ನೀಳ ಉಗುರು ಹೊಂದಿರ ಬೇಕೆಂಬ ಬಯಕೆ ಬಹುತೇಕ ಎಲ್ಲಾ ಮಹಿಳೆಯರಿಗೂ ಇರುತ್ತದೆ. ಆದರೆ ಅಡುಗೆ ಮನೆಯ ಕೆಲಸ ಮಾಡುವ ವೇಳೆ ಅದು ತುಂಡಾಗಿ ಹೋಗುವುದೇ ಹೆಚ್ಚು. ನೀಳ ಉಗುರಿನ ಆರೋಗ್ಯ ಕಾಪಾಡಲು ಹೀಗೆ ಮಾಡಬಹುದು.
ದೇಹದಲ್ಲಿ ಕ್ಯಾಲ್ಸಿಯಂ ಅಂಶ ಹಾಗೂ ರಕ್ತಹೀನತೆ ಕಡಿಮೆಯಾದರೆ ಅದು ಉಗುರುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಸದಾ ತರಕಾರಿ, ಧಾನ್ಯ ಸೇರಿದಂತೆ ಉತ್ತಮ ಆಹಾರವನ್ನೇ ಸೇವಿಸಿ.
ಗಾರ್ಡನಿಂಗ್ ಕೆಲಸ ಅಥವಾ ಬೀಟ್ ರೂಟ್ ಸೇರಿದಂತೆ ಕೆಲವು ತರಕಾರಿಗಳನ್ನು ಹೆಚ್ಚಿದ ಬಳಿಕ ನಿಮ್ಮ ಕೈಯ ಬೆರಳು ಹಾಗೂ ಉಗುರುಗಳು ಕಪ್ಪಾಗಬಹುದು. ಅದಕ್ಕೆ ಲಿಂಬೆ ಹೋಳು ಮಾಡಿಕೊಂಡು ಉಗುರಿನ ಸುತ್ತಕ್ಕೆ ತಿಕ್ಕಿ. ದಿನಕ್ಕೊಮ್ಮೆ ಹೀಗೆ ಮಾಡುವುದರಿಂದ ಉಗುರು ಸ್ವಚ್ಛವಾಗಿರುತ್ತದೆ.
ಉಗುರು ಕತ್ತರಿಸಿದ ಬಳಿಕ ಕೈಗೆ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ. ನೈಲ್ ಪಾಲಿಶ್ ರಿಮೂವರ್ ಅನ್ನು ಅನಿವಾರ್ಯವಾದಾಗ ಮಾತ್ರ ಬಳಸಿ. ಇದು ಉಗುರಿನ ಮೇಲ್ಪದರವನ್ನು ಉಜ್ಜಿ ತೆಗೆಯುತ್ತದೆ. ಹಾಗಾಗಿ ಎಚ್ಚರವಿರಲಿ.