ಜೇನು ಕೇವಲ ಆರೋಗ್ಯಕ್ಕಷ್ಟೇ ಅಲ್ಲ, ಸೌಂದರ್ಯಕ್ಕೂ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಇದರ ಉಪಯೋಗ ಹೆಚ್ಚು. ಇಲ್ಲಿದೆ ನೋಡಿ ಜೇನನ್ನು ಬಳಸಿ ಸೌಂದರ್ಯ ಪಡೆಯಬಹುದಾದ ಕೆಲ ಸಲಹೆಗಳು.
* ಜೇನುತುಪ್ಪ, ಓಟ್ ಮೀಲ್ ಚಳಿಗಾಲದಲ್ಲಿ ಒಡೆಯುವ ತ್ವಚೆಯನ್ನು ನಿಯಂತ್ರಿಸಲು ಸಹಾಯಕವಾಗುವುದಲ್ಲದೇ ತುರಿಕೆಯನ್ನು ತಡೆಯುತ್ತದೆ.
* ಜೇನುತುಪ್ಪದಿಂದ ಬಾಡಿ ವಾಶ್ ಮಾಡಿಕೊಂಡರೆ ತ್ವಚೆಯು ಮೃದುವಾಗುವುದಲ್ಲದೆ ಸೋಂಕು ನಿವಾರಣೆ ಆಗುತ್ತದೆ.
* ಜೇನುತುಪ್ಪವನ್ನು ಬೆರಳಿಗೆ ಸವರಿಕೊಂಡು ಕಣ್ಣಿನ ಸುತ್ತಲೂ ನಿಧಾನವಾಗಿ ಮಸಾಜ್ ಮಾಡುತ್ತಿದ್ದರೆ ಕಣ್ಣಿನ ಆಯಾಸ ಕಡಿಮೆಯಾಗುತ್ತದೆ.
* ಜೇನುತುಪ್ಪದ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ಮುಖದ ಕಾಂತಿಯು ಹೆಚ್ಚುವುದಲ್ಲದೆ ಮುಖದಲ್ಲಿನ ನೆರಿಗೆ, ಜಿಡ್ಡನ್ನು ಹೋಗಲಾಡಿಸಬಹುದು.
* ಜೇನುತುಪ್ಪವನ್ನು ನಿಂಬೆರಸದೊಡನೆ ಬೆರೆಸಿ ಮುಖವನ್ನು ತೊಳೆಯುವುದರಿಂದ ಮುಖದಲ್ಲಿನ ಕಲೆಗಳು ನಿವಾರಣೆಯಾಗುತ್ತವೆ.
* ನೀರಿನಲ್ಲಿ ಬೆರೆಸಿದ ಜೇನುತುಪ್ಪದ ಮಿಶ್ರಣವನ್ನು ತಲೆಕೂದಲಿಗೆ ಲೇಪಿಸುತ್ತಿದ್ದರೆ ಕೂದಲು ಸಿಕ್ಕ ಆಗುವುದನ್ನು ನಿಯಂತ್ರಿಸಬಹುದು. ತಲೆಹೊಟ್ಟಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. ಕೂದಲು ರೇಷ್ಮೆಯಂತೆ ಮೃದುವಾಗುವುದರ ಜೊತೆಗೆ ಕೂದಲಿಗೆ ಒಳ್ಳೆಯ ಮಾಯಿಶ್ಚರೈಸಿಂಗ್ ದೊರೆಯುತ್ತದೆ.