ಎಲ್ಲರಿಗೂ ತಮ್ಮ ಮುಖದ ಚರ್ಮ ಮೃದುವಾಗಿರಬೇಕು ಎಂಬ ಆಸೆ ಇರುತ್ತದೆ. ಮಾರುಕಟ್ಟೆಯಲ್ಲಿಯೂ ಸಾಕಷ್ಟು ಬ್ರಾಂಡ್ ನ ಪ್ರಾಡೆಕ್ಟ್ ಗಳು ಕೂಡ ಲಭ್ಯವಿದೆ. ಆದರೆ ಈ ಉತ್ಪನ್ನಗಳು ದುಬಾರಿ ಜತೆಗೆ ಇದಕ್ಕೆ ಸಾಕಷ್ಟು ಕೆಮಿಕಲ್ ಗಳನ್ನು ಉಪಯೋಗಿಸಿರುತ್ತಾರೆ.
ಸ್ವಲ್ಪ ದಿನಗಳ ಮಟ್ಟಿಗೆ ಮೃದುವಾಗಿ ಕಾಣಬಹುದು ಆದರೆ ದೀರ್ಘಾವಧಿ ಇವುಗಳು ಫಲಿತಾಂಶ ನೀಡುವುದಿಲ್ಲ. ಮನೆಯಲ್ಲಿಯೇ ಸಿಗುವ ನೈಸರ್ಗಿಕ ಉತ್ಪನ್ನಗಳಿಂದ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಮೃದುವಾಗಿರಿಸಿಕೊಳ್ಳಬಹುದು.
ಸರಿಯಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುವುದಲ್ಲದೇ, ಮುಖವು ಮಗುವಿನ ತ್ವಚೆಯಂತೆ ಮೃದುವಾಗಿರುತ್ತದೆ. ದಿನಕ್ಕೆ 8ರಿಂದ 10 ಗ್ಲಾಸ್ ನಷ್ಟು ನೀರು ಕುಡಿಯಿರಿ. ಇದು ನಿಮ್ಮ ದೇಹದಲ್ಲಿರುವ ಟಾಕ್ಸಿನ್ ಅನ್ನು ಹೊರಕ್ಕೆ ಹಾಕುತ್ತದೆ.
ನಿಂಬೆ ಹಣ್ಣಿನ ಪಾನೀಯ ಕುಡಿಯುವುದರಿಂದ ಕೂಡ ನಿಮ್ಮ ಮುಖದ ಅಂದ ಹೆಚ್ಚುತ್ತದೆ. ಇದು ಡೆಡ್ ಸ್ಕಿನ್ ಅನ್ನು ನಿವಾರಿಸುತ್ತದೆ. ಹಾಗೇ ನಿಮ್ಮ ಮುಖದಲ್ಲಿನ ಜಿಡ್ಡಿನ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇನ್ನು ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡು ಅದಕ್ಕೆ 2 ಹನಿ ನಿಂಬೆಹಣ್ಣಿನ ರಸ ಸೇರಿಸಿಕೊಂಡು ಫೇಸ್ ಪ್ಯಾಕ್ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಮುಖ ತೊಳೆದರೆ ಮುಖವು ಮೃದುವಾಗುತ್ತದೆ ಜತೆಗೆ ಕಾಂತಿಯುತವಾಗಿ ಹೊಳೆಯುತ್ತದೆ.