
ಸಿಕ್ಕಾಪಟ್ಟೆ ಹಸಿವು ಏನಾದ್ರೂ ತಿನ್ನೋಣ ಅಂದ್ಕೊಂಡು ಫ್ರಿಡ್ಜ್ ಬಾಗಿಲು ತೆಗೆದ್ರೆ ಅಲ್ಲಿನ ಪರಿಸ್ಥಿತಿ ನೋಡಿ ಒಮ್ಮೊಮ್ಮೆ ತಲೆತಿರುಗಿದಂತಾಗುತ್ತದೆ. ಎಲ್ಲಾ ಕಡೆ ಚೆಲ್ಲಿರೋ ಕೆಚಪ್, ಹಾಲಿನ ಕಂಟೇನರ್ ನಲ್ಲಿ ಬೆಳ್ಳುಳ್ಳಿ ಪೇಸ್ಟ್, ತರಕಾರಿ ಇಡೋ ಜಾಗದಲ್ಲಿ ಇನ್ಯಾವುದೋ ವಸ್ತು ಹೀಗೆ ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ.
ಈ ರೀತಿ ಆಗದಂತೆ ನಿಮ್ಮ ರೆಫ್ರಿಜರೇಟರ್ ಅನ್ನು ನೀಟಾಗಿ ಇಡಬಹುದು. ಅದಕ್ಕೆ 4 ಸರಳ ಸೂತ್ರಗಳಿವೆ. ಅವ್ಯಾವುವು ಅಂತಾ ನೋಡೋಣ.
ನಿಮ್ಮ ಫ್ರಿಡ್ಜ್ ಜೊತೆ ನೀವು ಇಂಟ್ರೆಸ್ಟಿಂಗ್ ಗೇಮ್ ಆಡ್ಬಹುದು. ಪಾರದರ್ಶಕವಲ್ಲದ ಕಂಟೇನರ್ ಗಳಲ್ಲಿ ಏನಿದೆ ಅನ್ನೋದನ್ನು ಗೆಸ್ ಮಾಡೋ ಗೇಮ್. ಅದು ಸಾಧ್ಯವಾಗಲ್ಲ ಅಂತಾದ್ರೆ ಎಲ್ಲಾ ಕಂಟೇನರ್ ಗಳಲ್ಲೂ ಏನೇನಿದೆ ಅಂತಾ ಲೇಬಲ್ ಅಂಟಿಸಿಬಿಡಿ. ಆಗ ಸುಲಭವಾಗಿ ಬೇಕಾದಾಗ ಅದನ್ನು ತೆಗೆದುಕೊಳ್ಳಬಹುದು.
ಎಲ್ಲಾ ಫ್ರಿಡ್ಜ್ ಗಳಲ್ಲೂ ಹೆಚ್ಚು ವಿಭಾಗಗಳಿರುವುದಿಲ್ಲ. ಕೆಲವೊಂದು ಫ್ರಿಡ್ಜ್ ಗಳಲ್ಲಿ ಮೂರರಿಂದ ನಾಲ್ಕು ಸೆಕ್ಷನ್ ಗಳಿರಬಹುದು. ಆಗ ನೀವೇ ಕಾರ್ಡ್ ಬೋರ್ಡ್ ಅಥವಾ ಗ್ಲಾಸ್ ಪ್ಯಾನಲ್ ಗಳನ್ನು ಬಳಸಿ. ಯಾವ ವಸ್ತು ಬೇಕಾದ್ರೂ ಥಟ್ಟಂತ ಹುಡುಕಲು ಇದು ಸಹಾಯ ಮಾಡುತ್ತದೆ.
ಕೆಲವರಿಗೆ ಯಾವುದನ್ನೂ ನೀಟಾಗಿ ಇಟ್ಟುಕೊಳ್ಳುವ ಅಭ್ಯಾಸವಿರುವುದಿಲ್ಲ. ನೀವೂ ಅದೇ ರೀತಿ ಎಲ್ಲವನ್ನೂ ಚೆಲ್ಲಾಡುವ ರೂಢಿ ಮಾಡಿಕೊಂಡಿದ್ರೆ ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಫ್ರಿಡ್ಜ್ ನ ಪ್ಯಾನಲ್ ಗಳ ಮೇಲೆ ಒಂದು ಶೀಟ್ ಹಾಕಿಬಿಡಿ, ಅದನ್ನು ಆಗಾಗ ಬದಲಾಯಿಸಿಬಿಡಬಹುದು.
ಫಿನಿಶ್ ಫಸ್ಟ್ ಅನ್ನೋ ಸೆಕ್ಷನ್ ಮಾಡಿಕೊಳ್ಳಿ. ಅಲ್ಲಿ ತಾಜಾ ತರಕಾರಿ, ಹಣ್ಣುಗಳನ್ನು ಇಡಿ. ಉಳಿದಂತೆ ಕೆಚಪ್, ಬಿಸ್ಕೆಟ್ಸ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪೀನಟ್ ಬಟರ್, ಮೆಯೋನೀಸ್, ಜಾಮ್ ಇಂಥ ವಸ್ತುಗಳನ್ನೆಲ್ಲ ಪ್ರತ್ಯೇಕವಾಗಿಡಿ. ಹೀಗೆ ಮಾಡುವುದರಿಂದ ತಾಜಾ ವಸ್ತುಗಳು ಕೆಡುವ ಮುನ್ನವೇ ಬಳಸಲು ಸುಲಭವಾಗುತ್ತದೆ.