ಕೆಲವರು ಅಡುಗೆ ಮಾಡಲು ಲೋಹದ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಈ ಪಾತ್ರೆಗಳಲ್ಲಿ ಕೆಲವೊಮ್ಮೆ ತುಕ್ಕು ಹಿಡಿಯುತ್ತದೆ. ಅದನ್ನು ಉಜ್ಜಿ ತೊಳೆದರೆ ಅದು ಕ್ಲಿಯರ್ ಆಗಿ ಹೋಗುವುದಿಲ್ಲ. ಈ ಪಾತ್ರೆಗಳನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟಿಪ್ ಫಾಲೋ ಮಾಡಿ.
ಲೋಹದ ಪಾತ್ರೆಗಳನ್ನು ಅಡುಗೆಗೆ ಬಳಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಕ್ಲೀನ್ ಮಾಡಲು ಕಷ್ಟಕರವಾದ್ದರಿಂದ ಈ ಪಾತ್ರೆಗಳನ್ನು ಬಳಸುವುದಿಲ್ಲ. ಅಂತವರು ಈ ಟಿಪ್ಸ್ ಅನ್ನು ಫಾಲೋ ಮಾಡಿದರೆ ಲೋಹದ ಪಾತ್ರೆಗಳು ಸುಲಭವಾಗಿ ಕ್ಲೀನ್ ಮಾಡಬಹುದು.
ಲೋಹದ ಪಾತ್ರೆಗಳನ್ನು ಸುಲಭವಾಗಿ ಕ್ಲೀನ್ ಮಾಡಲು ನಮಗೆ ಸಹಕಾರಿಯಾಗುವುದು ನಿಂಬೆ ಹಣ್ಣಿನ ರಸ, ಉಪ್ಪು ಮತ್ತು ಮತ್ತು ವಿನೇಗರ್. ಲೋಹದ ಪಾತ್ರೆಗಳನ್ನು ತೊಳೆಯವ ಮೊದಲು ಬಿಸಿ ಮಾಡಿಕೊಳ್ಳಿ ಬಳಿಕ ನಿಂಬೆ ಹಣ್ಣಿನ ರಸ ಅಥವಾ ವಿನೇಗರ್ ಮತ್ತು ಉಪ್ಪನ್ನು ಹಾಕಿ ಉಜ್ಜಿ ತೊಳೆಯಿರಿ. ಇದರಿಂದ ಬೇಗ ಕ್ಲೀನ್ ಆಗುತ್ತದೆ. ಬಳಿಕ ಅದನ್ನು ಮತ್ತೆ ಬಿಸಿ ಮಾಡಿ ನೀರಿನಂಶ ಹೋದ ಮೇಲೆ ಎಣ್ಣೆ ಹಚ್ಚಿ ಇಟ್ಟರೆ ಅದು ತುಕ್ಕು ಹಿಡಿಯುವುದಿಲ್ಲ.