ತಾಪಮಾನ ವಿಪರೀತ ಏರಿಕೆಯಾಗಿದ್ದು, ಜನ ಹೈರಾಣಾಗಿದ್ದಾರೆ. ಕಾರು ಪ್ರಯಾಣಿಕರಿಗೂ ಇದರ ಬಿಸಿ ತಟ್ಟಿದೆ. ಹಾಗಿದ್ದರೆ, ಈ ಬೇಸಿಗೆಯಲ್ಲಿ ನಿಮ್ಮ ಕಾರನ್ನು ತಂಪಾಗಿಡುವುದು ಹೇಗೆ? ಎಂಬ ಬಗ್ಗೆ ಟಿಪ್ಸ್ ಇಲ್ಲಿ ನೀಡಲಾಗಿದೆ.
ಸನ್ ಶೇಡ್:
ಬೇಸಿಗೆಯಲ್ಲಿ ಕಾರನ್ನು ತಂಪಾಗಿರಿಸಲು, ಸನ್‌ಶೇಡ್‌ಗಳನ್ನು ಬಳಸುವುದು ಉತ್ತಮ. ಇದು ಕ್ಯಾಬಿನ್‌ನೊಳಗಿನ ಶಾಖ ಕಡಿಮೆ ಮಾಡಲು ಸರಳ ಮಾರ್ಗವಾಗಿದೆ. ಸನ್ ಫಿಲ್ಮ್‌ಗಳನ್ನು ಈಗ ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ಆದರೆ ಸನ್‌ಶೇಡ್‌ಗಳು ಬಳಸಲು ಅಡ್ಡಿ ಇಲ್ಲ. ಇದು ಸೂರ್ಯನ ಕಿರಣಗಳನ್ನು ಕ್ಯಾಬಿನ್ ಒಳಗೆ ತಲುಪದಂತೆ ತಡೆಯಲು ಉತ್ತಮ ಮತ್ತು ಅಗ್ಗದ ಮಾರ್ಗವಾಗಿದೆ.
Big Breaking: ಕಡ್ಡಾಯ ಕೊರೊನಾ ಲಸಿಕೆ ಕುರಿತು ʼಸುಪ್ರೀಂʼ ಮಹತ್ವದ ಆದೇಶ; ವ್ಯಾಕ್ಸಿನೇಶನ್ ಗೆ ಬಲವಂತ ಸಲ್ಲದು ಎಂದ ನ್ಯಾಯಾಲಯ
ವಿಂಡೋಸ್:
ವಾಹನ ನಿಲ್ಲಿಸಿದ್ದಾಗ ವಿಂಡೋಗಳನ್ನು ಸ್ವಲ್ಪ ತೆರೆದಿಟ್ಟುಕೊಳ್ಳುವುದರಿಂದ ಕ್ಯಾಬಿನ್‌ನ ಒಳಗಿನ ಪರಿಸ್ಥಿತಿಗಳು ಹೆಚ್ಚು ಸುಧಾರಿಸುತ್ತದೆ. ಇದು ಭಾಗಶಃ ಗಾಳಿಯ ಬೀಸುವಿಕೆಗೆ ಅನುಕೂಲ ಮಾಡಿಕೊಡಲಿದೆ. ಆದರೂ ಕಾರಿನ ಸುರಕ್ಷತೆಗೆ ಧಕ್ಕೆಯುಂಟು ಮಾಡುವುದರಿಂದ, ಕಿಟಕಿ ತೆರೆಯುವಿಕೆಯು ಎಷ್ಟಿರಬೇಕೆಂಬುದನ್ನು ಗಮನದಲ್ಲಿಡುವುದು ಮುಖ್ಯ.
ಟವಲ್‌ನಿಂದ ಕವರ್:
ಸ್ಟೀರಿಂಗ್ ವೀಲ್ ಮತ್ತು ಡ್ಯಾಶ್‌ಬೋರ್ಡ್ ಅನ್ನು ಟವೆಲ್‌ನೊಂದಿಗೆ ಕವರ್ ಮಾಡುವುದು ಸೂಕ್ತ. ಇದೂ ಸಹ ಕ್ಯಾಬಿನ್ ತಾಪಮಾನವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಇದಲ್ಲದೆ, ಬಿಳಿ ಟವೆಲ್, ಬೆಡ್‌ಸ್ಪ್ರೆಡ್‌ಗಳನ್ನು ಸಹ ಬಳಸಬಹುದು. ಇದು ಆಸನಗಳ ಮೇಲಿನ ಶಾಖ ತಡೆಯುತ್ತದೆ.
ಸೌರಶಕ್ತಿ ಚಾಲಿತ ಫ್ಯಾನ್:
ಸೌರ ಫ್ಯಾನ್ ಕಾರಿನ ಒಳಭಾಗದಿಂದ ಬಿಸಿ ಗಾಳಿಯನ್ನು ತೆಗೆದುಹಾಕಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಉತ್ತಮ ಗುಣಮಟ್ಟದ ಸೌರಶಕ್ತಿ ಚಾಲಿತ ಫ್ಯಾನ್ ಕೇವಲ 1,000 ರೂ.ಗೆ ಖರೀದಿಸಬಹುದು. ಈ ಗ್ಯಾಜೆಟ್ ಬಿರು ಬೇಸಿಗೆ ಕಾಲದಲ್ಲಿ ತಂಪಾಗಿರಿಸುತ್ತದೆ.
ಹೊರಡುವ ಮುನ್ನ:
ಕಾರು ಹತ್ತುವ ಮುನ್ನ ಎಲ್ಲಾ ವಿಂಡೋ ಮತ್ತು ಬಾಗಿಲುಗಳನ್ನು ಕೆಲ ನಿಮಿಷಗಳಾದರೂ ತೆಗೆದಿಡುವುದು ಸೂಕ್ತ. ಹೀಗೆ ಮಾಡಿದರೆ ಕ್ಯಾಬಿನ್‌ನೊಳಗಿನ ಎಲ್ಲಾ ಬಿಸಿ ಗಾಳಿಯು ಹೊರಗೆ ಹೋಗಲು ಅನುಕೂಲವಾಗಲಿದೆ. ಮುಖ್ಯವಾಗಿ ಬಿಸಿಲಿನ ವೇಳೆ ಕಾರನ್ನು ತಂಪಾದ ಪ್ರದೇಶ ಹುಡುಕಿ ನಿಲ್ಲಿಸುವುದು ಬಹಳ ಸೂಕ್ತ.