ಮಹಿಳೆಯರು ತಮ್ಮ ಸೌಂದರ್ಯಕ್ಕೆ ಕೊಡುವಷ್ಟೇ ಮಹತ್ವವನ್ನು ಪುರುಷರು ತಮ್ಮ ಬಾಹ್ಯ ನೋಟಕ್ಕೂ ಕೊಟ್ಟುಕೊಳ್ಳುತ್ತಾರೆ ಎಂಬುದು ನಮಗೆ ಬಹುತೇಕ ಮರೆತೇ ಹೋಗುತ್ತದೆ. ಅದರಲ್ಲೂ ಪುರುಷರು ತಮ್ಮ ಗಡ್ಡಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.
ಉದ್ದನೆಯ ಕಪ್ಪನೆಯ ಗಡ್ಡ ಬೆಳೆಸುವುದು ಇಂದಿನ ಟ್ರೆಂಡ್ ಕೂಡಾ ಅಗಿದೆ. ಬಿಯರ್ಡ್ ಬಾಮ್ ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅವುಗಳೆಂದರೆ.
ಬಿಯರ್ಡ್ ಬಾಮ್ ನಿಂದ ಗಡ್ಡ ಮೃದುವಾಗುತ್ತದೆ. ತುರಿಕೆ ಮುಂತಾದ ಸಮಸ್ಯೆಗಳು ಉಂಟಾಗುವುದಿಲ್ಲ. ಗಡ್ಡ ಒಣಗದಂತೆ ಇದು ಕಾಪಾಡುತ್ತದೆ ಮಾತ್ರವಲ್ಲ ಇದರ ಹೊಳಪನ್ನು ಹೆಚ್ಚಿಸುತ್ತದೆ. ಇದರಲ್ಲಿ ಶಿಯಾ ಬಟರ್ ಇರುವುದರಿಂದ ಗಡ್ಡದ ಬೆಳವಣಿಗೆಗೂ ಇದು ಸಹಕಾರಿ.
ಬಿಯರ್ಡ್ ಬಾಮ್ ಬಳಸುವ ಮುನ್ನ ನಿಮ್ಮ ಗಡ್ಡವನ್ನು ಸ್ವಚ್ಛವಾಗಿ ತೊಳೆಯಿರಿ. ನಂತರ ಟವೆಲ್ ನಿಂದ ಒರೆಸಿ ಒದ್ದೆ ಪಸೆ ಇದ್ದರೆ ತೆಗೆಯಿರಿ. ಬಳಿಕ ಗಡ್ಡವನ್ನು ಬಾಚಿ ಸೆಟ್ ಮಾಡಿಕೊಳ್ಳಿ.
ಈಗ ಅದನ್ನು ತೆಗೆದು ನಿಮ್ಮ ಅಂಗೈಗೆ ಹಾಕಿ ಉಜ್ಜಿ. ಅದು ಎಣ್ಣೆ ರೂಪಕ್ಕೆ ಬರುತ್ತಲೇ ನಿಮ್ಮ ಗಡ್ಡದ ಮೇಲೆ ಸವರಿ. ಕೂದಲ ತುದಿಯಿಂದ ಬುಡದವರೆಗೆ ಹಾಗೆಯೇ ಮಾಡಿ. ಕೊನೆಗೆ ಮತ್ತೊಮ್ಮೆ ಗಡ್ಡವನ್ನು ಬಾಚಿ ಸೆಟ್ ಮಾಡಿಕೊಂಡರೆ ಕೂದಲು ಆಕರ್ಷಕವಾಗಿ ಕಾಣುತ್ತದೆ.
ಗಡ್ಡಕ್ಕೆ ತುಸುವೇ ಬಾಮ್ ತೆಗೆದು ಹಾಕಿ. ಇದನ್ನು ತೆಗೆಯಲು ತೋರು ಬೆರಳು ಬಳಸಿದರೆ ಸಾಕು. ಅಂಗೈಗೆ ಹಾಕಿ ಉಜ್ಜಿದ ಬಳಿಕವೇ ಹಚ್ಚಿಕೊಳ್ಳಿ.