
ಆರೋಗ್ಯವೇ ಭಾಗ್ಯ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇತ್ತೀಚೆಗೆ ಸವಾಲಿನ ಕೆಲಸವಾಗಿದೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಅವಶ್ಯಕ.
ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದಿಲ್ಲ. ಇದರ ಪರಿಣಾಮ ದೇಹ, ಮನಸ್ಸಿನ ಮೇಲೆ ಆಗುತ್ತದೆ. ದೇಹ ಮತ್ತು ಮನಸ್ಸು ಉತ್ತಮವಾಗಿರಲು ಕೆಲವು ಸರಳ ವ್ಯಾಯಾಮ ರೂಢಿಸಿಕೊಳ್ಳಿ. ನಿಮ್ಮ ಫಿಟ್ ನೆಸ್ ಕಾಯ್ದುಕೊಳ್ಳಿ. ಇತ್ತೀಚೆಗೆ ಯುವ ಜನತೆಗೆ ಫಿಟ್ ನೆಸ್ ಕಾಯ್ದುಕೊಳ್ಳುವುದು ಕಷ್ಟ ಸಧ್ಯವಾಗಿದೆ.
ಫಿಟ್ ನೆಸ್ ಗೆ ಹೆಚ್ಚಿನ ಒತ್ತು ನೀಡುವವರು ಒಂದು ಕಡೆಯಾದರೆ, ನಿರ್ಲಕ್ಷ್ಯ ತೋರುವವರು ಮತ್ತೊಂದು ಕಡೆ. ಮತ್ತೆ ಕೆಲವರು ಬೇಗನೆ ಸಣ್ಣಗಾಗಬೇಕೆಂದು ಶ್ರಮ ವಹಿಸಿ ಕಷ್ಟಪಟ್ಟು ವ್ಯಾಯಾಮ ಮಾಡುತ್ತಾರೆ. ದೇಹ ದಂಡಿಸುತ್ತಾರೆ. ಇದರ ಬದಲಿಗೆ ನಿತ್ಯವೂ ಸರಳ ವ್ಯಾಯಾಮ ಮಾಡಿ. ಜೀವನಶೈಲಿಯನ್ನು ಬದಲಿಸಿಕೊಳ್ಳಿ.
ಸರಳ ವ್ಯಾಯಾಮದೊಂದಿಗೆ ವಾಕ್ ಮಾಡುವುದರಿಂದ ಫಿಟ್ ನೆಸ್ ಕಾಯ್ದುಕೊಳ್ಳಬಹುದು. ನೀವು ಸೇವಿಸುವ ಆಹಾರದ ಮೇಲೆಯೂ ನಿಯಂತ್ರಣ ಇರಲಿ. ಇವೇ ಮೊದಲಾದ ಕ್ರಮಗಳನ್ನು ಅನುಸರಿಸಿದರೆ ಫಿಟ್ ಬಾಡಿ ನಿಮ್ಮದಾಗುತ್ತದೆ.