆ ಇಷ್ಟವಾಗುತ್ತದೆ.
ಸ್ಪಾ ಬುಕ್ಕಿಂಗ್ : ವೀಕೆಂಡ್ ನಲ್ಲಿ ನಿಮ್ಮ ಸಂಗಾತಿಗೆ ಗೊತ್ತಿಲ್ಲದಂತೆ ಸ್ಪಾ ಬುಕ್ಕಿಂಗ್ ಮಾಡಿ. ಇದರಿಂದ ಇಬ್ಬರಿಗೂ ರಿಲ್ಯಾಕ್ಸೇಶನ್ ಸಿಗುತ್ತದೆ.
ರೊಮ್ಯಾಂಟಿಕ್ ಸಿನೆಮಾ : ನಿಜಜೀವನದಲ್ಲೂ ಫಿಲ್ಮಿಯಾಗಿರುವುದು ಕೆಟ್ಟದೇನಲ್ಲ. ಮನೆಯಲ್ಲೇ ಪಾಪ್ ಕಾರ್ನ್ ಮೆಲ್ಲುತ್ತ ಜೊತೆಯಾಗಿ ರೊಮ್ಯಾಂಟಿಕ್ ಫಿಲ್ಮ್ ನೋಡಿ.
ಗಮನ : ಸಂಗಾತಿಯ ಬಗ್ಗೆ ಯಾವಾಗಲೂ ನಿಮ್ಮ ಗಮನವಿರಲಿ. ನಿಮಗೆ ಆಕೆಯ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದನ್ನು ಆಗಾಗ ವ್ಯಕ್ತಪಡಿಸಿ.
ಡೇಟಿಂಗ್ : ವ್ಯಾಲಂಟೈನ್ ಡೇ ದಿನ ಮಾತ್ರ ಡೇಟಿಂಗ್ ಗೆ ಹೋಗಬೇಕೆಂದು ನಿಯಮವೇನಿಲ್ಲ. ವೀಕೆಂಡ್ನಲ್ಲಿ ರೊಮ್ಯಾಂಟಿಕ್ ಡೇಟ್ ಪ್ಲಾನ್ ಮಾಡಿ.
ಇಷ್ಟು ಮಾತ್ರವಲ್ಲ, ಸಂಗಾತಿಯ ಜೊತೆ ಮನಬಿಚ್ಚಿ ಮಾತನಾಡಿ. ಅವಳಿಗಿಷ್ಟವಾದದ್ದನ್ನು ಮಾಡಲು ಬಿಡಿ. ಆಕೆ ನಿಮ್ಮ ಪಾಲಿಗೆ ಎಷ್ಟು ಸ್ಪೆಷಲ್ ಅನ್ನೋದನ್ನು ಮನವರಿಕೆ ಮಾಡಿಕೊಡಿ.