ಬೊಜ್ಜು ಈಗ ಎಲ್ಲರನ್ನೂ ಕಾಡುವ ಸಮಸ್ಯೆ. ಅದರಲ್ಲೂ ಬೆಲ್ಲಿ ಫ್ಯಾಟ್ ಕರಗಿಸೋದಂತೂ ಬಹುದೊಡ್ಡ ಸವಾಲು. ಹೊಟ್ಟೆ ಭಾಗದಲ್ಲಿ ಬೊಜ್ಜು ಜಾಸ್ತಿಯಾದ್ರೆ ನಿಮಗಿಷ್ಟವಾದ ಡ್ರೆಸ್ ಹಾಕುವಂತಿಲ್ಲ. ಟೈಟ್ ಫಿಟಿಂಗ್ ಬಟ್ಟೆಗಳಿಂದ ದೂರವೇ ಇರಬೇಕು. ಡೋಂಟ್ ವರಿ, ಈ ಟಮ್ಮಿಯನ್ನು ಕೂಡ ನೀವು ಈಸಿಯಾಗಿ ಕರಗಿಸಬಹುದು.
ಡಯಟ್ ಸೋಡಾ ಕುಡಿಯುವುದನ್ನು ಬಿಟ್ಟುಬಿಡಿ : ಡಯಟ್ ಸೋಡಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿ ಕೃತಕ ಸ್ವೀಟ್ನರ್ ಇರುತ್ತದೆ. ಅದನ್ನು ಕುಡಿಯೋದ್ರಿಂದ ಬೊಜ್ಜು ಜಾಸ್ತಿಯಾಗುತ್ತದೆ. ಡಯಟ್ ಸೋಡಾ ಅಥವಾ ತಂಪು ಪಾನೀಯವನ್ನು ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಕುಡಿದ್ರೆ ನಿಮ್ಮ ತೂಕ ಹೆಚ್ಚಾಗುತ್ತದೆ.
ಗ್ರೀನ್ ಟೀ ಕುಡಿಯಿರಿ : ದಿನಕ್ಕೆ ಮೂರು ಬಾರಿ ಗ್ರೀನ್ ಟೀ ಕುಡಿಯೋದ್ರಿಂದ ಹೊಟ್ಟೆಯ ಭಾಗದ ಬೊಜ್ಜು ಕಡಿಮೆಯಾಗುತ್ತದೆ. ದಿಢೀರನೆ ಪರಿಣಾಮ ಗೊತ್ತಾಗದೇ ಇದ್ರೂ, ನಿರಂತರವಾಗಿ ಗ್ರೀನ್ ಟೀ ಕುಡಿಯುತ್ತಾ ಬಂದ್ರೆ ತೂಕ ಇಳಿಸಬಹುದು.
ಪ್ರತಿದಿನ ಡ್ರೈ ಫ್ರೂಟ್ಸ್ ಸೇವನೆ : ನಿಮ್ಮ ನಿತ್ಯದ ಡಯಟ್ ನಲ್ಲಿ ಬಾದಾಮಿ ಮತ್ತು ವಾಲ್ನಟ್ ಅನ್ನು ಸೇರ್ಪಡೆ ಮಾಡಿ. ಆದ್ರೆ ದಿನಕ್ಕೆ ಕೇವಲ 4 ಬಾದಾಮಿಯನ್ನು ಮಾತ್ರ ತಿನ್ನುವುದು ಉತ್ತಮ. ಪ್ರತಿನಿತ್ಯ ಡ್ರೈಫ್ರೂಟ್ಸ್ ಸೇವನೆಯಿಂದ ಬೊಜ್ಜು ಕರಗುತ್ತದೆ.
ಅಡುಗೆಗೆ ತೆಂಗಿನ ಎಣ್ಣೆ ಬಳಸಿ: ಅಡುಗೆಗೆ ತೆಂಗಿನೆಣ್ಣೆ ಬಳಸಲು ಎಲ್ಲರೂ ಇಷ್ಟಪಡೋದಿಲ್ಲ. ಅದರಲ್ಲಿ ಹೆಚ್ಚು ರುಚಿ ಇರೋದಿಲ್ಲ ಅನ್ನೋ ಭಾವನೆಯಿದೆ. ಆದ್ರೆ ತೂಕ ಇಳಿಸಬೇಕು ಅಂತಾದ್ರೆ ಇವತ್ತಿನಿಂದ್ಲೇ ಅಡುಗೆಗೆ ತೆಂಗಿನೆಣ್ಣೆ ಬಳಸಲು ಆರಂಭಿಸಿ.
ಕಾಳುಮೆಣಸಿನ ಪುಡಿ ಬಳಸಿ : ನಿಮ್ಮ ಸಲಾಡ್ ಅಥವಾ ಇತರ ತಿನಿಸುಗಳ ಮೇಲೆ ಕಾಳುಮೆಣಸಿನ ಪುಡಿ ಉದುರಿಸಿ. ಯಾಕಂದ್ರೆ ಫ್ಯಾಟ್ ಬರ್ನ್ ಮಾಡಲು ಬೆಸ್ಟ್ ಉಪಾಯ ಇದು. ಬೆಲ್ಲಿ ಫ್ಯಾಟ್ ಕಡಿಮೆ ಮಾಡೋದು ಮಾತ್ರವಲ್ಲ, ಇತರ ಉದರ ಸಂಬಂಧಿ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಕಾಳುಮೆಣಸು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದರಿಂದ ತೂಕ ಕಡಿಮೆಯಾಗುತ್ತದೆ.