ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಕ್ಯಾನ್ಸರ್‌ನಿಂದ ಪ್ರತಿ ವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೊದಲ ಹಂತದಲ್ಲಿ ಕಾಯಿಲೆ ಪತ್ತೆಯಾದಲ್ಲಿ ಮಾತ್ರ ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ. ಆದರೆ ಕ್ಯಾನ್ಸರ್ ಚಿಕಿತ್ಸೆ ತುಂಬಾ ದುಬಾರಿ, ಎಲ್ಲರಿಂದಲೂ ಈ ವೆಚ್ಚವನ್ನು ಭರಿಸುವುದು ಸಾಧ್ಯವಿಲ್ಲ. ಜೀವನಶೈಲಿ ಮತ್ತು ತಪ್ಪಾದ ಆಹಾರ ಸೇವನೆಯಿಂದ ಕ್ಯಾನ್ಸರ್ ಬರಬಹುದು. ಕ್ಯಾನ್ಸರ್ ರೋಗ ಬರದಂತೆ ತಡೆಯಲು ಏನು ಮಾಡಬೇಕು ಎಂಬುದನ್ನು ನೋಡೋಣ.
ಆರೋಗ್ಯಕರ ಆಹಾರ ಸೇವಿಸಿ – ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಗುಟ್ಟು. ಹಾಗಾಗಿ ಆರೋಗ್ಯಕರ ಆಹಾರವನ್ನು ಸೇವಿಸಿದರೆ, ಕ್ಯಾನ್ಸರ್ ಅಪಾಯ ಕೂಡ ಕಡಿಮೆಯಾಗುತ್ತದೆ. ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳನ್ನು ತಿನ್ನಿರಿ.
ದೈಹಿಕ ಚಟುವಟಿಕೆಗಳನ್ನು ಮಾಡಿ – ದೈನಂದಿನ ವ್ಯಾಯಾಮ ಅಗತ್ಯ. ಯೋಗ, ಪ್ರಾಣಾಯಾಮ, ಜಿಮ್‌ನಲ್ಲಿ ವರ್ಕೌಟ್ ಮಾಡುವ ಮೂಲಕ ದೈಹಿಕ ಆರೋಗ್ಯವನ್ನು ಸುಧಾರಿಸಬಹುದು.
ಸಿಗರೇಟ್ ಮತ್ತು ಮದ್ಯಪಾನದಿಂದ ದೂರವಿರಿ – ಸಿಗರೇಟ್ ಮತ್ತು ಆಲ್ಕೋಹಾಲ್ ನಮ್ಮ ಆರೋಗ್ಯದ ದೊಡ್ಡ ಶತ್ರುಗಳು. ಅವು ಕ್ಯಾನ್ಸರ್ ಮಾತ್ರವಲ್ಲ ಇತರ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ಹಾಗಾಗಿ ಅವುಗಳಿಂದ ದೂರವಿರುವುದು ಉತ್ತಮ.
ಸ್ಕ್ರೀನಿಂಗ್ ಟೆಸ್ಟ್ – ನಿಯಮಿತ ಸ್ಕ್ರೀನಿಂಗ್ ಪರೀಕ್ಷೆಗಳನ್ನು ಮಾಡಿಸಿದರೆ ಕ್ಯಾನ್ಸರ್ ಅನ್ನು ಸಮಯಕ್ಕೆ ಸರಿಯಾಗಿ ಪತ್ತೆ ಮಾಡಬಹುದು. ಇದರಿಂದ ಕ್ಯಾನ್ಸರ್ ವಿರುದ್ಧ ಹೋರಾಡಲು ಸುಲಭವಾಗುತ್ತದೆ.
ವಿಕಿರಣವನ್ನು ತಪ್ಪಿಸಿ – ಅತಿಯಾದ ಮೊಬೈಲ್ ಫೋನ್ ಬಳಕೆ ಅಪಾಯಕಾರಿ. ಈ ವಿಕಿರಣಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಹಾಗಾಗಿ ದೀರ್ಘಕಾಲದವರೆಗೆ ವಿಕಿರಣದ ಸಂಪರ್ಕದಲ್ಲಿರುವುದನ್ನು ತಪ್ಪಿಸಬೇಕು.
ವೈದ್ಯರನ್ನು ಸಂಪರ್ಕಿಸಿ – ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಬಂದಿದ್ದರೆ ಪ್ರತಿಯೊಬ್ಬರೂ ಆಗಾಗ ತಪಾಸಣೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್‌ಗೆ ಸಂಬಂಧಿಸಿದ ಮಾಹಿತಿಗಾಗಿ ಆರೋಗ್ಯ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ.
ಮಾಲಿನ್ಯದಿಂದ ದೂರವಿರಿ – ವಿಪರೀತ ಮಾಲಿನ್ಯದ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯಬೇಡಿ. ಮಾಸ್ಕ್ ಧರಿಸುವುದು ಉತ್ತಮ. ಸಾಧ್ಯವಾದರೆ ಮನೆಯಲ್ಲಿ ಏರ್ ಪ್ಯೂರಿಫೈಯರ್ ಬಳಸಿ.
ಒತ್ತಡದಿಂದ ದೂರವಿರಿ – ಮಾನಸಿಕ ಹಾಗೂ ದೈಹಿಕ ಒತ್ತಡ ಕೂಡ ಕ್ಯಾನ್ಸರ್‌ಗೆ ಕಾರಣವಾಗಬಹುದು. ಹಾಗಾಗಿ ಒತ್ತಡವನ್ನು ಕಡಿಮೆ ಮಾಡಲು ಯೋಗ ಮತ್ತು ಧ್ಯಾನದಂತಹ ಮಾರ್ಗಗಳನ್ನು ಪ್ರಯತ್ನಿಸಿ. ಸಾಧ್ಯವಾದಷ್ಟು ಸಂತೋಷವಾಗಿರಿ.
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ – ಬಿಸಿ ಆಹಾರವನ್ನು ಪ್ಲಾಸ್ಟಿಕ್ ಡಬ್ಬ ಅಥವಾ ಪಾತ್ರೆಗಳಲ್ಲಿ ಹಾಕುವುದು ಅಪಾಯಕಾರಿ. ಅವುಗಳ ಸೇವನೆ ಕ್ಯಾನ್ಸರ್‌ಗೆ ಕಾರಣವಾಗಬಹುದು. ಪ್ಲಾಸ್ಟಿಕ್ ಲೋಟ ಮತ್ತು ಬಾಟಲಿಗಳಲ್ಲಿ ನೀರು ಕುಡಿಯಬೇಡಿ.
ಜಾಗರೂಕರಾಗಿರಿ – ಕ್ಯಾನ್ಸರ್ ಬಗ್ಗೆ ಜಾಗೃತರಾಗಿದ್ದರೆ ಅದರ ಅಪಾಯವನ್ನು ತಪ್ಪಿಸಬಹುದು. ಈ ಮಾರಣಾಂತಿಕ ಕಾಯಿಲೆಯ ಅಪಾಯವನ್ನು ಹೆಚ್ಚಿಸುವ ಯಾವುದೇ ಕೆಲಸವನ್ನು ಮಾಡಬೇಡಿ.