ಮುಖ ಅಂದವಾಗಿರೋದಿಕ್ಕೆ ಮಹಿಳೆಯರು ಏನೇನೋ ಪ್ರಯೋಗಗಳನ್ನು ಮಾಡ್ತಾರೆ. ಹೊಸದಾಗಿ ಬರೋ ಜಾಹೀರಾತಿಗೆ ಮರುಳಾಗಿ ಬ್ಯೂಟಿ ಪ್ರಾಡಕ್ಟ್ ಗಳನ್ನು ಅತ್ಯುತ್ಸಾಹದಿಂದ ಉಪಯೋಗಿಸುತ್ತಾರೆ. ಆದರೆ ಕೃತಕವಾಗಿರೋ ಈ ಸೌಂದರ್ಯ ಉತ್ಪನ್ನಗಳಿಗಿಂತ ನೈಸರ್ಗಿಕವಾಗಿಯೇ ನೀವು ಅಂದವಾಗಿ ಕಾಣಬಹುದು. ಇದಕ್ಕೆ ನೀವು ಮಾಡಬೇಕಾದದ್ದು ಮುಖದ ವ್ಯಾಯಾಮವಷ್ಟೇ.
ಮೊದಲು ನಿಮ್ಮ ಮೊದಲ ಎರಡು ಕೈಬೆರಳುಗಳಿಂದ ಕಿವಿಯ ಕೆಳಗಿನ ಹಾಗೂ ಕತ್ತಿನ ಮೇಲ್ಭಾಗವನ್ನು ನಿಧಾನವಾಗಿ ಒತ್ತಿರಿ. ಇದರಿಂದ ಮುಖ ಹೆಚ್ಚು ತಾಜಾ ಆಗಿ ಕಾಣುತ್ತದೆ.
ನಿಮ್ಮ ಕೈಬೆರಳುಗಳನ್ನು ಒಟ್ಟಿಗೆ ಜೋಡಿಸಿ ಗದ್ದದ ಕೆಳಗಿನ ಭಾಗದಿಂದ ಗಂಟಲವರೆಗೂ ಮಸಾಜ್ ಮಾಡಿ.
ನಿಮ್ಮ ಹುಬ್ಬಿನ ಕೆಳಭಾಗಕ್ಕೆ ಹೆಬ್ಬೆರಳು ಹಾಗೂ ತೋರು ಬೆರಳುಗಳಿಂದ ನಿಧಾನಕ್ಕೆ ಚಿವುಟಿ. ಇದರಿಂದ ರಕ್ತಸಂಚಲನ ಚೆನ್ನಾಗಿ ಆಗುತ್ತದೆ.
ತೋರು ಬೆರಳು ಹಾಗೂ ಮಧ್ಯದ ಬೆರಳುಗಳ ಸಹಾಯದಿಂದ ಬಾಯಿಯ ಎರಡೂ ಪಕ್ಕ ಮಸಾಜ್ ಮಾಡಿ.
ಕೆನ್ನೆಯ ಮೇಲ್ಭಾಗಕ್ಕೆ ಬೆರಳುಗಳಿಂದ ವೃತ್ತಾಕಾರವಾಗಿ ಮಸಾಜ್ ಮಾಡಿ.
ತೋರು ಬೆರಳು ಹಾಗೂ ಮಧ್ಯ ಬೆರಳಿನ ಸಹಾಯದಿಂದ ಹಣೆಯ ಮಧ್ಯಭಾಗಕ್ಕೆ ಅಡ್ಡ ಮಸಾಜ್ ಮಾಡಿಕೊಳ್ಳಿ.